ನೂತನ ನೌಕರರ ಸಂಘದ ನಿರ್ದೇಶಕರಿಗೆ – ಪ್ರಮಾಣ ಪತ್ರ ವಿತರಣೆ.
ಕೊಟ್ಟೂರು ನ.05

ಕೊಟ್ಟೂರಿನ ಸರ್ಕಾರಿ ನೌಕರರ ಸಂಘಕ್ಕೆ 2024-2029 ನೇ. ಅವಧಿಗೆ ನಡೆದ ನಿರ್ದೇಶಕರ 20 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 15 ಸ್ಥಾನಗಳಿಗೆ ಅವಿರೋಧವಾಗಿ ಹಾಗೂ 5 ಸ್ಥಾನಗಳಿಗೆ ಚುನಾವಣೆ ಮೂಲಕ ಆಯ್ಕೆ ಯಾಗಿರುತ್ತಾರೆ. ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಪ್ರಮಾಣಗಳನ್ನು ವಿತರಣೆ ಮಾಡಿ ಸಂಘದಿಂದ ಸನ್ಮಾನಿಸಲಾಯಿತು. ಈ ಸಮಯದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳಾದ ರೇವಣ್ಣ ಇವರು ಮಾತನಾಡಿ ಯಾವುದೇ ಸಂಘರ್ಷ ವಿಲ್ಲದೇ ಶಾಂತಿಯುತವಾಗಿ ಚುನಾವಣೆಗೆ ಸಹಕರಿಸಿರುತ್ತೀರಿ. ನೂತನವಾಗಿ ಚುನಾಯಿತರಾದ ನಿರ್ದೇಶಕರು ಕೊಟ್ಟೂರು ತಾಲೂಕಿನಲ್ಲಿ ಇನ್ನೂ ಅನೇಕ ಕಛೇರಿಗಳು ಪ್ರಾರಂಭ ವಾಗಿರುವುದಿಲ್ಲ. ತಾವೆಲ್ಲೂ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಎಲ್ಲಾ ಇಲಾಖೆಗಳು ಪ್ರಾರಂಭ ವಾಗುವಂತೆ ಪ್ರಯತ್ನಿಸ ಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ತಹಶೀಲ್ದಾರರಾದ ಅಮರೇಶ ಜಿ.ಕೆ ಇವರು ತಾವೆಲ್ಲರೂ ಬೇರೆ ಬೇರೆ ಇಲಾಖೆಯಿಂದ ಆಯ್ಕೆಯಾಗಿ ಬಂದಿದ್ದರೂ ಎಲ್ಲರೂ ಸ್ನೇಹಯುತವಾಗಿ ಸಂಘದಲ್ಲಿದ್ದು, ನೌಕರರ ಶ್ರೇಯೋಭಿವೃದ್ದಿಗೆ ಶ್ರಮಿಸ ಬೇಕೆಂದು ಶುಭ ಕೋರುತ್ತಾ ಪ್ರಮಾಣ ಪತ್ರವನ್ನು ನೀಡಿದರು. 2019-2024 ರ ವರೆಗೆ ಕರ್ತವ್ಯ ನಿರ್ವಹಿಸಿದ ಸಂಘದ ಅಧ್ಯಕ್ಷರಾದ ಜಗದೀಶ.ಕೆ, ಖಜಾಂಚಿ-ಬಸವರಾಜ ಹಾಗೂ ಕಾರ್ಯದರ್ಶಿ- ಸಿದ್ದಪ್ಪ ಜಿ ಇವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಚುನಾವಣಾ ಅಧಿಕಾರಿಯಾದ ಸುರೇಶ್, ವಿವಿಧ ಇಲಾಖೆಯ ನೌಕರರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು