ಮಕ್ಕಳ ದಿನಾಚರಣೆ ಆಚರಿಸಿದರು.
ರಾಂಪುರ ನವೆಂಬರ್.17

ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಶ್ರೀಮತಿ ಕನ್ನಾಕಟ್ಟಿ ಕೊಟ್ರಮ್ಮ ಸಿದ್ದಲಿಂಗಪ್ಪ ಟ್ರಸ್ಟ್ (ರಿ) ರಾಂಪುರ ಇದರ ಅಡಿಯಲ್ಲಿ ನಡೆಯುತ್ತಿರುವ ಜ್ಞಾನ ತುಂಗಾ ಹಿರಿಯ ಪ್ರಾಥಮಿಕ ಶಾಲೆ ರಾಂಪುರದಲ್ಲಿ ಮಕ್ಕಳ ದಿನಾಚರಣೆಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳೇ ವೇದಿಕೆಯನ್ನು ಅಲಂಕರಿಸಿದ್ದು ಆಕರ್ಷಣೀಯವಾಗಿತ್ತು. ಕಾರ್ಯಕ್ರಮದ ವೇದಿಕೆಯನ್ನು ಮೊದಲನೆಯ ಸಂಕಲನಾತ್ಮಕ ಪರೀಕ್ಷೆಯಲ್ಲಿ ತರಗತಿವಾರು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ವೇದಿಕೆಯನ್ನು ಅಲಂಕರಿಸುವ ಮಾನ ದಂಡವನ್ನಾಗಿ ಮಾಡಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು 6ನೇ ತರಗತಿ ವಿದ್ಯಾರ್ಥಿ ಪಿ.ನವೀನ್ ಕುಮಾರ್, ಮುಖ್ಯ ಅತಿಥಿ ಸ್ಥಾನವನ್ನು 7ನೇ ತರಗತಿ ವಿದ್ಯಾರ್ಥಿನಿ ಅನುಷಾ ಕೆ ಪಾಟೀಲ್, ಅತಿಥಿ ಸ್ಥಾನಗಳನ್ನು 5ನೇ ತರಗತಿ ವಿದ್ಯಾರ್ಥಿ ಎಂ ಉಮೇಶ ಹಾಗೂ ಜಿ ಹರ್ಷಿತಾ, 4 ನೇ ತರಗತಿ ವಿದ್ಯಾರ್ಥಿನಿ ಎಂ ವಿಧ್ಯಾ, 3 ನೇ ತರಗತಿ ವಿದ್ಯಾರ್ಥಿ ಯು.ಪ್ರಥಮ್, 2ನೇ ತರಗತಿ ವಿದ್ಯಾರ್ಥಿನಿ ಬಿ ದೇವಿಕಾ, 1ನೇ ತರಗತಿ ವಿದ್ಯಾರ್ಥಿ ಮಹಮದ್ ರಯಾನ್, ಯು ಕೆ ಜಿ ತರಗತಿ ವಿದ್ಯಾರ್ಥಿನಿ ಯು ತನುಶ್ರೀ ಹಾಗೂ ಎಲ್ ಕೆ ಜಿ ತರಗತಿಯಿಂದ ಬಿ.ಕೆ ಪೂರ್ಣಿಮಾ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾದ ಪಿ ನವೀನ್ ಕುಮಾರ್ ಜವಾಹರ ಲಾಲ್ ನೆಹರೂ ರವರ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಕ್ಕಳು ತಾವು ವೇದಿಕೆಯನ್ನು ಅಲಂಕರಿಸಿರುವುದಕ್ಕೆ ತುಂಬಾ ಖುಷಿ ಪಟ್ಟರು ವೇದಿಕೆಯಲ್ಲಿ ಮಕ್ಕಳು ಹಾಡುಗಳನ್ನು ಹಾಡಿದರು. 6 ನೆಯ ತರಗತಿ ವಿದ್ಯಾರ್ಥಿ ಎಂ.ಕಲ್ಲೇಶ್ ಮಿಮಿಕ್ರಿ ಮಾಡುವುದರ ಮೂಲಕ ಮಕ್ಕಳನ್ನು ಮನ ರಂಜಿಸಿದನು. ಕಾರ್ಯಕ್ರಮದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಈ ಕಾರ್ಯಕ್ರಮವನ್ನು 7 ನೇ ತರಗತಿ ವಿದ್ಯಾರ್ಥಿ ಕೆ ಗಣೇಶ ನೆರವೇರಿಸಿದರು. ಕೊನೆಯದಾಗಿ ಪ್ರಥಮ ಸಂಕಲನಾತ್ಮಕ ಪರೀಕ್ಷೆಯಲ್ಲಿ ಟಾಪ್ 5 ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು,ಸಹ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು