ಕೋಟೆ ಬಡಾವಣೆಯ ಲಾಲದ ಬಾವಿಯನ್ನು ಹೂಳೆತ್ತಿ ಕುಡಿಯುವ ನೀರಿಗಾಗಿ ಬಳಸಲು ಪ್ರಮುಖರ ಒತ್ತಾಯ, ಮೊಳಕಾಲ್ಮುರು.
ಮೊಳಕಾಲ್ಮುರು ಮಾರ್ಚ್.12

ಈ ಬಾವಿಯ ಹೆಸರು ಲಾಲದ ಬಾವಿ ಅಂತಾ, ಇರುವುದು ಮೊಳಕಾಲ್ಮೂರಿನ ಕೋಟೆ ಬಡಾವಣೆಯಲ್ಲಿ. ಇಲ್ಲಿ ಅತಿಯಾದ ನೀರಿನ ಸೆಲೆ ಇರುವುದರಿಂದ ಹಿಂದಿನ ಕಾಲದಲ್ಲಿ ಇದನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ನಿರ್ಮಿಸಿದ್ದು, ಬರಬರುತ್ತಾ ಇದನ್ನು ಪೂಜಾ ತ್ಯಾಜ್ಯಗಳನ್ನು ಬಿಸಾಡಲು ಬಳಸಿ ಅತಿಯಾಗಿ ಮಲಿನ ಗೊಳಿಸಲಾಯಿತು, ಇತ್ತೀಚಿನ ವರ್ಷಗಳಲ್ಲಿ ಈ ಬಾವಿಯನ್ನು ಗಣೇಶ ವಿಸರ್ಜನೆಗಾಗಿ ಬಳಸುವಂತೆ ಪಟ್ಟಣ ಪಂಚಾಯತಿ ಸೂಚಿಸಿರುವುದರಿಂದ ಅತಿಯಾಗಿ ಮಲಿನಗೊಂಡು ಗಬ್ಬು ನಾರುತ್ತಿದೆ.

ಇತ್ತೀಚಿನ ಬಿಸಿಲ ತಾಪಮಾನದಿಂದಾಗಿ ಸದರಿ ಬಾವಿಯು ಸಂಪೂರ್ಣ ಬತ್ತಿದ್ದು ಸ್ವಚ್ಚಗೊಳಿಸಲು ಸೂಕ್ತ ಸಮಯವಾಗಿದೆ, ಆದ್ದರಿಂದ ಇದಕ್ಕೆ ಸಂಬಂದಪಟ್ಟಂತಹ ಪಟ್ಟಣ ಪಂಚಾಯತಿ ಈ ಕೂಡಲೇ ಇತ್ತ ಗಮನಹರಿಸಿ ತನ್ನ ಅಮೂಲ್ಯವಾದ ಸಮಯವನ್ನು ಈ ಬಾವಿಯ ಸ್ವಚ್ಚತೆಗೆ ಮೀಸಲಿಟ್ಟು ಹೂಳೆತ್ತಿ ಸ್ವಚ್ಚ ಗೊಳಿಸಿದಲ್ಲಿ ಈ ಬಾವಿಯ ಸ್ವಚ್ಚ ನೀರನ್ನು ಮುಂದಿನ ದಿನಗಳಲ್ಲಿ ಬಳಸಲು ಅನುಕೂಲ ಮಾಡಿ ಕೊಟ್ಟಂತಾಗುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು