ಚರಂಡಿಯ ನೀರು ರಸ್ತೆಗೆ ಹರಿದಾಡಿದರು ಕ್ಯಾರೇ ಎನ್ನದ ಅಧಿಕಾರಿಗಳ ವಿರುದ್ಧ – ಗ್ರಾಮಸ್ಥರು ಧರಣಿ ಸತ್ಯಾಗ್ರಹದ ಎಚ್ಚರಿಕೆ.
ಕಲಕೇರಿ ಜ.12

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ವಾರ್ಡ್ ನಂಬರ್ ಎಂಟರಿಂದ ಐದೇನೆ ವಾರ್ಡ್ ನಲ್ಲಿ ಚರಂಡಿ ತುಂಬಿ ನೀರು ರಸ್ತೆ ಮೇಲೆ ಹರಿದರು. ಅಂಗನವಾಡಿಗೆ ಹೋಗುವ ಮಕ್ಕಳು ದಿನಾ ಚರಂಡಿ ನೀರಲ್ಲಿ ಬಿದ್ದರು ಅದರ ಬಗ್ಗೆ ಗಮನ ಹರಿಸದ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೂ ಹಲವಾರು ಸಲ ಹೇಳಿದರು. ಯಾರು ಇದರ ಬಗ್ಗೆ ಕ್ರಮ ಕೈಗೊಂಡಿರುವುದಿಲ್ಲ ಸದ್ಯಸರಿಗೆ ಹೇಳಿದರು. ಪ್ರಯೋಜನ ಇಲ್ಲ ಎಷ್ಟು ಬಾರಿ ಹೇಳಿದರು ಮಾಡೋನು ಎಂದು ಭರವಸೆ ನೀಡುತ್ತಾರೆ. ಊರಿನ ಗ್ರಾಮಸ್ಥರು ಬೇಸರ ಗೊಂಡು ಒಂದ ಎರಡು ದಿನದಲ್ಲಿ ಸ್ವಚ್ಛ ಗೊಳಿಸಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯತಿ ಎದರು ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಗ್ರಾಮಸ್ಥರು ತಿಳಿಸಿದರು. ಗ್ರಾಮದ ಮುಖಂಡರು ಅಧಿಕಾರಿಗಳಿಗೆ ಕೂಡಲೇ ಇದನ್ನು ದುರಸ್ತಿ ಕಾರ್ಯ ಮಾಡಿ ಸ್ವಚ್ಛ ಗೊಳಿಸಬೇಕು ಎಂದು ತಿಳಿಸಿದರು. ಮಲ್ಲಿಕಾರ್ಜುನ ಕಟ್ಟಿಮನಿ. ಅರ್ಜುನ ನಡುವಿನಮನಿ ದೇವೇಂದ್ರ ವಡ್ಡರ್. ಇಲ್ಲಿಯೇ ಅಂಗನವಾಡಿ ಇದೆ ಮಕ್ಕಳು ಚರಂಡಿ ನೀರಿನ ಮೇಲೆ ಅಂಗನವಾಡಿಗೆ ಹೋಗುವಂತ ಪರಿಸ್ಥಿತಿ ಬಂದಿದೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಕೂಡಲೇ ಸ್ವಚ್ಛ ಗೊಳಿಸಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ