ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಶ್ರಾವಣ ಮಾಸದ ಸಮಾಪ್ತಿ – ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಕಲಬುರಗಿ ಆ.27





ನಗರದ ಸೈಯದ್ ಚಿಂಚೋಳಿ ಕ್ರಾಸ್ ಶಿವಶಕ್ತಿ ನಗರದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ದೇವಸ್ಥಾನದಲ್ಲಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಹಡಪದ ಅಪ್ಪಣ್ಣ ಮಂದಿರದಲ್ಲಿ ಮಂಗಳವಾರ ದಿನದಂದು ಭಕ್ತಿ ಶ್ರದ್ಧೆಯಿಂದ ಮತ್ತು ನಿಷ್ಠೆಯಿಂದ ಶ್ರಾವಣ ಮಾಸದ ಸಮಾಪ್ತಿ ಹಾಗೂ ನಿಜಸುಖಿ ಹಡಪದ ಅಪ್ಪಣ್ಣ ನವರ ಮೂರ್ತಿಯ ಭೀಲ್ವಾರ್ಚನೆ ಪೂಜೆ ಮಂತ್ರ ಪಠಣ ಮತ್ತು ಮಹಾ ಪ್ರಸಾದ ಆಯೋಜನೆ ಮಾಡಲಾಗಿತ್ತು. ಬೆಳಿಗ್ಗೆ ಪೂಜೆ ಅಭಿಷೇಕ ಹಾಗೂ ಮಹಾ ಮಂಗಳಾರತಿ. ಮತ್ತು ವಚನ ಪಠಣ ಕಾರ್ಯಕ್ರಮಗಳು ಅರ್ಥ ಪೂರ್ಣವಾಗಿ ಜರುಗಿದವು.
ಸುಮಾರು ಒಂದು ತಿಂಗಳುಗಳ ಕಾಲ ಶ್ರಾವಣ ಮಾಸದ ಸಮಾಪ್ತಿ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಪದಾಧಿಕಾರಿಗಳ ವತಿಯಿಂದ ಭಜನೆ ಸಂಗೀತ ಆಯೋಜನೆ ಮಾಡಲಾಗಿತ್ತು. ಈ ನಿಮಿತ್ಯ ಮಂಗಳವಾರ ಶರಣ ಹಡಪದ ಅಪ್ಪಣ್ಣ ನವರ ಮೂರ್ತಿಯನ್ನು ಸಕಲ ಪತ್ರೆ ಫಲ ಪುಷ್ಪಗಳಿಂದ ಅಲಂಕರಿಸಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಪದಾಧಿಕಾರಿಗಳು ಭಕ್ತಿಯಿಂದ ಪೂಜೆ ನೆರವೇರಿಸಿದರು. ನಾನಾ ತರಹದ ಉಡುಗೆಗಳನ್ನುಟ್ಟು ಪೂಜೆ ಸಲ್ಲಿಸಿದರು. ಪ್ರಥಮ ವರ್ಷವೂ ಬಸವಪ್ರೀಯ ಸೇವಾ ಸಮೃದ್ಧಿ ಸಂಘದ ವತಿಯಿಂದ ಮಹಾ ಪೂಜೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನರು ಹುಗ್ಗಿ ಅನ್ನ ಸಾಂಬಾರು ಸವಿದು ಪುನೀತರಾದರು. ಇದೇ ವೇಳೆ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷರು ಈರಣ್ಣ.ಸಿ ಹಡಪದ ಸಣ್ಣೂರ. ಗೌರವಾಧ್ಯಕ್ಷರು ಬಸವರಾಜ ಸುಗೂರ ಎನ್, ಕಾರ್ಯಾಧ್ಯಕ್ಷರು ಭಗವಂತ ಸಹ ಶಿಕ್ಷಕರು ಕಿರಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಮತ್ತು ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ ಹಾಗೂ ಮಹಾಂತೇಶ ಇಸ್ಲಾಂಪೂರೆ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಜಿಲ್ಲಾ ಸಹ ಸಂ ಕಾರ್ಯದರ್ಶಿ ಸಂತೋಷ ಬಗದುರಿ, ಜಿಲ್ಲಾ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಬನ್ನೂರ,ಮತ್ತು ಶಿವಶರಣಪ್ಪ ಮಾಸ್ತರ ಯಳವಂತಗಿ.ಸುಭಾಷ್ ಚಂದ್ರ ಕರಾಹರಿ. ಸಂಜೀವಕುಮಾರ ಬೆಳಮಗಿ, ರಮೇಶ್ ಹಡಪದ ಕರಾಹರಿ. ಸಂತೋಷ ಹಡಪದ ಮಡಕಿ, ಕಲಬುರಗಿ ಜಿಲ್ಲೆಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಡಪದ ತೊನಸನಹಳ್ಳಿ, ವಿನೋದ ಹಡಪದ ಅಂಬಲಗಾ, ಮಂಜುನಾಥ ಹಡಪದ ಅವರಾದ, ಕಂಠು ಹಡಪದ ಕಲಬುರಗಿ, ವಿನೋದ ಹಡಪದ. ಶಿವಕುಮಾರ್ ಖೇಳಗಿ, ಬಸವರಾಜ ಅತನೂರ.ನೀಲಕಂಠ ರಾವ್ ಹಡಪದ ಕಂದಗೋಳ. ರಮೇಶ್ ಕವಲಗಾ. ಗಂಗಾಧರ್ ಹಡಪದ ಬಿದ್ದಾಪೂರ. ಮಲ್ಲಿಕಾರ್ಜುನ ಹಡಪದ ಬಗದುರಿ ಮತ್ತು ಸಮಾಜದ ನೂರಾರು ಮಹಿಳಾ ತಾಯಂದಿರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಗೀತ ಸೇವೆ ಸುಧಾಕರ ಹಡಪದ ಸಂಗೋಳಗಿ ಹಾಗೂ ಭಗವಂತ ಸಹ ಶಿಕ್ಷಕರು ಹೊನ್ನಕಿರಣಗಿ ಹಾಗೂ ಅವರ ತಂಡದ ನೇತೃತ್ವದಲ್ಲಿ ಭಜನೆ ಕಾರ್ಯಕ್ರಮ ಜರುಗಿತು. ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಅವರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ.