ವಿದ್ಯುತ್ ದರ ಹೆಚ್ಚಳ — ಹೆಸ್ಕಾಂ ಅಧಿಕಾರಿಗಳಿಗೆ ಮನವಿ.
ಇಂಡಿ ಜೂನ್.18

ಇಂಡಿ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಅದನ್ನು ಹಿಂಪಡೆಯಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಆಗ್ರಹಿಸಿದರು.ಅವರು ಹೆಸ್ಕಾ ಕಚೇರಿಯಲ್ಲಿ ಹೆಸ್ಕಾಂ ಅಧಿಕಾರಿ ಮೆಂಡೆಗಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ವಿದ್ಯುತ್ ದರ ಏಕಾಏಕಿ ದುಪ್ಪಟ್ಟು ಹೆಚ್ಚಿಸಿದ್ದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ವಿದ್ಯುತ್ ಬಿಲ್ ದುಬಾರಿ ಶಾಕ್ ದಿಂದ ಜನತೆ ತತ್ತರಿಸಿ ರೋಶಿ ಹೋಗಿದ್ದಾರೆ. ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ವಿದ್ಯುತ್ ದರ ಏರಿಕೆಯನ್ನು ಇಳಿಸಬೇಕೆಂದು ಒತ್ತಾಯಿಸಿ ಇಂಡಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆರ್. ಮೇಡೆಗಾರ ಮೂಲಕ ಮನವಿ ಸಲ್ಲಿಸಲಾಯಿತು.ಒಂದು ವೇಳೆ ಹೊಸ ವಿದ್ಯುತ್ ದರ ಪಟ್ಟಿಯನ್ನು ಕೈಬಿಡದಿದ್ದರೆ ಜೂ. ೨೧ರಂದು ಭಾರತೀಯ ಜನತಾ ಪಕ್ಷದಿಂದ ಇಂಡಿ ಹೆಸ್ಕಾಂಗೆ ಬೃಹತ ಪ್ರತಿಭಟನೆ ಮಾಡುವ ಮೂಲಕ ಮತ್ತಿಗೆ ಹಾಕಲಾಗುವದು ಎಂದರು.ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಸೋಮಶೇಖರ ದೇವರ, ಅಶೋಕ ಅಕಲಾದಿ, ಅಪ್ಪು ಪವಾರ, ದತ್ತು ಬಂಡೆನವರ, ರಾಚು ಬಡಿಗೇರ, ಬಸವರಾಜ ನಡಗಡ್ಡಿ ಅಕ್ಷಯ ಹಿಬಾರೆ ಮತ್ತಿತರಿದ್ದರು.