ತ್ರಿವಿಧ ಲಿಂಗಗಳನ್ನು ಧರಿಸಿ ಕೊಳ್ಳಿ – ಶ್ರೀಶೈಲ ಜಗದ್ಗುರುಗಳು.
ಇಂಡಿ ಜನೇವರಿ.10

ಶರಣ ತತ್ವಗಳನ್ನು ಅಳವಡಿಸಿ ಕೊಂಡ ವೀರಶೈವ ಶರಣರು ತ್ರಿವಿಧ ಲಿಂಗಗಳನ್ನು ಧರಿಸಿ ಕೊಂಡು ಶಿವನ ಸಾಕ್ಷಾತ್ಕಾರಕ್ಕೆ ಪಾತ್ರರಾಗಿ ಎಂದು ಶ್ರೀಶೈಲ ಜಗದ್ಗುರು ಡಾ ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರು ಇಂಡಿ ಪಟ್ಟಣದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ಹಿರಿಯರಾದ ಪ್ರೊ ಎಂ ಜೆ ಪಾಟೀಲ ಅವರ ಮನೆಯ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಆಶೀರ್ವಚನ ರೂಪದಲ್ಲಿ ಮಾತನಾಡಿದರು. ಲಿಂಗಗಳಲ್ಲಿ ಮೂರು ವಿಧಗಳಿದ್ದು ಇಷ್ಟಲಿಂಗ , ಪ್ರಾಣಲಿಂಗ ಮತ್ತು ಭಾವಲಿಂಗ,ಗುರು ದೀಕ್ಷೆಯಲ್ಲಿ ಶೀಲೆಯನ್ನು ನಿರ್ಮಾಣ ಮಾಡುವ ಲಿಂಗವನ್ನು ಪರಿ ಶುದ್ಧಗೊಳಿಸಿ, ಅದರಲ್ಲಿ ಜೀವ ಕಳೆಯನ್ನು ಪ್ರತಿಷ್ಠಾಪಿಸಿ ಶಿವತ್ವದ ಮೂಲಕ ಜಾಗೃತಿ ಗೊಳಿಸುವುದೆ ಇಷ್ಟಲಿಂಗ ಯಾವುದನ್ನು ಬಹಿರಂಗವಾಗಿ ತೋರಿಸಿ ಕೊಳ್ಳಲು ಸಾಧ್ಯವಾಗದೆ ಸಾಧನೆಯ ಬಲದಿಂದ ಸಾಕ್ಷಾತ್ಕರಿಸಿ ಕೊಂಡು ಗುರುತಿಸುವುದೇ ಪ್ರಾಣ ಲಿಂಗ ಜ್ಯೋತಿ ಉತ್ಪನ್ನವು ಹೃದಯ ಕಮಲದಲ್ಲಿ ಬಂದು ನಿಂತು ಹೃದಯವು ಉರ್ದ್ವ ಮುಖವಾಗಿ ಸಹಸ್ರಾರು ಚಕ್ರದಲ್ಲಿ ಬಂದು ನಿಲ್ಲುವುದೇ ಭಾವಲಿಂಗ. ಯಾವುದನ್ನು ಕೇಳಿ ಕೊಂಡು ಬಿಡಬಾರದು.ಅಳವಡಿಸಿ ಕೊಂಡು,ಸಾಧಿಸಿ ತೋರಿಸ ಬೇಕು.ಸಾಧಿಸಿ ಕೊಂಡಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಸಾಧನೆಯ ಮೂಲಕ ಪ್ರತಿಯೊಂದನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕು.ಇದನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕಾದರೆ ಪ್ರತಿಯೊಬ್ಬರು ತ್ರಿವಿಧ ಲಿಂಗಗಳನ್ನು ಧರಿಸಿ ಕೊಂಡು ಕೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಇಂಡಿ ಪಟ್ಟಣದ ಬಿಜೆಪಿ ಧುರೀಣರಾದ ಕಾಸುಗೌಡ ಬಿರಾದಾರ,ವಿಶ್ರಾಂತ ಪ್ರಾಚಾರ್ಯರಾದ ಪ್ರೊ ಐ ಬಿ ಸುರಪುರ, ಪ್ರೊ ಎ ಎಸ್ ಗಾಣಿಗೇರ, ಪ್ರೊ ಎನ್ ವಿ ಹಂಜಗಿ,ಪ್ರೊ ಎಸ್ ಎಸ್ ಪಾಟೀಲ, ಜಿ ವಿ ಬಿರಾದಾರ, ಬಿಎಸ್ಎನ್ಎಲ್ ನೌಕರಸ್ಥರಾದ ಎಚ್ ಆರ್ ಬಿರಾದಾರ,ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ ಎಸ್ ಎಸ್ ಪಾಟೀಲ ಪ್ರ.ಕಾ.ಆರ್ ಎಸ್ ಪಾಟೀಲ,ಯುವ ಘಟಕದ ರಾಜ್ಯಾಧ್ಯಕ್ಷ ಸಂಗನಗೌಡ ಯಂಕಂಚಿ, ಬೆನಕನಹಳ್ಳಿ ಶಿವಾಶ್ರಮದ ಸಿದ್ದಯ್ಯ ಹಿರೇಮಠ,ಗ್ರಾ ಪಂ ಅಧ್ಯಕ್ಷ ಕಾಶಿನಾಥ ಹಚಡದ, ನಿವೃತ್ತ ಅಭಿಯಂತರ ಸಿ ಬಿ ಮಿಂಚನಾಳ,ಸಮಾಜದ ತಾಲೂಕ ಘಟಕದ ಅಧ್ಯಕ್ಷ ಆರ್ ವಿ ಪಾಟೀಲ ಜಿ ಎಸ್ ಪಾಟೀಲ,ಕೆ ಎಸ್ ಪಾಟೀಲ, ಬಿ ಜೆ ಪಾಟೀಲ, ಎಂ ಜೆ ಪಾಟೀಲ ಅವರ ಪುತ್ರರಾದ ಡಾ ಆರ್ ಎಂ ಪಾಟೀಲ, ಶ್ರೀಕಾಂತ ಪಾಟೀಲ ಅಳಿಯ ಶಿವನಗೌಡ ಪಾಟೀಲ, ಸಿ ಎಸ್ ಅವರಾದಿ ಹಾಗೂ ಎಸ್ ಎಸ್ ಅವರಾದಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ