ಅರಣ್ಯದಲ್ಲಿ ಕುರಿಗೆ ಪ್ರವೇಶ ಕಲ್ಪಿಸಿ ಹಾಗೂ ಜಾನುವಾರುಗಳಿಗೆ ಔಷಧಿ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿ – ರಸ್ತೆ ಉದ್ದಕ್ಕೂ ಕುರಿಗಳೊಂದಿಗೆ ಪ್ರತಿಭಟನೆ.
ಕೊಟ್ಟೂರು ಆ.26

ಪಟ್ಟಣದ ಸುತ್ತ ಮುತ್ತಲಿನ ಕುರಿ ಕಾಯುವವರ ಸಮಸ್ಯೆ ಕುರಿತು ಸರ್ಕಾರಕ್ಕೆ ಮನವಿ. ಸರ್ಕಾರವು ಅರಣ್ಯ ಪ್ರದೇಶಗಳಲ್ಲಿ ಕುರಿ ಗಾಯಿಗಳಿಗೆ ಕುರಿ ಮೇಯಿಸುವ ಅವಕಾಶ ಹಾಗೂ ಜಾನುವಾರುಗಳಿಗೆ ಉಚಿತ ಔಷಧಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮಂಗಳವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಈರುಳ್ಳಿ ಬೆಳೆಗಾರರ ಜಿಲ್ಲಾಧ್ಯಕ್ಷರಾದ ಅಲಬೂರು ಮಂಜುನಾಥ ರವರು ಕುರಿಗಾಯಿಗಳ ಸಮಸ್ಯೆ ವಿಪರೀತವಾಗಿದ್ದು. ಕುರಿಗಳನ್ನು ಅರಣ್ಯದಲ್ಲಿ ಮೇಯಿಸಲು ಬಿಟ್ಟರೆ ಅರಣ್ಯ ಅಧಿಕಾರಿಗಳು ದೌರ್ಜನ್ಯದಿಂದ ವರ್ತಿಸುತ್ತಾರೆ ಮತ್ತು ಕುರಿಗಾಯಿಗಳ ಮೇಲೆ ಕೇಸ್ ದಾಖಲಿಸುತ್ತಾರೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಸರ್ಕಾರವು ಅರಣ್ಯದಲ್ಲಿ ಕುರಿ ಮೇಯಿಸಲು ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.
ಈ ಸರ್ಕಾರವು ಕುರಿ ಗಾಯಿಗಳ ಸಮಸ್ಯೆಯನ್ನು ಆಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಕೆಲವೊಂದು ಅರಣ್ಯ ಪ್ರದೇಶಗಳಲ್ಲಿ ಕುರಿಗಳನ್ನು ಭಯ ಬೀಳಿಸುವ ಸಲುವಾಗಿ ಚಿರತೆ ಬಿಟ್ಟು ಕುರಿಗಳನ್ನು ನಾಶ ಪಡಿಸುವ ವ್ಯವಸ್ಥೆ ನಿರ್ಮಾಣ ಮಾಡುತ್ತಿದ್ದಾರೆ ಇದನ್ನು ಅರಣ್ಯ ಸಚಿವರು ಗಂಭೀರವಾಗಿ ಪರಿಶೀಲಿಸ ಬೇಕಾಗಿದೆ ಮತ್ತು ಜಾನುವಾರುಗಳಿಗೆ ಸರಿಯಾದ ಔಷಧಿ ಇಲ್ಲದೆ ಹಲವಾರು ಸಮಸ್ಯೆಗೆ ಈಡಾಗಿವೆ ಕುರಿ ಗಾಯಿಗಳು ಸೌಲಭ್ಯ ವಂಚಿತರಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ ಸರ್ಕಾರ ಇವರ ಸಮಸ್ಯೆಗಳನ್ನ ಆಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ನಡೆಸ ಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕ ಪ್ರಧಾನ ಕಾರ್ಯದರ್ಶಿ ಗುಡಿಯರ್ ಮಲ್ಲಿಕಾರ್ಜುನ್ ಮಾತನಾಡಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮೂಗಪ್ಪ ನವರು ಮಾತನಾಡಿದರು.

ನಂತರ ಮಾನ್ಯ ತಹಶೀಲ್ದಾರ್ ಜಿ. ಅಮರೇಶ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಎಸ್ ತಾಲೂಕ ಅಧ್ಯಕ್ಷ ಪಿ.ಚಂದ್ರಶೇಖರ್, ಗಣೇಶ್, ಡಿ.ಕೊಟ್ರೇಶ್, ಪರುಸಪ್ಪ, ಬಾಲಗಂಗಾಧರ್, ರೇವಪ್ಪ, ಬಸಪ್ಪ, ಉಮೇಶ್, ಕೆಂಚಪ್ಪ, ಮುಂತಾದವರು ಇದ್ದರು.
ಬಾಕ್ಸ್ ನ್ಯೂಸ್:-
ಈ ಪ್ರತಿಭಟನೆಯು ಬಸವೇಶ್ವರ ತೇರು ಬಯಲು ಮುಂಭಾಗದಿಂದ ಪ್ರಾರಂಭ ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾವಿರಾರು ಕುರಿಗಳೊಂದಿಗೆ ರಸ್ತೆಯನ್ನು ಬಂದ್ ಮಾಡುವ ಮೂಲಕ ಪ್ರಮುಖ ರಸ್ತೆಯ ಮಾರ್ಗವಾಗಿ ತಾಲೂಕು ಕಚೇರಿ ವರೆಗೆ ಸಾಗಿತು.ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿತ್ತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು