ಡಾ. ಶ್ರೀ ಧೂಪಂ ಅಂಜಿನಪ್ಪ ಮಹಾ ಸ್ವಾಮಿಗಳ 2.ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ.
ಯಾರ್ರಗುಂಡ್ಲಹಟ್ಟಿ ಡಿಸೆಂಬರ್.16

ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯ ಯರ್ರಗುಂಡ್ಲಹಟ್ಪಿ ಶ್ರೀ ಆರೂಢ ಪರಮಾನಂದ ಆಶ್ರಮದಲ್ಲಿ ಲಿಂಗೈಕ್ಯ ಗಾನಯೋಗಿ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಧೂಪಂ ಅಂಜಿನಪ್ಪ ಮಹಾ ಸ್ವಾಮಿಗಳ 2ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಲ್ಲಿ ಶ್ರೀಗಳಿಗೆ ನುಡಿ ನಮನ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಮಠದ ಪೀಠಾಧಿಪತಿ ಗಳಾದ ಪರಮಾ ನಂದರೂಢ ಮಹಾ ಸ್ವಾಮಿ ಮಾತಾನಾಡಿ ನಮ್ಮನ್ನು ಆಗಲಿದ ಶ್ರೀಗಳು ಇಂದಿಗೆ 2 ವರ್ಷ ಆಯಿತು ಅವರ ದೇಹ ದೂರವಾದರು ಅವರ ಆತ್ಮ ನಮಲ್ಲಿಯೇ ಬಿಟ್ಟು ಹೋಗಿದ್ದಾರೆ.

ಸಂಗೀತ ಕೀರ್ತನೆ ಯಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟದ್ದರು ಅಲೆಮಾರಿ ಜನಾಂಗದಲ್ಲಿ ಹುಟ್ಟಿದ ಶ್ರೀಗಳು ಎಲ್ಲಾ ಜಾತಿ ಧರ್ಮ ಗಳನ್ನು ಪ್ರೀತಿ ಮಾಡುತ್ತಿದ್ದರು. ಸದಾ ಯಾವುದೇ ಆಡಂಬರ ವಿಲ್ಲದೆ ಯಾವುದೇ ಪ್ರಚಾರವನ್ನು ಬಯಸದೆ ಸದಾ ಶಾಂತ ಚಿತ್ತರಾಗಿ ಇರುತ್ತಿದ್ದರು. ಆಧ್ಯಾತ್ಮ ಜ್ಞಾನದಿಂದ ನಾಡಿನಾದ್ಯಂತ ಸಂಚರಿಸಿ ಜನರಲ್ಲಿ ಅರಿವು ಮೂಡಿಸಲು ಕಾರ್ಯ ಮಾಡಿದರು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಗಂಡ ಬೊಮ್ಮನಹಳ್ಳಿ ಗ್ರಾಪಂ. ಉಪಾಧ್ಯಕ್ಷ ಆರ್.ಬಸವರಾಜ್, ಗ್ರಾಮದ ಹಿರಿಯ ಮುಖಂಡರಾದ ಬಿ.ಚಿನ್ನಯ್ಯ, ಚಿತ್ರದುರ್ಗ ಜಿಲ್ಲಾ ಎಸಿ ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ನಾಮ ನಿರ್ದೇಶನ ಸದಸ್ಯ ಬಿಎಸ್. ಮಂಜಣ್ಣ, ಸಮುದಾಯದ ಮುಖಂಡರು, ಭಕ್ತಾಧಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ