ಕರ್ನಾಟಕ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ಎಂ.ಈಶ್ವರಪ್ಪ ಸಿದ್ದಾಪುರ.
ಬಾಗಲಕೋಟ ಆಗಷ್ಟ. 3
ಕರ್ನಾಟಕ ಪತ್ರಕರ್ತರ ಸಂಘ ರಾಜ್ಯ ಸಮಿತಿಯಿಂದ ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನ ಬಾಗಲಕೋಟೆ ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಿಲಾಗಿತ್ತು ಸಭೆಯ ಸಾನಿಧ್ಯವನ್ನ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೋಜ್ಯ ಶ್ರೀ ಅಲ್ಲಮಪ್ರಭು ಸಾಮೀಜಿಗಳು ವಹಿಸಿದ್ದರು. ಕಾರ್ಯಕ್ರಮಮದ ಮುಖ್ಯ ಅಥಿತಿಗಳಾಗಿ ಬಾಗಲಕೋಟೆಯ ಶಾಸಕರಾದ ಎಚ್. ವೈ. ಮೇಟಿಯವರು ಆಗಮಿಸಿ ಸಮಾರಂಭವನ್ನ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನ ಮುರುಗೇಶ ಶಿವಪೂಜಿ ವಹಿಸಿದ್ದರು ಈ ಸಂದರ್ಭದಲ್ಲಿ ಮಾತನಾಡಿ ಸಂಘವು ಪ್ರಾರಂಭದಿಂದಲೂ ಸರ್ಕಾರ ಮತ್ತು ಯಾರಿಂದಲೂ ಸಹಾಯ ನಿರೀಕ್ಷೆ ಮಾಡದೆ ಸದಸ್ಯರಿಗೆ ಮಾಡುತ್ತಿರುವ ಸಹಾಯಗಳನ್ನ ತಿಳಿಸಿದರು, ಸಂಪಾದಕರು ಮತ್ತು ವರದಿಗಾರರಲ್ಲದೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಸದಸ್ಯರಿಗೆ ಆಕಸ್ಮಿಕ ಅಪಘಾತ ಹೊಂದಿದ ಇತರೆ ಅನಾರೋಗ್ಯದ ಸಮಸ್ಯೆಯಿಂದ ನಿಧನ ಹೊಂದಿದ ಫಲಾನುಭವಿಗೆ 4 ಲಕ್ಷ ರೂ ವಿಮೆ ಅನ್ವಯಿಸುತ್ತದೆ ಎಂದು ತಿಳಿಸಿದರು ಮತ್ತು ನಮ್ಮ ಸಂಘದ ಯಾರಾದರೂ ಪದಾಧಿಕಾರಿಗಳಿಗೆ ಅನಾರೋಗ್ಯ ಹಾಗೂ ಇತರೆ ತೊಂದರೆಗೊಳಗಾದರೆ ಹಣಕಾಸಿನ ಸಹಾಯ ಮಾಡುತ್ತಿದೆ ಎಂದು ಹೇಳಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.

ಇದೇ ಸಂಧರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಡಿ ಎಂ ಈಶ್ವರಪ್ಪ, ಸಿದ್ದಾಪುರ ಅವರನ್ನು ಸಂಘದ ರಾಜ್ಯ ಕಾರ್ಯದರ್ಶಿ ಗಳಾದ ಕೆ. ಗೋಪಾಲ್ ಅವರು ಈಶ್ವರಪ್ಪ ಅವರನ್ನು ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದರು, ಅದನ್ನು ವಿಜಯನಗರ ಜಿಲ್ಲೆಯ ನೂತನ ಅಧ್ಯಕ್ಷರಾದ ಬಿ. ಹೆಚ್. ಎಸ್. ರಾಜು ಅನುಮೋದಿಸಿದರು ನಂತರ ರಾಜ್ಯಾಧ್ಯಕ್ಷರಾದ ಶ್ರೀಯುತ ಮುರುಗೇಶ್ ಬಿ. ಶಿವಪೂಜಿ ಅವರು ಘೋಷಣೆಯನ್ನು ಮಾಡಿದರು.ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸುದೇಶ್ ಹೆಗಡೆ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಹಾಗೂ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಹಾಗೂ ಕೂಡ್ಲಿಗಿ ತಾಲೂಕಿನ ಕರ್ನಾಟಕ ಪತ್ರಕರ್ತ ಸಂಘದ ಸದಸ್ಯರುಗಳಾದ ಜಿಲ್ಲಾ ಸಮಿತಿಯ ಸದಸ್ಯರಾದ ಮುರುಳಿಧರ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಸಾಲಮನಿ ಉಪಾಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ, ಸದಸ್ಯರುಗಳಾದ ಹೊಂಬಾಳೆ ತಿಪ್ಪೇಸ್ವಾಮಿ, ನಂದೀಶ,ಹೊನ್ನೂರಪ್ಪ, ಲಿಂಬೆ ನಾಯಕ್, ಭರತ್ ಕುಮಾರ್, ಪದಾಧಿಕಾರಿಗಳು, ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಲಮನಿ.ಕೂಡ್ಲಿಗಿ