ತಾಲೂಕ ಬಿಜೆಪಿ ಮಂಡಲದ ಕಾರ್ಯದರ್ಶಿಯಾಗಿ ಕುಲುಮೆಹಟ್ಟಿ ವೆಂಕಟೇಶ್ ಆಯ್ಕೆ.
ಕುಲುಮೆಹಟ್ಟಿ ಮಾರ್ಚ್.19

ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಕುಲುಮೆಹಟ್ಟಿ ವೆಂಕಟೇಶ್ ಬಿಜೆಪಿ ಮುಖಂಡರು, ಸಮಾಜ ಸೇವಕರು ಇವರನ್ನು ಕೂಡ್ಲಿಗಿ ತಾಲೂಕು ಬಿಜೆಪಿ ಮಂಡಲದ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ರಾಜ್ಯ ಎಸ್.ಟಿ ಮೋರ್ಚಾ ಅಧ್ಯಕ್ಷರಾದ ಬಂಗಾರ ಹನುಮಂತು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಪಾಟೀಲ್, ತಾಲೂಕು ಮಂಡಲ ಅಧ್ಯಕ್ಷರು ಕೆ ನಾಗರಾಜ್ ಹಾಗೂ ಸೂರ್ಯ ಪಾಪಣ್ಣ ಇವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ವೇಳೆ ನೂತನ ತಾಲೂಕು ಬಿಜೆಪಿ ಮಂಡಲದ ಕಾರ್ಯದರ್ಶಿ ಕುಲುಮೆಹಟ್ಟಿ ವೆಂಕಟೇಶ್ ಮಾತನಾಡಿ ಭಾರತೀಯ ಜನತಾ ಪಾರ್ಟಿಯ ಮುಖಂಡರ ಹಾದಿಯಲ್ಲಿಯೇ ಮುಂದೆ ಸಾಗಿ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳ ಮಟ್ಟದಲ್ಲಿ ಸದೃಡಗೊಳಿಸುತ್ತಾ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ, ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದು ಹೇಳಿದರು. ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ