“ನಿತ್ಯ ಸತ್ಯಜಗದ ಸಿರಿ”…..

ವಿಶ್ವದಲಿ ಜೀವನ ಚಕ್ರ ಬದುಕಿನ ಸ್ಪೂರ್ತಿಯು
ಮಳೆಗೆ ಇಳೆಯ ಸಮುದ್ರ ಚೇತನವು
ಮೀನಿಗೆ ನೀರು ಉತ್ಸಾಹವು
ಮನಸ್ಸಿಗೆ ನೆಮ್ಮದಿಯ ಸುಖಕರವು
ಉತ್ತಮ ಕಾಯಕಕ್ಕೆ ನಿಷ್ಠೆ ನಿಯತ್ತಿನ ನೀತಿ
ಹೃದಯಕ್ಕೆ ಶುದ್ಧತೆಯ ಹಸ್ತ ಲಾಘವದ ಬೀತಿ
ಕಣ್ಣೆಗೆ ಸೃಷ್ಠಿಯ ಸೌಂದರ್ಯದ ಒನಪು
ಉಸಿರಿಗೆ ಹಸಿರಿನ ಬೆಳಕಿನ ಸಿರಿಯು
ಕನಸಿಗೆ ನಿಷ್ಕಲ್ಮಶ ಕಲ್ಪನೆಯ ಭಾವ ಬೆಸುಗೆ
ಹಿರಿತನಕೆ ಸಹನೆಯ ಒಡೆತನದ ಗೌರವದ
ಏರಿಕೆ
ಕಿರಿತನಕೆ ತಾಳ್ಮೆಯ ಗುಣ
ಮೇಲೆತ್ತರಕೇರಿಸುವುದು
ಅನುಭವಕ್ಕೆ ಭಾಗ್ಯದ ಬೆಳಕಿನ ಕಿರಣದ
ಸ್ಪರ್ಶವು
ಗೆಳತನಕ್ಕೆ ನಿಶ್ವಾರ್ಥ ಸಹಾಯವೇ ಮೆರಗು
ಬಂಧುತ್ವಕ್ಕೆ ಕನಿಕರ ಕರುಳಿನ ಕೂಗು
ಜೀವನ ಪಯಣದಲಿ ಕ್ಷಣ ಕ್ಷಣವು
ನಿತ್ಯ ಸತ್ಯ ಜಗದ ಸಿರಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ