ರಕ್ತ ದಾನ. ಶ್ರೇಷ್ಠ ದಾನ — ಡಾll ದೇವರಾಜ್
ತರೀಕೆರೆ ಜೂನ್.14
ದೇಹದ ಬೇರೆ ಬೇರೆ ಅಂಗಾಂಗಗಳನ್ನು ಕೃತಕವಾಗಿ ಪಡೆಯಬಹುದು ಆದರೆ ರಕ್ತವನ್ನು ಕೃತಕವಾಗಿ ತಯಾರಿಸಲು ಪಡೆಯಲು ಸಾಧ್ಯವಿಲ್ಲ ಎಂದು ಆರೋಗ್ಯ ಅಧಿಕಾರಿ ಡಾ. ದೇವರಾಜ್ ಹೇಳಿದರು. ಅವರು ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಮಗಳೂರು, ತಾಲೂಕು ಆರೋಗ್ಯ ಅಧಿಕಾರಿಗಳು, ತಾಲೂಕು ಸಾರ್ವಜನಿಕ ಆಸ್ಪತ್ರೆ, ನೆಹರು ಯುವಕ ಕೇಂದ್ರ, ರೋಟರಿ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್, ಇನ್ನರ್ ವೀಲ್ ಕ್ಲಬ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ, ತರೀಕೆರೆ ಸೈಕಲಿಂಗ್ ಕ್ಲಬ್, ಎಸ್ ಜೆ ಎಂ ಪ್ರಥಮ ದರ್ಜೆ ಕಾಲೇಜು, ಹಾಗೂ ಜಿಎಚ್ ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ರಕ್ತದಾನಗಳ ದಿನಾಚರಣೆ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು, ತಮ್ಮ ರಕ್ತದಾನ ಮಾಡಿ ಉದ್ಘಾಟನೆ ಮಾಡಿ ಮಾತನಾಡಿದರು.
ದಾನಿಗಳಿಂದ ರಕ್ತದಾನ ಪಡೆದು ಶೇಖರಿಸಿ ಇನ್ನೊಂದು ಜೀವ ಉಳಿಸುತ್ತೇವೆ. ಅತ್ಯಂತ ಸುರಕ್ಷಿತವಾದ ರಕ್ತವನ್ನು ಮಾತ್ರ ರೋಗಿಗಳಿಗೆ ಕೊಡಲಾಗುತ್ತದೆ. ನಮ್ಮ ದೇಹದಲ್ಲಿರುವ ಹಲವಾರು ಜಂತುಹುಳು, ಕೊಕ್ಕೆ ಹುಳು ಗಳಂತಹವು ರಕ್ತವನ್ನು ಕುಡಿಯುತ್ತವೆ. ಇದರಿಂದ ರಕ್ತದ ಕೊರತೆ ಉಂಟಾಗಿ ಅಮಿನಿಯ ಆಗಲಿಕ್ಕೆ ಇದು ಸಹ ಒಂದು ಕಾರಣ ಅವುಗಳನ್ನು ನಿರ್ಮೂಲನೆ ಗೊಳಿಸಿ ರಕ್ತವನ್ನು ಚೆನ್ನಾಗಿಟ್ಟುಕೊಂಡು ದಾನ ಮಾಡಬೇಕು. ರಕ್ತ ಸಂಜೀವಿನಿ ಇದ್ದ ಹಾಗೆ ಜೀವವನ್ನು ಉಳಿಸುತ್ತದೆ. ಅಪಘಾತ,ಹೆರಿಗೆ, ಶಸ್ತ್ರಚಿಕಿತ್ಸೆ ಹಾಗೂ ಗರ್ಭಿಣಿಯರಿಗೆ ಅತಿ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ.
ಆದ್ದರಿಂದ ದಾನಿಗಳು ಕೊಡುವ ರಕ್ತವನ್ನು ಬ್ಲೆಡ್ ಬ್ಯಾಂಕುಗಳಲ್ಲಿ ಸುರಕ್ಷಿತವಾಗಿ ಶೇಖರಿಸಿ ಇಡಲಾಗುವುದು, ರಕ್ತದಾನವು ಶ್ರೇಷ್ಠ ದಾನವಾಗಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ 18ರಿಂದ 60 ವರ್ಷ ವಯಸ್ಸಿನ ಪ್ರತಿಯೊಬ್ಬರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಜೊತೆಗೆ ಬೇರೆಯವರ ಜೀವವನ್ನು ಉಳಿಸುತ್ತದೆ. ಆದ್ದರಿಂದ ಸಂಘ ಸಂಸ್ಥೆಯವರು ವಿದ್ಯಾರ್ಥಿಗಳು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯ ಅಧಿಕಾರಿ ಹೆಚ್ ಮಹಾಂತೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನವೀನ್ ಪೆ ನ್ನಯ್ಯ, ರೋಟರಿ ಸಂಸ್ಥೆಯ ದಯಾನಂದ, ಇನ್ನರ್ವಿಲ್ ಅಧ್ಯಕ್ಷರಾದ ಪ್ರತಿಭಾ ಶಂಕರ್, ಎಸ್ ಜೆ ಎಂ ಕಾಲೇಜಿನ ಎನ್ ಸಿ ಸಿ ಘಟಕದ ರಘು, ಡಾ. ನಾಗರಾಜ್, ಡಾ. ಮಹಮ್ಮದ್ ಸಾಧಿಕ್, ಡಾ. ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದು ಶಿವಮೊಗ್ಗದ ಮೆಗನ್ ಬೋಧನಾ ಆಸ್ಪತ್ರೆಯ ಸಿಬ್ಬಂದಿ ಹಾಗೂ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳ ಸಹಕಾರದಿಂದ ರಕ್ತ ಪಡೆಯಲಾಯಿತು, ಡಾ. ಶ್ರೀನಿವಾಸ್ ಸ್ವಾಗತಿಸಿ ಲ್ಯಾಬ್ ಓಂಕಾರ್ ಮೂರ್ತಿ ನಿರೂಪಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ