ಮತದಾರರೇ ನನ್ನ ಪಾಲಿನ ದೇವರು — ಯಶವಂತರಾಯಗೌಡ ಪಾಟೀಲ.
ಇಂಡಿ ಜೂನ್.19

ಇಂಡಿ ನನ್ನನ್ನು ಮೂರನೆಯ ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಲು ಶ್ರಮಿಸಿದ ನನ್ನ ಪಾಲಿನ ದೇವರಾದ ಕಾರ್ಯಕರ್ತ ಬಂಧುಗಳು ಮತ್ತು ಮತದಾರರಿಗೆ ಸದಾ ಚಿರಋಣಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ವಿಜಯಪುರ ರಸ್ತೆಯ ಬುದ್ಧ ವಿಹಾರ ಸಭಾಂಗಣದಲ್ಲಿ ಇಂಡಿ ತಾಲೂಕಾ ಛಲವಾದಿ ಸಮುದಾಯದಿಂದ ಶಾಸಕರಾದ ಯಶವಂತರಾಯಗೌಡ ಪಾಟೀಲ,ವಿಠ್ಠಲ ಕಟಕದೊಂಡ ಮತ್ತು ಸಹಕಾರಿ ಇಲಾಖೆ ಉಪ ನಿಬಂಧಕ ಚಿದಾನಂದ ನಿಂಬಾಳ ರವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ೨೦೨೩ ಚುನಾವಣೆ ಮುನ್ನ ೩ ಬಾರಿ ಜಿ.ಪಂ, ಮೂರು ಬಾರಿ ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ್ದೇನೆ. ಎಲ್ಲ ಚುನಾವಣೆಗಳಲ್ಲೂ ಅಂತಿಮ ಕ್ಷಣದ ವರೆಗೂ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಸಂದಿಗ್ದ ವೇಳೆಯಲ್ಲಿ ಮುಖಂಡರು,ಕಾರ್ಯಕರ್ತರು,ಹಿತೈಷಿಗಳು ನನಗೆ ಆತ್ಮ ಸ್ಥೈರ್ಯ ತುಂಬುವ ಮೂಲಕ ನೆರವಿಗೆ ಧಾವಿಸಿದ್ದಾರೆ.ನನ್ನನ್ನು ಶಾಸಕನನ್ನಾಗಿ ಮಾಡಿದ ಸ್ವಾಭಿಮಾನಿ ಕಾರ್ಯಕರ್ತರನ್ನು ಪಡೆದ ನಾನೇ ಪುಣ್ಯವಂತ ಎಂದು ಹರ್ಷ ವ್ಯಕ್ತಪಡಿಸಿದರು. ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ಹಿಂದುಳಿದ ಸಮುದಾಯದವರು ರಾಜಕೀಯ,ಸಾಮಾಜಿಕ,ಅರ್ಥಿಕವಾಗಿ ಮುಂದೆ ಬರಲು ಶಿಕ್ಷಣವೇ ಮುಖ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತ ಕಾಳೆ ಬುದ್ಧ ವಿಹಾರ ಕಟ್ಟಡಕ್ಕೆ ಶಾಸಕರು ಅನುದಾನ ನೀಡಿ ತಾಲೂಕು ಮಟ್ಟದಲ್ಲಿ ಅತೀ ಸುಂದರವಾದ ಬುದ್ದ ವಿಹಾರ ನಿರ್ಮಾಣ ಮಾಡಲು ಮತ್ತು ಅಂಬೇಡ್ಕರ ಭವನಗಳಲ್ಲಿ ಗ್ರಂಥಾಲಯ ಮಾಡಿ ಸಹಕರಿಸಲು ಕೇಳಿಕೊಂಡರು.ಅಣದೂರ ಬುದ್ಧ ವಿಹಾರದ ವರಜ್ಯೋತಿ ಭಂತೇಜಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜು ಅಲಗೂರ,ಚಂದ್ರಶೇಖರ ಕೊಡಬಾಗಿ,ಸಂಜೀವ ಜಗದೇವ,ಅಂಜನೆಯ ಹೊಸಮನಿ,ಮಾಡ್ಯಾಳ ಗುರುಗಳು, ಪರಶುರಾಮ ನಾರಾಯಣಪುರ ಮಾತನಾಡಿದರು.ವೇದಿಕೆಯ ಮೇಲೆ ಅಧ್ಯಕ್ಷತೆ ವಹಿಸಿದ ಭೀಮಾಶಂಕರ ಮೂರಮನ,ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ ಮೋಮಿನ್,ಜಟ್ಟೆಪ್ಪ ರವಳಿ,ಬಸವರಾಜ ಕಣ್ಣಿ,ಕೆ.ಎಲ್.ನಡುವಿನಮನಿ,ಬಿ.ಜಿ.ಗಡ್ಡದ,ಇಲಿಯಾಸ ಬೋರಾಮಣಿ,ಶ್ರೀಮತಿ ನಿರ್ಮಲಾ ತಳಕೇರಿ,ಶ್ರೀಮತಿ ಶೈಲಜಾ ಜಾಧವ,ಸಂತೋಷ ಪರಸೆನ್ನವರ ಮತ್ತಿತರಿದ್ದರು.