ಇಂಡಿಯಲ್ಲಿ 250. ಅಡಿ ಎತ್ತರದ ಮೋಬೈಲ್ ಟವರ್ ಹತ್ತಿದ ಯುವಕ..! ಏಕೆ ಗೊತ್ತಾ…..?
ಇಂಡಿ ಮಾರ್ಚ್.19

ಯುವಕನೋರ್ವ ವಿವಸ್ತ್ರವಾಗಿ ಮೊಬೈಲ್ ಟವರ್ ಏರಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸತೀಶ್ ಚಂದ್ರಶೇಖರ ಕಡಣಿ ಎಂಬುವನು ಪಟ್ಟಣದ ಬಸವೇಶ್ವರ ದಲ್ಲಿರುವ 250 ಫೀಟ್ ಎತ್ತರದ ಬಿಎಸ್ ಎನ್ ಎಲ್ ಟವರ್ ಬೆಳಿಗ್ಗೆ 4 ಘಂಟೆಗೆ ತುತ್ತತುದಿಯವರೆಗೆ ಏರಿದ್ದಾನೆ. ಟವರ್ ತುದಿಯ ಮೇಲೆ ಹತ್ತಿ ಅಪಾಯಕಾರಿ ಯಾಗಿದ್ದಾನೆ. ಯುವಕ ಟವರ್ ಮೇಲಿಂದ ಆಯತಪ್ಪಿ ಬಿದ್ದರೆ ಅನಾಹುತಕ್ಕೆ ಇಡಾಗುವ ಸಂಭವ ಇದೆ. ಅದಕ್ಕಾಗಿ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ಪೊಲೀಸರು ಭೇಟಿ ನೀಡಿ, ಸತೀಶನನ್ನು ಮನವೋಲಿಸಿ ಕೆಳಗೆ ಇಳಿಸುವ ಕೆಲಸ ಮಾಡಿದ್ದಾರೆ. ಆತನನ್ನು ವಿಚಾರಿಸಿದಾಗ ನಮ್ಮೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳುತ್ತಾನೆ. ಈ ಹಿಂದೆ ಸಿಂದಗಿ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಹಾಗೂ ಚಾಂದಕವಠೆ ಗ್ರಾಮದಲ್ಲಿ ಟವರ್ ಹತ್ತಿ ಹುಚ್ಚಾಟ ಮೆರೆದಿದ್ದಾನೆ.ಈ ಸಂದರ್ಭದಲ್ಲಿ ಅಗ್ನಿಶಾಮಕ ಸಹಾಯಕ ಠಾಣಾ ಅಧಿಕಾರಿ ದೇವಧಾನಮ್ಮ ಪಿ.ಎಚ್, ಚಾಲಕ ಮಲ್ಲು ಗೋಟ್ಯಾಳ,ಸಿಬ್ಬಂದಿ ಮಾರುತಿ ರಾಠೋಡ, ಮಹಾದೇವ ಮಾದರ, ಶರಣು ಹೊನವಾಡ, ಪ್ರಕಾಶ್ ಬಿರಾದಾರ, ಮಹ್ಮದ ಅಲಿ ಬಂಥನಾಳ ಇದ್ದರು. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ