ವಿಠಲಾ ರುಕ್ಮಾಯಿರವರ 36ನೇ ದಿಂಡಿ ಉತ್ಸವ — ಜಿಎಚ್ ಶ್ರೀನಿವಾಸ್ ರವರಿಗೆ ಸನ್ಮಾನ
ವಿಠಲಾ ರುಕ್ಮಾಯಿರವರ 36ನೇ ದಿಂಡಿ ಉತ್ಸವ — ಜಿಎಚ್ ಶ್ರೀನಿವಾಸ್ ರವರಿಗೆ ಸನ್ಮಾನ
ತರೀಕೆರೆ ಜೂನ್.15
ವಿಠಲಾ ರುಕ್ಮಾಯಿ ರವರ 36ನೇ ದಿಂಡಿ ಉತ್ಸವವನ್ನು ಶಾಂತಿ ಮತ್ತು ಸಂಭ್ರಮದಿಂದ ಆಚರಣೆ ಮಾಡಲಾಯಿತು ಎಂದು ತರೀಕೆರೆ ಭಾವಸಾರ ಕ್ಷತ್ರಿಯ ಸಮಾಜ ಸಂಘದ ಅಧ್ಯಕ್ಷರಾದ ಕೆ ಸುರೇಶ್ ಮಹಲತ್ಕರ್ ಇಂದು ಪಟ್ಟಣದ ಎಂ ಜಿ ರಸ್ತೆಯಲ್ಲಿ ಇರುವ ಶ್ರೀ ಪಾಂಡುರಂಗ ದೇವಸ್ಥಾನ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿ ದಿಂಡಿ ಉತ್ಸವದ ಪರವಾಗಿ ಪಟ್ಟಣದ ರಾಜ ಬೀದಿಗಳಲ್ಲಿ ವಿಠಲಾ ರುಕ್ಮಾಯಿ ರವರ ಮೆರವಣಿಗೆ ನಡೆಸಲಾಯಿತು ಹಾಗೂ ಸರ್ವರಿಗೂ ಸಹ ಅನ್ನಸಂತರ್ಪಣೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ಹೇಳಿದರು. ಉಪಾಧ್ಯಕ್ಷರಾದ ಎಂಪಿ ರಮೇಶ್ ಮಹೇಂದ್ರಕರ್ ಮಾತನಾಡಿ ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಫಿಸ್ಸೆ ರವರು ಆಗಮಿಸಿದ್ದು,ಸಂಘದ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಇರಬೇಕೆಂದು ಹೇಳಿದ್ದಾರೆ.ಅದರಂತೆ ಸಮಾಜದ ಬಂಧುಗಳೆಲ್ಲರೂ ಒಗ್ಗಟ್ಟಿನಿಂದ ದುಂಡಿ ಉತ್ಸವ ಆಚರಿಸುತ್ತಿದ್ದೇವೆ ಎಂದು ಹೇಳಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಂಎಲ್ ಶಂಕರ್ ಮೂರ್ತಿ ಮಹೇಂದ್ರಕರ್ ಮಾತನಾಡಿ ಈ ವರ್ಷದ ದಿಂಡಿ ಉತ್ಸವದಲ್ಲಿ ತರೀಕೆರೆಯ ಜನಪ್ರಿಯ ಶಾಸಕರಾದ ಜಿಎಚ್ ಶ್ರೀನಿವಾಸ್ ರವರನ್ನು ಬಾವಸರ ಕ್ಷತ್ರಿಯ ಸಮಾಜ, ಭಾವಸಾರ ಕ್ಷತ್ರಿಯ ಮಹಿಳಾ ಸಂಘ ಮತ್ತು ಮಹಿಳಾ ಪರಿಷತ್ತು,ದೈವ ಮಂಡಳಿ, ಭಜನಾ ಮಂಡಳಿ,ಟೈಲರ್ಸ್ ಅಸೋಸಿಯೇಷನ್ ರವರಿಂದ ಸನ್ಮಾನಿಸಲಾಯಿತು, ಲಿಂಗದಹಲ್ಲಿ ಸಂಘದವರು ಸಹಕರಿಸಿರುತ್ತಾರೆ ಎಂದು ಹೇಳಿದರು. ಹಿರಿಯರಾದ ಗೌರವಾಧ್ಯಕ್ಷ ಲೋಕೇಶ್ ರಾವ್ ಕೋಳೇಕರ್, ಚಂದ್ರ ಚಿಂಬಲ್ಕರ್, ಸಹ ಕಾರ್ಯದರ್ಶಿ ಛಾಯಾಪತಿ ಅಂಬೋರೆ, ಖಜಾಂಚಿ ವಸಂತ ರಾವ್ ಮಾಳತ್ಕರ್, ಲೆಕ್ಕಪರಿಶೋಧಕರಾದ ಅನಿಲ್ ಕುಮಾರ್ ಗೊಂದಕರ್, ನಿರ್ದೇಶಕರಾದ ಕಲ್ಯಾಣಕುಮಾರ್ ನವಲೆ, ಗಜೇಂದ್ರ ರಾವ್ ಮಾಳತ್ಕರ್, ಟಿವಿ ಪಾಂಡುರಂಗ ಮಾಲತ್ಕರ್, ಉಮೇಶ್ ಮಾಳಾತ್ಕರ್, ಎಂಪಿ ದಯಾನಂದ ಮಹೇಂದ್ರಕರ್, ಅಶೋಕ ಕುಮಾರ್ ಜಿಂಗಾಡೆ, ಕೃಷ್ಣಮೂರ್ತಿ ಚಿಂಬಾಳ್ಕರ್ , ಭರತ್ ಮಾಲತ್ಕರ್, ಸುನಿಲ್ ಗುಜ್ಜಾರ್, ಪಿ ರಾಜೇಶ್ ಗುಜ್ಜಾರ್, ಲಕ್ಷ್ಮಣರಾವ್ ಕುಂಟೆ, ಸತೀಶ್ ಬಾಲತ್ಕರ್, ಮುರಳಿದಾರ್ ಬಾಂಗ್ರೆ ರವರು ದಿಂಡಿ ಉತ್ಸವದ ನೇತೃತ್ವ ವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ