ಬೇಸಿಗೆ ಪ್ರಾರಂಭದಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು – ಪ್ರವೀಣ ನಾಯಿಕ ಆಗ್ರಹ.
ಮದಬಾವಿ ಫೆಬ್ರುವರಿ.14

ಬೆಳಗಾವಿ ಜಿಲ್ಲೆಯ ಕಾಗವಾಡ ಹಾಗೂ ಅಥಣಿ ಮತ ಕ್ಷೇತ್ರದ ಹಳ್ಳಿಗಳಿಗೆ ಬೇಸಿಗೆ ಪ್ರಾರಂಭದಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಪೂರಕವಾಗಿ ನೀರು ಪೂರೈಸುವ ಕ್ರಮ ಮುಂಚಿತವಾಗಿ ಕೈಗೊಳ್ಳಬೇಕು ಎಂದು ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರವೀಣ ನಾಯಿಕ ಅಗ್ರಹಿಸಿದ್ದಾರೆ.ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಕಾಗೆ ಮತ್ತು ಅಥಣಿ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿವರು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಬೇಸಿಗೆಯಲ್ಲಿ ಜನರಿಗೆ ತೊಂದರೆ ಆಗದಂತೆ ಪೂರಕವಾಗಿ ವ್ಯವಸ್ಥೆ ಮಾಡಿ ಕೊಳ್ಳಬೇಕು ಎಂದು ಖಡಕ ಎಚ್ಚರಿಕೆ ಈಗಾಗಲೇ ನೀಡಿದ್ದಾರೆ. ಮದಭಾವಿ ಗ್ರಾಮ ಪಂಚಾಯತಿಗೆ ಒಳಪಟ್ಟಿರುವ ಮದಭಾವಿ,ತೆವರಟ್ಟಿ ಗ್ರಾಮದಲ್ಲಿ ಕೊಳವೆ ಬಾವಿ ಜಲಕುಂಭ ಇದ್ದು ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ ಮತ್ತು ಕೊಳವೆ ಬಾವಿಗಳು ಪಂಪಸೆಟ ದುರಸ್ಥಿಗೆ ಒಳಪಟ್ಟಿವೆ ಇದರ ಬಗ್ಗೆ ಗಮನ ಹರಿಸಿ ನೀರು ಸರಬರಾಜು ಸರಿಯಾಗಿ ಆಗುವಂತೆ ಪಂಚಾಯತ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಜನರ ಹಾಗೂ ಜಾನುವಾರುಗಳ ಹಿತ ರಕ್ಷಣೆಗಾಗಿ ಗಮನ ಹರಿಸಬೇಕೆಂದು ಒತ್ತಾಯ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮದಭಾವಿ ತೆವರಟ್ಟಿ ಗ್ರಾಮದ ಮುಖಂಡರಾದ ಉಮೇಶ ಪಾಟೀಲ,ಸಿದರಾಯ ತೋಡಕರ,ಭೀಮಗೌಡ ನಾಯಿಕ,ಸಂತೋಷ ಪಾಟೀಲ, ಬಸಗೌಡ ಪಾಟೀಲ, ಸಂತೋಷ ನಾಯಿಕ,ಅಸ್ಲಾಂ ಮುಲ್ಲಾ,ಪರಗೊಂಡ ಮುದೋಳ, ಸುರೇಶ ನಾಯಿಕ, ಶರದ ಶೆಟ್ಟಿ, ತಾತ್ಯಾಸಾಬ ನಾಯಿಕ,ಸಿದ್ದು ಪಾಟೀಲ, ಮಹೇಶ ಅವಟಿ, ರಾಮು ಅವಟಿ, ಶಿವಾನಂದ ಅವಟಿ, ರಾಕೇಶ ಪಾಟೀಲ, ಸಾತಗೌಡ ಪಾಟೀಲ, ವಿಶ್ವನಾಥ ಭಂಡಾರೆ, ರಮೇಶ ಕಾಂಬಳೆ, ರಮೇಶ ಪಾಟೀಲ,ಸೇರಿದಂತೆ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಚಾನೆಲ್ ಕನ್ನಡ:ಎಂ.ಎಂ.ಶರ್ಮಾ.ಬೆಳಗಾವಿ