ಪ್ರಾಥಮಿಕ ಹಂತದಲ್ಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ – ಪಿಡಿಓ ತಳವಾರ.
ನಾಗೂರ ಜೂನ್.15
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಾಗೂರ ಗ್ರಾಮ ಪಂಚಾಯತಿಯ ಯಡಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಹಂತದಲ್ಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮುತ್ತಪ್ಪ ತಳವಾರ ತಿಳಿಸಿದರು. ಯಡಹಳ್ಳಿ ಗ್ರಾಮದಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು. ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ರೋಜಗಾರ್ ದಿವಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಸಿಗೆ ನೀರು ಎರೆಯುವುದರ ಮೂಲಕ ಗಣ್ಯರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನರೇಗಾ ಕೂಲಿ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು.ಸಣ್ಣಪುಟ್ಟ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಾಗ ಕೂಡಲೇ ಹತ್ತಿರದ ಆಸ್ಪತ್ರೆಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ ನಿರ್ಲಕ್ಷ್ಯ ವಹಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಕೂಲಿ ಕಾರ್ಮಿಕರು ಕೆಲಸದ ಒತ್ತಡದಿಂದ ಆರೋಗ್ಯದ ಕಡೆಗೆ ಕಾಳಜಿ ವಹಿಸುತ್ತಿಲ್ಲ ಮುಂದೆ ಇದೆ ದೊಡ್ಡ ಪ್ರಮಾಣದ ರೋಗಗಳಿಗೆ ತುತ್ತಾಗುತ್ತಿರಿ ಎಂದು ಎಚ್ಚರಿಸಿದರು ಹೀಗಾಗಿ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಎ.ಎಚ್.ಹಿರೇಅಮಾರಗೌಡರ. ಅಧ್ಯಕ್ಷ ನಿಂಗನಗೌಡ ಪರುತಗೌಡ್ರ. ಮಾಜಿ ಅಧ್ಯಕ್ಷ ಬಸಪ್ಪ ಬೀಳಗಿ. ವೈದ್ಯಾಧಿಕಾರಿ ಪ್ರಿಯಾಂಕಾ ರಂಗಾಪುರ.ಡಾಟಾ ಎಂಟ್ರಿ ಆಪರೇಟರ್ ಮಂಜುನಾಥ್ ಮೇಟಿ. ಪಿಎಚ್ ಸಿಒ ಎಸ್.ಎಸ್.ಇಟಗಿ. ಸಿಎಚ್ ಒ ಜೆ.ಬಿ.ಹೊರಕೇರಿ. ಪಿಎಚ್ ಸಿಒ ದೀಪಿಕಾ ರಾಠೋಡ. ಎಚ್ ಐಓ ಎಸ್.ಎಸ್.ಸಣಕಲ್ಲ.ಕಾಯಕ ಮಿತ್ರ ಸಾವಿತ್ರಿ ಲಿಂಗದಳ್ಳಿ.ಕೆಎಚ್ ಪಿಟಿ ಸಿಬ್ಬಂದಿ ವರ್ಗ. ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.