ಸ್ವಾಮಿ ವಿವೇಕಾನಂದರ ಧೀರ ವೀರ ವ್ಯಕ್ತಿತ್ವ ಮಕ್ಕಳಿಗೆ ಆದರ್ಶವಾಗಲಿ – ಋತಿಕ್. ಯಕುಮಾರ್ ಅಭಿಮತ.
ಚಳ್ಳಕೆರೆ ಅ.10





ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಲ್ಲಿ ವ್ಯಕ್ತವಾಗುವ ವೀರ ಧೀರತನದ ನಡವಳಿಕೆಗಳು ಇಂದಿನ ಮಕ್ಕಳಿಗೆ ಆದರ್ಶವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಋತಿಕ್.ಕುಮಾರ್ ಹೇಳಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ವೀರ ನರೇಂದ್ರ” ಎಂಬ ಪುಸ್ತಕದ ಕುರಿತಾಗಿ ಉಪನ್ಯಾಸ ನೀಡಿದರು.

ಈ ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಅಮ್ಮಾ ಶಾರದಾಮಾತೆ ಪಠಣ ನಡೆದರೆ ಭಜನೆಯನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸುವ ಆಟವನ್ನು ಆಡಿಸಲಾಯಿತು. ಈ ಆಟದಲ್ಲಿ ಪ್ರಥಮ ಬಹುಮಾನ ಆರ್ಯ, ದ್ವಿತೀಯ ಬಹುಮಾನ ಸಾಯಿ ಸಮರ್ಥ್, ತೃತೀಯ ಬಹುಮಾನ ವಿವಿಕ್ತ ಮತ್ತು ಚಿರಾಣ್ಯ ಅವರು ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ಪಡೆದು ಕೊಂಡರು. ತರಗತಿಯಲ್ಲಿ ವೆಂಕಟಲಕ್ಷ್ಮೀ, ಸಂತೋಷ್, ಡಾ, ಭೂಮಿಕ, ಲಕ್ಷ್ಮೀ, ದವನ್, ಸಮರ್ಥ್, ಶ್ರೇಯಸ್ಸು, ಅಭಿರಾಮ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.