ಶೌಚಾಲಯ ಸ್ವಚ್ಛತೆ, ದೇಶದ ಸ್ವಚ್ಛತೆ – ಡಾ, ದೇವರಾಜ್.
ತರೀಕೆರೆ ನ.20

ಅಸಹ್ಯ ಪಡೆದೆ ಸ್ವಚ್ಛತೆ ಕೆಲಸ ಮಾಡುವ ಕೆಲಸಗಾರರಿಗೆ ಸನ್ಮಾನಿಸಿ ಗೌರವಿಸುವದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ಡಾ, ದೇವರಾಜ್ ಹೇಳಿದರು. ಅವರು ಇಂದು ಸಂಜೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ಶೌಚಾಲಯ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಶೋಷಣೆಯ ವಿರುದ್ಧ ಹೋರಾಡಲು ಡಿ.ಎಸ್.ಎಸ್ ವೆಂಕಟೇಶ್ ಇರುತ್ತಾರೆ ಇವರು ಜನರಲ್ಲಿ ಸಾಮಾಜಿಕವಾಗಿ ಸ್ವಚ್ಛತೆ ಕುರಿತು ಅರಿವು ಮೂಡಿಸುತ್ತಿದ್ದಾರೆ ಸ್ವಚ್ಛತೆಯ ಕೆಲಸ ಗೌರವಯುತವಾದದ್ದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಜಿಲ್ಲಾ ಮ್ಯಾನುವಲ್ ಸ್ಕ್ಯವೆಂಜರ್ಸ್ ಮತ್ತು ಸಪಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ಎನ್.ವೆಂಕಟೇಶ್ ಮಾತನಾಡುತ್ತಾ ಸೌಚಾಲಯವನ್ನು ಬಳಸಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ, ಸ್ವಚ್ಛತಾ ಕೆಲಸ ಮಾಡುವವರು ಸಮಾಜದ ಸಮುದಾಯದ ಆರೋಗ್ಯ ಕಾಪಾಡುತ್ತಿದ್ದಾರೆ ಅವರಿಗೆ ಅವರ ವೃತ್ತಿಗೆ ಗೌರವಿಸಬೇಕು. ಸರ್ಕಾರವು ಸಪಾಯಿ ಕರ್ಮಚಾರಿಗಳ ಮತ್ತು ಮಾನ್ಯುಯಲ್ ಸ್ಕ್ಯಾವೆಂಜರ್ ಗಳು ಅಭಿವೃದ್ಧಿಗೆ ಪುನರ್ವಸತಿ ಕಲ್ಪಿಸಲು ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿ ಕೊಂಡಿದೆ ಈ ಸವಲತ್ತುಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಉನ್ನತ ಸ್ಥಾನಮಾನ ಕಲ್ಪಿಸಬೇಕು ಎಂದು ಹೇಳಿದರು. ಡಾ, ನಾಗರಾಜ್, ಡಾ, ಸಂತೋಷ್ ಕುಮಾರ್, ಡಾ, ಭಾಗ್ಯಲಕ್ಷ್ಮಿ , ಉಪಸ್ಥಿತರಿದ್ದು. ನರ್ಸಿಂಗ್ ಸೂಪರ್ವೈಸರ್ ಶೇಶಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೆಲಸ ಮಾಡುವ ನೌಕರರನ್ನು ವೈದ್ಯಾಧಿಕಾರಿ ಡಾ, ದೇವರಾಜ್ ಸನ್ಮಾನಿಸಿ ಗೌರವಿಸಿದರು. ವಿಜಯಮ್ಮ ಪ್ರಾರ್ಥಿಸಿ, ಆಯುಷ್ಯ ಡಾ, ಶ್ರೀನಿವಾಸ್ ರವರು ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು.