ಮಹಿಳೆಯರಿಗೆ ಅಕ್ಷರ ಕಲಿಸಿದ್ದು ಸಾವಿತ್ರಿಬಾಯಿ ಫುಲೆ – ಎಂ.ವಿ ಭವಾನಿ.
ಚಿಕ್ಕಮಗಳೂರು ಡಿ.27

ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿ ಬಾಯಿಫುಲೆ ಎಂದು ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕಿ ಎಂ.ವಿ ಭವಾನಿ ಹೇಳಿದರು. ಅವರು ಗುರುವಾರ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಪುರುಷ ಪ್ರಧಾನ ರಾಷ್ಟ್ರದಲ್ಲಿ ಅನೇಕ ಅವಮಾನ ಅಪಹಾಸ್ಯಕ್ಕೆ ಗುರಿಯಾದರೂ ಸಹ ಎಲ್ಲಾ ನೋವುಗಳನ್ನು ಅನುಭವಿಸುತ್ತಾ ಮಹಿಳೆಯರಿಗೆ ಅಕ್ಷರ ಕಲಿಸಿ ಶಿಕ್ಷಣ ನೀಡಿದವರು ಮಾತೆ ಸಾವಿತ್ರಿಬಾಯಿ ಫುಲೆ. ನಾವೆಲ್ಲರೂ ಸರಸ್ವತಿ ಪೂಜೆ ಮಾಡುವುದಕ್ಕಿಂತ ಅಕ್ಷರ ಕಲಿಸಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಮಾಡೋಣ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಹಿಳಾ ಬಂಧುತ್ವ ಸಂಘಟನೆ ಕುರಿತು ತರಬೇತಿ ಪಡೆದಿರುವ ಜಿಲ್ಲೆಯ ಎಲ್ಲಾ ತಾಲೂಕುಗಳ ಹಾಗೂ ನೂತನ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಮೂಡಿಗೆರೆ ತಾಲ್ಲೂಕು ಸಂಚಾಲಕರಾಗಿ ಕೋಮಲ, ಚಿಕ್ಕಮಗಳೂರು ತಾಲೂಕು ಸಂಚಾಲಕರಾಗಿ ಎಚ್.ಆರ್ ಸವಿತಾ ಆಲ್ದೂರು, ಕಡೂರು ತಾಲೂಕು ಸಂಚಾಲಕರಾಗಿ ಶೋಭಾ, ಸಹ ಸಂಚಾಲಕರಾಗಿ ಪ್ರಿಯಾಂಕ, ಕಸಬಾ ಹೋಬಳಿ ಸಂಚಾಲಕರಾಗಿ ಸರಸ್ವತಿ, ಅಜ್ಜಂಪುರ ತಾಲೂಕು ಸಂಚಾಲಕಿಯಾಗಿ ಪಲ್ಲವಿ, ಕೊಪ್ಪ ತಾಲೂಕು ಸಂಚಾಲಕಿಯಾಗಿ ಸವಿತಾ ಟಿ, ಕಳಸ ತಾಲೂಕು ಸಂಚಾಲಕಿಯಾಗಿ ಪ್ರೇಮ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಪರಶುರಾಮ್ ಮಾತನಾಡಿ, ಮಹಿಳೆಯರು ಮೌಢ್ಯತೆಯಿಂದ ಹೊರ ಬರಬೇಕು ಸಂಘಟಿತರಾಗಿ ಕಾನೂನು ಅರಿವು ತಿಳಿಯಬೇಕು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಹೇಳಿದರು. ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು