“ನಿಜ ಜಗದ ಮಾನವ ಧರ್ಮದ ಜಯತೆ”…..

ಜಗದ ಸಿರಿ ಉಂಡು ಗರ್ವಪಡಬೇಡ”
ಗಣ್ಯ ಮಾನ್ಯ ಎನಬೇಡ ಸೃಷ್ಠಿಕರ್ತನೇ ಅಗಾಧ
ಅಗಮ್ಯ
ಅಂತಸ್ತು ಹಣ ಸಿರಿತನವೇ ದೊಡ್ಡದಲ್ಲ
ಸೃಷ್ಠಿಯ ಗಾಳಿ ನೀರು ಆಹಾರ ಬೆಳಕು ಜೀವ
ಸಂಕುಲಗಳ ಮಹಾನ್
ಸೌಂದರ್ಯ ಮಹಲು ಉಡಿಗೆ ಕಾರು
ಸುಖಭೋಗವಲ್ಲ
ದೊರೆತ ಕ್ಷಣಗಳೇ ಆನಂದದ ಸಿರಿ
ಹಗೆತನ ಮಾನವ ಮಾನವನಿಗೆ ಹಂಗುತನ
ಪ್ರಾಣಿ ಪಕ್ಷಿ ಸಂಕುಲಗಳ ಸ್ನೇಹಕ್ಕಿಲ್ಲ ಕುಂದುತನ
ಮಾನವ ರೋಗಕಾರಕ ಸೂಕ್ಷ್ಮಜೀವಿಗಳು
ದೇಹ ಹೊಕ್ಕಾಗ ಮರಣ ರೋಧನ
ಮಾನವ ಸ್ವಾರ್ಥಕ್ಕಾಗಿ ಸೃಷ್ಠಿಯ ಸಿರಿ ನಾಶಕ
ತಡೆ ಸಾರ್ಥಕತೆ ಮೆರೆ
ಔಷಧಿಗಳೇ ಆಹಾರವಾಗಿಸದೇ
ಪೋಷಕಾಂಶಯುಕ್ತ ಆಹಾರವೇ
ಔಷಧಿಯಾಗಿಸಿ
ವಿಶ್ರಾಂತಿಗಾಗಿ ಸಮಯ ಕಳೆಯದೇ
ಕಾಯಕದಲಿ ಬದಲಾಯಿಸಿ ಶಾಂತಿ ನೆಮ್ಮದಿ
ಜೀವನ ಸಾಗಿಸಿ
ದ್ವೇಷ ಅಸೂಯೆ ಕೋಪ ಅಹಂಕಾರ ಸೇಡು
ನಮ್ಮನ್ನು ಸೋಲಿಸುವ ಶಸ್ತ್ರಗಳು
ಪ್ರೀತಿ ನಂಬಿಕೆ ಸುಗುಣ ಸುಕಾರ್ಯ ಸುಭಾವ
ನಿಜ ಮಾನವ ರಕ್ಷಕ ಸೂತ್ರದ ಅಸ್ತ್ರಗಳು
ಭ್ರಷ್ಠತೆ ನಯವಂಚಕತನ ಕಿಂಕರ ಭಾವ
ಸತ್ಯತೆ ಪ್ರಾಮಾಣಿಕತೆ ನೇರ ನಿಷ್ಠುರತೆ
ಮನೋಭಾವ
ನಿಜ ಜಗದ ಮಾನವ ಧರ್ಮದ ಜಯತೆ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು.
ಬಾಗಲಕೋಟ.