ಇಷ್ಟು ಬಿಲ್ ಬಂದರೆ ಆತ್ಮ ಹತ್ಯೆ ಮಾಡ್ಕೊಬೇಕಾ ? ವಿದ್ಯುತ್ ಕುಂದುಕೊರತೆಗಳ ಸಂವಾದ ! ಸಭೆಯಲ್ಲಿ ಗ್ರಾಹಕರ ಆಕ್ರೋಶ.
ಇಂಡಿ ಜೂನ್.19

ಇಂಡಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಗ್ರಾಹಕರ ಕುಂದುಕೊರತೆಗಳ ಸಂವಾದ ನಡೆಯಿತು. ವಿದ್ಯುತ್ ಬಿಲ್ ಏಕಾಏಕಿ ಹೆಚ್ಚು ಬಂದಿರುವ ಬಗ್ಗೆ ಆಕ್ಷೇಪಗಳು ಕೇಳಿ ಬಂದವು. ಬಡವರ ಉದ್ದಾರ ಮಾಡುತ್ತೇವೆ ಎನ್ನುವ ಸರಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಗ್ರಾಹಕರ ಪರವಾಗಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದರು.ಅತೀ ಹೆಚ್ಚು ಮೊತ್ತದ ವಿದ್ಯುತ್ ಬಿಲ್ಲು ಈ ತಿಂಗಳು ಬಂದಿದ್ದು ರೈತರಾದ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಎಂದು ಅಕ್ರೋಶ ವ್ಯಕ್ತಪಡಿಸಿದರು. ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಆರ್.ಮೆಂಡೆಗಾರ ಉತ್ತರಿಸಿ ವಿದ್ಯುತ್ ಬಳಕೆಯೂ ಹೆಚ್ಚಾಗಿದೆ. ಮೂರು ಹಂತದಲ್ಲಿರುವುದು ಎರಡೇ ಹಂತ ಮಾಡಿದ್ದಾರೆ. ನೂರು ಯುನಿಟ್‌ಗಿಂತ ಹೆಚ್ಚಿಗೆ ಬಂದ ಒಟ್ಟು ವಿದ್ಯುತ್ ಬಳಕೆಗೆ ಹೆಚ್ಚಿನ ದರ ವಿಧಿಸಲಾಗಿದೆ. ಏಪ್ರೀಲ ನಿಂದ ಪೂರ್ವಾನ್ವಯವಾಗುವಂತೆ ದರ ವಿಧಿಸಲು ಸೂಚನೆ ನೀಡಿರುವ ಕಾರಣ ಎಲ್ಲ ಕಡೆ ಬಿಲ್ ಹೆಚ್ಚಾಗಿದೆ ಎಂದು ಸಮಜಾಯಿಸಿ ನೀಡಿ ತಾಂತ್ರಿಕ ಕಾರಣದಿಂದ ವಿದ್ಯುತ್ ಬಿಲ್ ಏರು ಪೇರಾಗಿದ್ದರೆ ಪರಿಶೀಲಿಸಿ ಬಿಲ್ ಸರಿಪಡಿಸಲಾಗುವದು ಎಂದರು.ಗ್ರಾಹಕರು ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ತೊಂದರೆ,ವಿದ್ಯುತ್ ಕಂಬ ಹಾಕಲು, ಟ್ರಾನ್ಸ ಫರ‍್ಮರ ಅಳವಡಿಕೆ ಕುರಿತು ಗ್ರಾಹಕರು ಕೇಳಿದ ಪ್ರಶ್ನೆಗೆ ಗಮನ ಹರಿಸಿ ಸೂಕ್ತ ಕ್ರಮಕೈಕೊಳ್ಳಲಾಗುವದು ಎಂದು ಮೆಂಡೆಗಾರ ಉತ್ತರಿಸಿದರು.ಸಹಾಯಕ ಅಭಿಯಂತರ ಡಿ.ಎಂ.ಮೂಲಿಮನಿ,ಕಿರಿಯ ಅಭಿಯಂತರಾದ ಆರ್.ಆರ್.ಲಾಳಸಂಗಿ,ಆರ್.ವಿ.ಕುಂಬಾರ,ಆರ್.ಕೆ.ಚವ್ಹಾಣ ಮಾತನಾಡಿದರು. ವಿವಿಧ ಗ್ರಾಮಗಳಿಂದ ಗ್ರಾಹಕರು ಪಾಲ್ಗೊಂಡಿದ್ದ