ಪಟ್ಟಣ ಪಂಚಾಯತಿಯಲ್ಲಿ ಹಿಂದೆ ನಡೆದಿರುವ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಲೆಕ್ಕ ಬುಕ್ಕುಗಳ ಬಗ್ಗೆ – ಚರ್ಚೆ ಮಾಡಿದ ಅಧ್ಯಕ್ಷರು.
ಮೊಳಕಾಲ್ಮುರು ಡಿ.01

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ದಂದು ಪ.ಪಂ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆದ ಪ.ಪಂ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಈ ಹಿಂದೆ ನಡೆದ ಖರ್ಚು, ವೆಚ್ಚಗಳ ಲೆಕ್ಕದ ವಿಷಯದ ಚರ್ಚೆಯು ಪ್ರಧಾನವಾಗಿದ್ದು ಕಂಡು ಬಂತು.ಪ.ಪಂ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾತನಾಡುತ್ತಾ, ಕೊಟೇಷನ್ ಇಲ್ಲಿ ಕಾಲ್ ಮಾಡಿದರೆ ಶಿವಮೊಗ್ಗದವರು ಟೆಂಡರ್ವಾರರಾಗಿ ಅಷ್ಟೆ ಮಾಡುತ್ತಾರೆ ಆಡಳಿತಾಧಿಕಾರಿ ಒಪ್ಪಿಗೆ ಪಡೆದಿಲ್ಲ. ಅನುದಾನ ನೀಡುವಾಗಲು ಆಡಳಿತಾಧಿಕಾರಿ ಒಪ್ಪಿಗೆ ಇರಲ್ಲ ಇದು ಇಲ್ಲಿನ ಪ.ಪಂ ಅಧಿಕಾರಿಗಳ ಆಡಳಿತ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಎಂದು ಖಡಕ್ಕಾಗಿಯೇ ಆರೋಪಿಸಿದರು. ಇದಕ್ಕುತ್ತರಿಸಲು ಮುಂದಾದ ಮುಖ್ಯಾಧಿಕಾರಿ ಪಿ.ಪಾಲಯ್ಯ ಮಾತನಾಡಿ, ತುರ್ತು ಸಮಯದಲ್ಲಿ ಕೆಲವೊಮ್ಮೆ ಅಧಿಕಾರಿಗಳೇ ತೀರ್ಮಾನ ಕೈಗೊಳ್ಳ ಬೇಕಾಗುತ್ತದೆ ಎನ್ನುತ್ತಿದಂತೆ ಮಧ್ಯ ಪ್ರವೇಶಿಸಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ. ನಾವು ಕೆಲಸ ಮಾಡಿದ್ದ ವಿಷಯದ ಬಗ್ಗೆ ಮಾತನಾಡುವುದಿಲ್ಲ, ನಿಮ್ಮ ಕೆಲಸ ನೀವು ತುರ್ತು ಸಮಯದಲ್ಲಿ ಮಾಡಿಸಿ ಆದರೆ ಇಲ್ಲಿ ಟೆಂಡರ್ ಕಾಲ್ ಮಾಡಿದರೆ ಅದು ಹೇಗೆ ಶಿವಮೊಗ್ಗದವರು ಟೆಂಡರ್ ಪಡೆದಿದ್ದಾರೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ ಎಂದರು.ಮಧ್ಯ ಪ್ರವೇಶಿಸಿದ ಸದಸ್ಯ ಎಂ.ಅಬ್ದುಲ್ಲಾ ಮಾತನಾಡಿ, ಇಲ್ಲಿಗೆ ಪೌಡರ್, ಲಿಕ್ವಿಡ್ ಸಪ್ಲೈ ಮಾಡುವ ಶಿವಮೊಗ್ಗ ದವರು ಪ.ಪಂ ಗೊಮ್ಮೆಯೂ ಬರದೆ ಹಾನಗಲ್ ಪ್ರವಾಸಿ ಮಂದಿರಕ್ಕೆ ಇಲ್ಲಿನ ಅಧಿಕಾರಿಗಳನ್ನು ಕರೆಸಿ ಕೊಂಡು ತಮಗಿಷ್ಟ ಬಂದ ಬಿಲ್ಗಳಿಗೆ ಸಹಿ ಪಡೆದು ಅಲ್ಲಿಂದಲೇ ವಾಪಾಸಾಗುತ್ತಾರೆ ಇದನ್ನು ನಾನು ಬಂದು ಕಂಡಿದ್ದೇನೆ ಎಂದು ಆರೋಪಿಸಿದರು ಎಂದು ವರದಿ ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು