ಮಕರ ಸಂಕ್ರಾಂತಿಗೆ ಎಳ್ಳು ಬೆಲ್ಲ ತಿನ್ನೋದು ಏಕೆ…..!

ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗಾಗಿ ಇದಕ್ಕೆ ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಮಕರ ಸಂಕ್ರಾಂತಿಯಲ್ಲಿ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ಸಂಕ್ರಾಂತಿ ಹಬ್ಬದ ವೇಳೆ ಎಳ್ಳು- ಬೆಲ್ಲ ಹಂಚುವ ಹಾಗೂ ಸೇವಿಸುವುದು ಪ್ರಮುಖವಾಗಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಚಳಿಗಾಲದಲ್ಲಿ ಬರುವ ಸಂಕ್ರಾಂತಿಯ ವೇಳೆ ಚರ್ಮ ಒಣಗಿದಂತೆ ಇರುತ್ತದೆ. ಕೆಮ್ಮು ಶೀತವಾಗುತ್ತದೆ. ಈ ಎಲ್ಲಾ ಸಮಸ್ಯೆಗೆ ಎಳ್ಳು-ಬೆಲ್ಲ ರಾಮಬಾಣವಾಗಿ ಕೆಲಸ ಮಾಡುತ್ತದೆ. ಎಳ್ಳು ತೀಕ್ಷ್ಣವಾದ ಸೂರ್ಯನ ಕಿರಣಗಳಿಂದ ದೇಹವನ್ನು ತಂಪಾಗಿಡಲು ಸಹಕಾರಿ. ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎನ್ನುತ್ತಾರೆ ನಮ್ಮ ಪೂರ್ವಜರು.
ವಿಶೇಷ ಲೇಖನ:ಕೆ.ಎಸ್.ವೀರೇಶ್.ಕಾನಾಹೊಸಹಳ್ಳಿ