ಶ್ರೀಧರ ಗೌಡರ ಪಿ.ಎಚ್.ಡಿ ಪದವಿಗೆ ಭಾಜನ.
ಕೂಡಲ ಸಂಗಮ ಜನೇವರಿ.7

ಕೂಡಲ ಸಂಗಮದ ಸಕಾ೯ರಿ ಪ್ರೌಡಶಾಲೆಯ ಶಿಕ್ಷಕರಾದ ಶ್ರೀಧರ ಗಂಗನಗೌಡ ಗೌಡರಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ವಿಜಯಪುರದ ಮಾನ್ಯತಾ ಸಂಸ್ಥೆಯಾದ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಮಾಗ೯ ದಶ೯ಕರಾದ ಸಿಂದಗಿಯ ಜಿ.ಪಿ.ಪೋರವಾಲ್ ಕಲಾ ವಾಣಿಜ್ಯ ಹಾಗೂ ವ್ಹಿ.ವ್ಹಿ. ಸಾಲಿಮಠ ವಿಜ್ಞಾನ ಮಹಾ ವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಮಾ ಎಸ್. ನಿಣಿ೯ ಇವರ ಮಾಗ೯ ದಶ೯ನದಲ್ಲಿ ” ತೊಂಟದಾಯ೯ ಮಠದ ಸಮಾಜ ಮುಖಿ ಚಳುವಳಿಗಳು: ವಿಶ್ಲೇಷಣಾತ್ಮಕ ಅಧ್ಯಯನ ” ವಿಷಯದ ಕುರಿತು ಪ್ರಬಂಧ ಮಂಡನೆ ಮಾಡಿ ಪಿ.ಎಚ್.ಡಿ ಪದವಿಗೆ ಭಾಜನರಾದ ಇವರಿಗೆ ಬಸವ ಧರ್ಮ ಪೀಠದ ಉಪಾಧ್ಯಕ್ಷರಾದ ಪೂಜ್ಯಶ್ರೀ ಮಹದೇಶ್ವರ ಸ್ವಾಮಿಜಿ , ಕುಟುಂಬ ವರ್ಗ, ಸ್ನೇಹಿತರು, ವಿಜಯಪುರ ಮಾನ್ಯಾತಾ ಕೇಂದ್ರದ ಕಾರ್ಯ ದಶಿ೯ಗಳಾದ ಡಾ.ಎಂ.ಎಸ್. ಮಧಬಾವಿ, ಸಂಯೋಜ ನಾಧಿಕಾರಿಗಳಾದ ಡಾ.ವಿ.ಡಿ.ಐಹೊಳ್ಳಿ, ಕೂಡಲ ಸಂಗಮದ ಸಕಾ೯ರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀ ಸಿ.ಎಸ್.ಚಟ್ಟೇರ ಹಾಗೂ ಸಿಬ್ಬಂದಿ ವರ್ಗ ಹಾಗೂ ಹಿರೇ ಓತಗೇರಿಯ ಸಕಾ೯ರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀ ಪಿ.ಎಚ್.ಹುನಗುಂದ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಅಭಿನಂಧನೆ ಸಲ್ಲಿಸಿದ್ದಾರೆ.