ಕಾಂಗ್ರೆಸ್ ನೂತನ ಸರ್ಕಾರ ರಚನೆಯಲ್ಲಿ ಎನ್.ಟಿ.ಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡಲು ಬೆಂಬಲಿಗರ ಒತ್ತಾಯ.
ಕೂಡ್ಲಿಗಿ ಮೇ.15

ಕೂಡ್ಲಿಗಿ ಕರ್ನಾಟಕ ರಾಜ್ಯದಲ್ಲಿ ಅತೀಹೆಚ್ಚು ಮತಗಳ ಅಂತರದ ಗೆಲುವಿನ ದಾಖಲೆಯಲ್ಲಿ 11ನೇ ಸ್ಥಾನದಲ್ಲಿರುವ ಮತ್ತು ಕೂಡ್ಲಿಗಿ ಕ್ಷೇತ್ರದ ಇತಿಹಾಸದಲ್ಲೇ 54, 350 ಮತಗಳ ಅಭೂತಪೂರ್ವ ಅಂತರದ ಐತಿಹಾಸಿಕ ದಾಖಲೆ ಗೆಲುವು ಪಡೆದ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನೂತನ ಶಾಸಕ ಡಾ ಶ್ರೀನಿವಾಸ ಎನ್ ಟಿ ಇವರಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಕಾಂಗ್ರೇಸ್ ಸರ್ಕಾರ ಸಚಿವ ಸ್ಥಾನ ನೀಡುವಂತೆ ಅಭಿಮಾನಿ ಬಳಗ ಮನವಿ ಮಾಡಿದೆ. ವಿಜಯನಗರ ನೂತನ ಜಿಲ್ಲೆಯಾದ ನಂತರ ಪ್ರಥಮ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದ ಡಾ. ಶ್ರೀನಿವಾಸ ಅವರು ಕ್ಷೇತ್ರದ ಇತಿಹಾಸದಲ್ಲೇ ಕೇಳರಿಯದ ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಅಲ್ಲದೆ ಜಿಲ್ಲೆಯಲ್ಲಿಯೂ ಪ್ರಥಮರಾಗಿ ಹಾಗೂ ರಾಜ್ಯದ ಅತ್ಯಧಿಕ ಅಂತರದ ಗೆಲುವಿನ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಡಾ ಶ್ರೀನಿವಾಸ ಅವರ ಶಿಕ್ಷಣ, ವ್ಯಕ್ತಿ ವ್ಯಕ್ತಿತ್ವ, ಕಾಂಗ್ರೇಸ್ ಪಕ್ಷದಿಂದ ಎರಡು ಬಾರಿ ಇವರ ತಂದೆ ಎನ್ ಟಿ ಬೊಮ್ಮಣ್ಣಗೆದ್ದಿದ್ದರು ಅವರು ಅಂದು ಸಚಿವ ಸ್ಥಾನ ಪಡೆದುಕೊಂಡಿರಲಿಲ್ಲ. ತಂದೆಯ ಜೊತೆಯಲ್ಲಿನ ರಾಜಕೀಯ ಅನುಭವವಿರುವ ಡಾ ಶ್ರೀನಿವಾಸ ಅವರಿಗೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಈ ಬಾರಿಯ ನೂತನ ಕಾಂಗ್ರೇಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಕೂಡ್ಲಿಗಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೆಕ್ಕಲ್ ಚಂದ್ರಪ್ಪ ಅಸಂಘಟಿತ ತಾಲೂಕು ಅಧ್ಯಕ್ಷರು ಹಾಗೂ ರಮೇಶ್ ಎಚ್ ಮಾಜಿ ಸೈನಿಕರು, ಡಿಎಸ್ ವೀರೇಶ್ ಕುಪ್ಪನಕೆರೆ, ಅಸಂಘಟಿತ ಕಾರ್ಮಿಕರ ಜಿಲ್ಲಾ ಉಪಾಧ್ಯಕ್ಷ ಎಸ್ ಎಮ್ ಮಹೇಂದ್ರ, ಕೃಷ್ಣಪ್ಪ ಈಚಲ ಬೊಮ್ಮನಹಳ್ಳಿ, ಜಿ. ಪಕ್ಕೀರಪ್ಪ, ನಾಗರಾಜ ಬಿ, ಟಿ ಸುಪುತ್ರ, ಸುರೇಶ ಡಿಎಸ್, ಸಿದ್ದೇಶ್ ಡಿಎಸ್, ರಾಘವೇಂದ್ರ ಪಿ, ಡಿ ಪ್ರಕಾಶ್, ಹನುಮಂತಪ್ಪ, ಗೋಪ್ಪಲ್ ಬಸವರಾಜ್, ಟಿ ಸುರೇಶ್, ಆರ್ ಮರುಳು ಸಿದ್ದಪ್ಪ, ಸಿಪಿ ಗಂಗಾಧರ, ಎನ್ ಮಹೇಂದ್ರ, ಊರ ಮುಂದಿನ ಕಲ್ಲಪ್ಪ, ಎನ್ ಮಾಂತೇಶ, ಕೃಷ್ಣಪ್ಪ, ಬಿ ಮಹಾಂತೇಶ್, ಎನ್ ಕೊಟ್ರೇಶ್ ಹಾಗೂ ಇತರೆ ಅಭಿಮಾನಿ ಬಳಗ ಕಾಂಗ್ರೇಸ್ ವರಿಷ್ಟರಲ್ಲಿ ಡಾ. ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನಿ. ಕೂಡ್ಲಿಗಿ