ಅಬಕಾರಿ ನೀರಿಕ್ಷಕಿ ಅಮಾನತ್ ಗೆ ಆಗ್ರಹಿಸಿ ಪ್ರತಿಭಟನೆ.
ತರೀಕೆರೆ ಜೂನ್.13
ಪತ್ರಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಪ್ರತಿಭಟನೆ ಮಾಡುವುದು ಅನಿವಾರ್ಯ,ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ,ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಏನ್ ವೆಂಕಟೇಶ್ ಹೇಳಿದರು. ಅವರು ಸೋಮವಾರ ಕರ್ನಾಟಕ ದಕ್ಷಿಣ ವಲಯ ಪತ್ರಕರ್ತರ ಸಂಘ ಮತ್ತು ಕಾರ್ಯನಿರ್ತಾ ಪತ್ರಕರ್ತರ ಸಂಘ, ಹಾಗೂ ತಾಲೂಕು ಪತ್ರಕರ್ತರ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಅಬಕಾರಿ ಇಲಾಖೆ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ ಅಂತವರನ್ನು ಅವಹೇಳನಕಾರಿಯಾಗಿ ನಿಂದಿಸಿ ಮಾತನಾಡಿರುವುದರಿಂದ ಅಬಕಾರಿ ನಿರೀಕ್ಷಕರಾದ ಶ್ವೇತಾರವರನ್ನು ವಜಾಗುಳಿಸಬೇಕು ಎಂದು ಒತ್ತಾಯಿಸಿದರು. ಹಿರಿಯ ಪತ್ರಕರ್ತರಾದ ಬಿ ಕೃಷ್ಣನಾಯ್ಕ ಮಾತನಾಡಿ ಅಧಿಕಾರಿಗಳು ಸರಿದಾರಿಯಲ್ಲಿ ನಡೆಯದಿದ್ದಾಗ ಅಂತವರಿಗೆ ತಕ್ಕ ಪಾಠ ಕಲಿಸುವುದು ಪತ್ರಕರ್ತರ ಕರ್ತವ್ಯವಾಗಿದೆ ಎಂದರು. ಇನ್ನೋರ್ವ ಹಿರಿಯ ಪತ್ರಕರ್ತರಾದ ಕೆ ನಾಗರಾಜ್ ಮಾತನಾಡಿ ಪತ್ರಕರ್ತ ಮಿತ್ರರು ಅಬಕಾರಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿರೀಕ್ಷಕರಾದ ಶ್ವೇತಾ ರವರು ಅವಮಾನಿಸಿ ಮಾತನಾಡಿ ಕಚೇರಿಯಿಂದ ಎದ್ದು ಹೊರಗೆ ಹೋಗಿ ಎಂದು ಹಿಯಾಳಿಸಿದ್ದಾರೆ ಎಂದು ಹೇಳಿದರು.

ತಾಲೂಕು ಪತ್ರಕರ್ತರ ಸಂಘದ ಟಿಎಸ್ ಬಸವರಾಜ್, ದ ಸಂ ಸ ಮುಖಂಡ ಎಚ್‌ವಿ ಬಾಲರಾಜ್ ಮಾತನಾಡಿದರು. ಪ್ರತಿಭಟನಾಕಾರರು ಅಬಕಾರಿ ನಿರೀಕ್ಷಕಿ ಶ್ವೇತಾ ರವರನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಉಪ ವಿಭಾಗ ಅಧಿಕಾರಿಗಳ ಕಚೇರಿಯ ಗ್ರೇಡ್ 2- ತಹಶೀಲ್ದಾರ್ ಗೋವಿಂದಪ್ಪ ರವರು ಮನವಿಯನ್ನು ಸ್ವೀಕರಿಸಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಕಳುಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಎಸ್ ಸುರೇಶ್ ಚಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಬಿ ಎನ್ ನಾಗರಾಜ್, ಜಿ ಟಿ ರಮೇಶ, ಎಸ್ ಎನ್ ಸಿದ್ದರಾಮಪ್ಪ, ಎಸ್ ಕೆ ಸ್ವಾಮಿ,ಪ್ರದೀಪ್ ಎಚ್ ಇ, ಜಿಲ್ಲಾ ಸಮಿತಿ ಸದಸ್ಯರಾದ ಶಫಿವುಲ್ಲಾ ಹಾಗೂ ದ ಸಂ ಸ ಕಾರ್ಯಕರ್ತರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ