ಎಸ್. ಡಿ.ಎಂ.ಸಿ. ಮತ್ತು ಸಿ. ಐ. ಟಿ ಯು. ವತಿಯಿಂದ ಶಾಲಾ ಮೂಲ ದಾಖಲಾತಿಯ ಪ್ರಕಾರ ನಮೂದಿಸಲು ಒತ್ತಾಯಿಸಿ ಮನವಿ.
ಕೂಡ್ಲಿಗಿ ಜೂನ್.21

ವಿಜಯನಗರ ಜಿಲ್ಲೆ, ಕೂಡ್ಲಿಗಿ ಪಟ್ಟಣದಲ್ಲಿ ಮಂಗಳವಾರದಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ ಇವರ ನೇತೃತ್ವದಲ್ಲಿ ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್ ಟಿ ಶ್ರೀನಿವಾಸ್ ಇವರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ್ಲಿಗಿ ಮತ್ತು ಡಿ. ಡಿ. ಪಿ. ಐ. ವಿಜಯನಗರ ಜಿಲ್ಲೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಇವರಗಳಿಗೆ ಮಾನ್ಯ ತಾಲೂಕು ದಂಡಾಧಿಕಾರಿಗಳ ಮುಖಾಂತರ ಹತ್ತಾರು ಹೋರಾಟಗಾರರು ಭಾಗವಹಿಸಿ ಮನವಿಯನ್ನು ಕೊಡಲಾಯಿತು, “ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಯಾಗಲಿ” ಎಂಬ ದ್ಯೇಯವನ್ನು ಇಟ್ಟುಕೊಂಡು ಸರ್ಕಾರಿ ಶಾಲೆಗಳ ಶಿಕ್ಷಣಕ್ಕೆ ಬೇಕಾಗುವ ಶಾಲೆಗಳ ಸುವ್ಯವಸ್ಥೆಯ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಎಸ್. ಡಿ. ಎಂ. ಸಿ ಸದಸ್ಯರುಗಳು ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಮುಂದಿನ ತರಗತಿಗೆ ಹೋಗುವಂತ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರವನ್ನು ಮತ್ತೊಂದು ಶಾಲೆಗೆ ಕಳಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆಸರುಗಳನ್ನು ನಮೂದಿಸುವಾಗ ಇನ್ಸೆಲ್ಗಳನ್ನು ತಪ್ಪಾಗಿ ಆನ್ಲೈನ್ ಮೂಲಕ ಸೇರಿಸಿ ಪುನಹ ಟಿ.ಸಿ ಕೊಡುವಾಗ ತಪ್ಪಾಗಿರುವುದನ್ನು ಶಿಕ್ಷರಿಗೆ ತಿಳಿಸಿದಾಗ ಟಿ.ಸಿ ಯಲ್ಲಿ ತಪ್ಪಾಗಿರುವ ಅಕ್ಷರವನ್ನು ಗೆರೆ ಎಳೆದು ಶಾಲೆಯ ಸೀಲ್ಹ್ ಹಾಕಿ ಸಹಿ ಮಾಡಿ ಕಳಿಸುತ್ತಾರೆ, ಆದ್ದರಿಂದ ಇದು ಆನ್ಲೈನ್ ಮೂಲಕ ನೊಂದಾಣಿ ಆಗಿರುವುದರಿಂದ ಮುಂದಿನ ದಿನಮಾನಗಳಲ್ಲಿ ಸರ್ಕಾರಿ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಗಳಾಗುವ ಸಂಭವವಿದೆ ಕಾರಣ ಹೆಸರಿನ ಪ್ರಾರಂಭದ ಮುಂದೆ ಇರುವಂತಹ ಇನ್ಸೆಲ್ಗಳ ಹೆಸರಿನ ಕೊನೆಯ ಭಾಗದಲ್ಲಿ ಹಾಕುವುದು ಹಾಗೆ ತಂದೆ ತಾಯಿಯ ಹೆಸರುಗಳನ್ನು ತಪ್ಪಾಗಿ ನಮೂದಿಸುವುದು ಹೀಗೆ ಅನೇಕ ರೀತಿಗಳ ನಮೂದಿಸಿರುವ ತಪ್ಪುಗಳ ವಿರುದ್ಧ ಸರ್ಕಾರದ ಸಂಬಂಧಪಟ್ಟಂತಹ ಸಚಿವರಿಗಳಿಗೂ ಹಾಗೂ ಶಾಸಕರಿಗೂ ಅಧಿಕಾರಿಗಳಿಗೂ ಕೂಡ್ಲಿಗಿ ತಾಲೂಕು ಸಿ.ಎ. ಟಿ.ಯು. ಮತ್ತು ಎಸ್. ಡಿ. ಎಮ್. ಸಿ ಸಂಘಟನೆಯವರು ಮಾನ್ಯ ತಹಶೀಲ್ದಾರ್ ಮೂಲಕ ಮನವಿಯನ್ನು ನೀಡಿರುತ್ತಾರೆ.

ಇದನ್ನು ಶೀಘ್ರದಲ್ಲೇ ಸರ್ಕಾರವು ಪರಿಗಣನೆಗೆ ತೆಗೆದುಕೊಂಡು ರಾಜ್ಯದ್ಯಾಂತ ಎಲ್ಲಾ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವರವರ ಹೆಸರುಗಳ ಇನ್ಸಲ್ಗಳು ತಂದೆ-ತಾಯಿಗಳ ಹೆಸರುಗಳು ತಪ್ಪಾಗದಂತೆ ಎಲ್ಲಾ ಪೋಷಕರಗಳ ಹೇಳಿಕೆಗಳನ್ನು ಹಾಗೂ ಆಧಾರ್ ಕಾರ್ಡ್, ಚುನಾವಣಾ ಕಾರ್ಡ್, ಅಥವಾ ರೇಷನ್ ಕಾರ್ಡ್, ಪಡೆದುಕೊಂಡು ನಮೂದಿಸಿದರೆ ಮುಂದಿನ ದಿನಮಾನಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ಗುನ್ನಳ್ಳಿ ರಾಘವೇಂದ್ರ ಇವರು ತಿಳಿಸಿರುತ್ತಾರೆ,ಈ ಸಂದರ್ಭದಲ್ಲಿ ಟಿ. ಭಾಗ್ಯಮ್ಮ,ಲಕ್ಷ್ಮಿ ದೇವಿ, ಬಂಗಾರಯ್ಯ,ಕರಿಯಣ್ಣ ಹೊನ್ನೇಶ,ಹುಲುಗಪ್ಪ, ಸತೀಶ,ಇನ್ನು ಮುಂತಾದ ಹೋರಾಟಗಾರರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ