ಕೂಡ್ಲಿಗಿ ಪಟ್ಟಣದ ನೂರಾರು ರೈತ ಕುಟುಂಬಸ್ಥರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ – ಕೊಟ್ಟ ಡಾ, ಎನ್.ಟಿ ಶ್ರೀನಿವಾಸ್ ಶಾಸಕರು.

ಕೂಡ್ಲಿಗಿ ಫೆ.28

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರಂದು ಕೂಡ್ಲಿಗಿ ಪಟ್ಟಣದ ನೂರಾರು ರೈತ ಮುಖಂಡರುಗಳು ನೇರೆದಿದ್ದು, ಕಾರಣ 40 ವರ್ಷಗಳಿಂದ ಕೂಡ್ಲಿಗಿ ಪಟ್ಟಣದ ನೂರಾರು ರೈತ ಕುಟುಂಬಸ್ಥರು ಪಟ್ಟಣದಲ್ಲಿ ಹಾದು ಹೋಗಿರುವ ವಿದ್ಯುತ್ ಸಂಪರ್ಕವನ್ನು ಈಗಾಗಲೇ ಸುಮಾರು 40 ವರ್ಷಗಳಿಂದ ಪಟ್ಟಣದ ಪಕ್ಕದಲ್ಲಿ ವಿದ್ಯುತ್ತನ್ನು ಜಮೀನು ಮಾಡುವಂತಹ ರೈತರು ಉಪಯೋಗಿಸಿ ಕೊಳ್ಳುತಿದ್ದು, ಕಾರಣ ಕೂಡ್ಲಿಗಿ ಪಟ್ಟಣದ ಅನೇಕ ರೈತರು ಭೂಮಿಯನ್ನೇ ನಂಬಿ ಜೀವನವನ್ನು ಸಾಗಿಸುತ್ತಾ ಇವತ್ತಿಗೂ ಮುಂದುವರಿಸಿದ್ದಾರೆ.ಆದ್ದರಿಂದ ಇಷ್ಟು ವರ್ಷಗಳ ಕಾಲ 4 ರಿಂದ 5 ಶಾಸಕರು ಬಂದು ಹೋದರು ಅಧಿಕಾರಿಗಳು ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆ ಮಾಡ್ಲಿಲ್ಲ, ಆದರೆ ಕೂಡ್ಲಿಗಿ ಪಟ್ಟಣದ ಯಾವುದೇ ರೈತರಿಗೂ ತೊಂದರೆ ಆಗದಂತೆ ಪಟ್ಟಣದಿಂದ ಸರಬರಾಜು ಆಗಿರುವಂತಹ ಬೋರ್ವೆಲ್ ಗಳಿಗೆ ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಕೊಡುವಂತೆ ಎಲ್ಲಾ ಶಾಸಕರು ಸರ್ಕಾರದ ಅಧಿಕಾರಿಗಳಿಗೆ ಖಡಕ್ಕಾಗಿ ಹೇಳಿದ್ದರಿಂದ ಯಾವುದೇ ಅಧಿಕಾರಿಗಳು ಸಂಪರ್ಕಗಳನ್ನು ಕಡಿತ ಗೊಳಿಸಿರಲಿಲ್ಲ ಆದರೆ ಈ ಬಾರಿ ಮಾನ್ಯ ಸ್ಥಳೀಯ ಶಾಸಕರಿದ್ದರು ಅಧಿಕಾರಿ ವರ್ಗದವರು ಬೋರ್ ವೆಲ್ ಇರುವಂತಹ ರೈತರ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರದೆ ತಮ್ಮ ಕಾನೂನು ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಆಗುತ್ತಿರುವಂತಹ ವಿದ್ಯುತ್ ಕಂಬಗಳ ಲೈನ್ ಅನ್ನು ವಿದ್ಯುತ್ ಕಡಿತ ಗೊಳಿಸಿದ್ದಾರೆ. ಈ ವಿಷಯ ತಿಳಿದ ರೈತರುಶಾಸಕರಿಗೆ ತಿಳಿಯದಾಗೆ ರೈತರನ್ನು ಒಕ್ಕಲೆಬ್ಬಿ ಸುವಂತಹ ಕೆಲಸ ಮಾಡಿದ್ದರು.ಆದ್ದರಿಂದ ನೂರಾರು ರೈತರು ಮಾನ್ಯ ಶಾಸಕರಾದ ಎನ್.ಟಿ ಶ್ರೀನಿವಾಸ್ ಇವರನ್ನು ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರಂದು ರೈತರನ್ನು ಉದ್ದೇಶಿಸಿ ಶಾಸಕರು ಮಾತನಾಡುತ್ತಾ ಕೂಡ್ಲಿಗಿ ಪಟ್ಟಣದ ಜೆಸ್ಕಾಂನ ಅಧಿಕಾರಿಗಳಾದ ಏಕಾಂತ್ ಇವರ ಸಮ್ಮುಖದಲ್ಲಿ ಸಂಬಂಧ ಪಟ್ಟಂತಹ ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ. ಕೂಡ್ಲಿಗಿ ಪಟ್ಟಣದ ರೈತರ ಸಮಸ್ಯೆಯನ್ನು ಸಂಪೂರ್ಣವಾಗಿ ಮನವರಿಕೆ ಆಗುವಂತೆ ತಿಳಿಸಿ ಇಲ್ಲಿನ ರೈತರು ಪಟ್ಟಣದ ವಿದ್ಯುತ್ ಸಂಪರ್ಕವನ್ನು ಪಡೆದು ಕೊಂಡಿರುವ ಎಲ್ಲಾ ರೈತರು ಬೇಸಿಗೆ ಸಮಯದಲ್ಲಿ ಬೋರ್ವೆಲ್ ಗಳ ನೀರನ್ನು ನಂಬಿಕೊಂಡು ಬೆಳೆಯ ಫಲದಿಂದ ಜೀವನ ಸಾಗಿಸುತ್ತಿದ್ದಾರೆ.

ಆದ್ದರಿಂದ ನಮ್ಮ ಕೂಡ್ಲಿಗಿ ಪಟ್ಟಣದ ಎಲ್ಲಾ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸ ಬಾರದು ಹಾಗೂ ರೈತರಿಗೆ ಸಮರ್ಪಕವಾಗಿ ಇಂದಿನ ದಿನದಿಂದಲೂ ಸರಬರಾಜು ಆಗುತ್ತಿರುವಂತಹ ವಿದ್ಯುತ್ತನ್ನು ಆಯಾ ರೈತರಿಗೆ ಯಥಾವತ್ತಾಗಿ ವಿದ್ಯುತ್ ಕಲ್ಪಿಸಿ ಕೊಡಬೇಕೆಂದು ದೂರವಾಣಿಯ ಮೂಲಕ ಸಂಬಂಧ ಪಟ್ಟಂತಹ ಮೇಲಾಧಿಕಾರಿಗಳಿಗೆ ತಿಳಿಸಿ. ರೈತರಿಗೆ ಬೋರ್ವೆಲ್ ಗಳೇ ಜೀವ ನಾಡಿಯಾಗಿರುವ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಡುವಂತೆ ಕೂಡ್ಲಿಗಿ ಸಹಾಯಕ ಅಭಿಯಂತರರು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ತಾವುಗಳು ಸೂಚನೆ ನೀಡಬೇಕೆಂದು ದೂರವಾಣಿಯ ಮೂಲಕ ತಿಳಿಸಿದರು.ಹಾಗೆ ಕೂಡ್ಲಿಗಿ ತಾಲೂಕಿನ ಚೆಸ್ಕಾಂ ಅಧಿಕಾರಿಯದ ಏಕಾಂತ್ ಇವರಿಗೆ ನಾನು ಈ ತಾಲೂಕಿನ ಶಾಸಕರಾಗಿರುವ ವರೆಗೂ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ಯಾವುದೇ ಕಾರಣಕ್ಕೂ ಕಡಿತವಾಗ ಬಾರದು ರೈತರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ತಿಳಿಸಿದರು. ಹಾಗೆ ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ ಪ್ರಮುಖ ಮುಖಂಡರುಗಳಾದ ಪಟ್ಟಣ ಪಂಚಾಯತಿ ಸದಸ್ಯರಾದ ಬಾಸು ನಾಯಕ್, ಡಿ ಅಜ್ಜಯ, ನಿರ್ಕಲಪ್ಪ ಅಜ್ಜಯ, ಶಿವಾನಂದಯ್ಯ,ಅಂಜಿ ಪುಟ್ಟಪ್ಪ, ಮೆಕ್ಕೆಲರ್ ಸಣ್ಣದುರ್ಗಪ್ಪ, ಗುಪ್ಪಲ್ ರಾಘವೇಂದ್ರ, ಅಂಜಿನಿ, ನಿರ್ಕಲಪ್ಪರ ನಿಂಗಣ್ಣ, ಭೀಮಪ್ಪ, ಗೊಂಬೆ ಮರಳಿಸಿದ್ದಪ್ಪ, ಕಡೆಮನಿ ಎರ್ರಿಸ್ವಾಮಿ, ಪೂಜಾರಿ ಶೇಖರ್ ನಾಯಕ್ ಜೆ. ದೊಡ್ಡಕರಿಯಪ್ಪ, ದೇವ್ಲ ನಾಯ್ಕ್,ವೆಂಕಟೇಶ್ ನಾಯ್ಕ್, ಗೋವಿಂದಪ್ಪ, ಶಂಕರ್ ನಾಯ್ಕ್, ರವಿ ನಾಯ್ಕ್, ಗೌಡ ಚಿತ್ತಪ್ಪ, ಕೃಷ್ಣಪ್ಪ ಗುರು ನಾಯ್ಕ್, ಶ್ರೀನಿವಾಸ್, ಇನ್ನು ನೂರಾರು ರೈತ ಮುಖಂಡರುಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು, ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ಕೊಡುವಂತೆ ಮಾನ್ಯ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button