ಅಂಗವಿಕಲ ವಿದ್ಯಾರ್ಥಿಗೆ ದ್ವಿಚಕ್ರ ಗಾಲಿ ಖುರ್ಚಿ ವಿತರಣೆ.
ಮದಭಾವಿ ಜನೇವರಿ.1

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಅಗತ್ಯವುಳ್ಳ ಮಗು ಯೋಜನೆ ಅಡಿಯಲ್ಲಿ ಮಂಜೂರಾದ ದ್ವಿಚಕ್ರ ಗಾಲಿ ಖುರ್ಚಿಯನ್ನು ಅಂಗವಿಕಲ ವಿದ್ಯಾರ್ಥಿಯಾದ ರಾಹುಲ ಆಡಿವೆಪ್ಪಾ ದುರಗಮರಗಿ ಇವರಿಗೆ ಮುಖಂಡರಾದ ಪ್ರವೀಣ ನಾಯಿಕ, ಎಸ್ ಡಿ ಎಂ ಸಿ ಅಧ್ಯಕ್ಷ ಕುಮಾರ ಗಾಡಿವಡ್ಡರ ಪ್ರಧಾನ ಗುರುಗಳಾದ ಟಿ ಬಿ ಒಡೆಯರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್ ಎನ್ ಮಕ್ಕನವರ, ಪಿ ಎಸ್ ಫಕೀರೆ, ಆರ್ ಬಿ ನಿಲಜಗಿ, ಎ ಎಸ್ ಚೌಗಲಾ, ಎನ್ ಎ ಚೌದರಿ, ಪಿ ಟಿ ಕಾಂಬಳೆ, ವಿ ಎಂ ಪೂಜಾರಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಮಹೇಶ.ಎಮ್.ಶರ್ಮಾಬೆಳಗಾವಿ