ವಿಶ್ವ ಯೋಗ ದಿನ.
ಇಂದು ವಿಶ್ವದೆಲ್ಲಡೆ ಯೋಗ ದಿನ
ಯೋಗ ಮಾಡಿರಿ ತಪ್ಪದೇ ಪ್ರತಿದಿನ
ಸಂದೇಹವೇ ಬೇಡ ನಿತ್ಯ ಆರೋಗ್ಯದಿನ
ಸೀಮಿತವಾಗದಿರಲಿ ಯೋಗ ಕೇವಲ ಈ ದಿನ.
ನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯ
ರೋಗದಿ ದೂರವಿರಲು ಯೋಗವೇ ಸೌಭಾಗ್ಯ
ದೇಹಕ್ಕೆ ಯೋಗವಿರದಿದ್ದರೆ ಬದುಕು ದೌರ್ಭಾಗ್ಯ
ಯೋಗದಿಂದ ಯೋಗಿಯಾಗಿ ಸಮಾಜಕ್ಕಾಗಿ ಯೋಗ್ಯ.
ವಿಶ್ವ ಯೋಗ ದಿನ ಜೂನ್ ಇಪ್ಪತ್ತೊಂದು
ಬೇಕಾಗಿದೆ ಯೋಗವು ಸದೃಢ ದೇಹಕ್ಕಿಂದು
ದೇಹದ ಕೊಬ್ಬು ಕರಗಿಸಲು ಯೋಗ ಸದಾ ಮುಂದು
ಯೋಗದ ಪಿತಾಮಹ ಪತಂಜಲಿಗೆ ನಮಸ್ಕಾರವಿಂದು.
ದಿನಕ್ಕೊಮ್ಮೆ ನಿಗದಿತ ಸಮಯಕ್ಕಿರಲಿ ಯೋಗ
ದೂರ ಸರಿಯುವದು ಬರುವ ರೋಗ
ನಿಲ್ಲಲಿ ಜಂಕ್ ಫುಡ್ ಗಳನ್ನ ತಿನ್ನುವಲ್ಲಿ ವೇಗ
ಯೋಗವು ಉತ್ತಮ ಆರೋಗ್ಯದ ಒಂದು ಭಾಗ.
ಯೋಗ ಪ್ರತಿಯೊಬ್ಬರಿಗೂ ಅವಶ್ಯಕ
ಬೆಳಗಿನ ಜಾವ ಯೋಗವಾಗಲಿ ಕಾಯಕ
ಭಾರತದಿಂದ ವಿಶ್ವಕ್ಕೆ ಆಗಿದೆ ಯೋಗ ಪ್ರೇರಕ
ಯೋಗವಿಲ್ಲದ ಬದುಕು ಆರೋಗ್ಯಕ್ಕೆ ಹಾನಿಕಾರಕ.
ಬೆಳಗಿನ ಜಾವಕ್ಕಿರಲಿ ಸೂರ್ಯ ನಮಸ್ಕಾರ
ಅನುಲೋಮ ವಿಲೋಮ ದೇಹಕ್ಕೆ ಉಪಯೋಗಕರ
ಪ್ರಾಮಾಣಿಕ ಯೋಗದಿ ಜೀವನ ಆರೋಗ್ಯಕರ
ಖ್ಯಾತ ಯೋಗಿಗಳಿಗೆ ಸಲ್ಲಿಸೋಣ ನಮಸ್ಕಾರ.
ಮುತ್ತು.ಯ.ವಡ್ಡರ (ಶಿಕ್ಷಕರು)ಬಾಗಲಕೋಟ