ಚಪ್ಪರದಹಳ್ಳಿ ರಸ್ತೆ ಗುಂಡಿಗಳ ತಾಣ – ರಸ್ತೆ ದುರಸ್ಥಿತಿಗೆ ಸಾರ್ವಜನಿಕರ ಆಗ್ರಹ.
ಚಪ್ಪರದಹಳ್ಳಿ ನ.16

ಕೊಟ್ಟೂರಿನ ಬಳ್ಳಾರಿ ಕ್ಯಾಂಪಿನಲ್ಲಿರುವ ಆಫೀಸ್ ಎಂಬ ಬೈಕ್ ಸವಾರ ಇದೇ ರಸ್ತೆಯಲ್ಲಿ ಬಿದ್ದು ತುಂಬಾ ಗಾಯಗೊಂಡ ಹೊಸಪೇಟೆ ಪುತ್ತೂರು ಆಸ್ಪತ್ರೆಯಲ್ಲಿ ತನ್ನ ಬಲಗೈ ಭುಜಕ್ಕೆ ಆಪರೇಷನ್ ಆಗಿರುತ್ತದೆ. ಇದರ ಖರ್ಚು 90 ರಿಂದ 1 ಲಕ್ಷ ದವರೆಗೆ ಆಗಿರುತ್ತದೆ. ಸವಾರ ನಾದ ಆಫೀಸ್ ರವರು ಪ್ರತಿದಿನ ಹಣ್ಣಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು.

ಈಗ ಆ ಕುಟುಂಬದ ಪರಿಸ್ಥಿತಿ ಏನು ಇದು ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯತನವೇ ಸರಿ. ಈ ರಸ್ತೆಯಲ್ಲಿ ಸುಮಾರು ಅಪಘಾತಗಳಾಗಿ ಸಾವು ಕೂಡ ಸಂಭವಿಸಿರುವುದು ಬಹಳ ದಿನಗಳೇನು ಆಗಿಲ್ಲ. ಆದರೆ ಪದೇ ಪದೇ ಇದೇ ರೀತಿ ಆಗುವುದು ಎಷ್ಟರ ಮಟ್ಟಿಗೆ ಸರಿ ದಯವಿಟ್ಟು ಇನ್ನಾದರೂ ಅಧಿಕಾರಿಗಳು ಎಚ್ಚರ ವಹಿಸಬೇಕು. ಜನರ ಪ್ರಾಣದ ಜೊತೆ ಚೆಲ್ಲಾಟವಾಡ ಬೇಡ ಶಾಸಕರಾದ ಕೆ.ನೇಮಿರಾಜ್ ನಾಯಕ್ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಇವರು ಬೇಗನೆ ಅಧಿಕಾರಿಗಳಿಗೆ ರಸ್ತೆ ದುರಸ್ಥಿ ಮಾಡಿಸಬೇಕೆಂದು ಇಲ್ಲಿನ ಸಾರ್ವಜನಿಕರು ಈ ನಮ್ಮ ಸುದ್ದಿ ಮೂಲಕ ಮನವಿ ಮಾಡಿ ಕೊಂಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು