ಶಿಥಿಲಗೊಂಡಿರುವ ಶಾಲೆಯಿಂದ ಅಂಗನವಾಡಿ ಮಕ್ಕಳ ಜೀವ ಉಳಿಸಲು ಗ್ರಾಮಸ್ಥರ ಆಗ್ರಹ
ಎಂ.ಸಿ.ಹಳ್ಳಿ ಜೂನ್.25

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಸಾಬಾ ಹೋಬಳಿಯ ಕಳೆದ 15 ವರ್ಷಗಳಿಂದ ಎಂ ಸಿ ಹಳ್ಳಿ ಗ್ರಾಮದ ಮಧ್ಯೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಹೆಳತೀರದಾಗಿದೆ ಸ್ಥಳೀಯ ಜನ ಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಶಾಲೆಯು ನವೀಕರಣಗೊಳ್ಳದೆ ಕಟ್ಟಡ ನೆಲಸಮಗೊಳಿಸದೆ ಇರುವುದಕ್ಕೆ ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿತನದಿಂದ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟಾಗಿದ್ದು, ಗ್ರಾಮಸ್ಥರು ತೀವ್ರ ಆಕ್ಷೇಪಣೆಯನ್ನು ಮಾಡಿರುತ್ತಾರೆ.
ಎಂಬುದಕ್ಕೆ ಶಾಲಾ ಕಟ್ಟಡದ ದುರಾವಸ್ಥೆಯನ್ನು ನೋಡಿದಾಗ ಜನಸಾಮಾನ್ಯರಿಗೆ ವಾಸ್ತವ ಸ್ಥಿತಿಯ ಅರಿವಾಗಲಿದೆ 15 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳಾದ ಸವಕಯ್ಯ,ಕರಿಯಪ್ಪ,ಬಸವರಾಜು, ರಾಮಚಂದ್ರ,ಬಿಟಿ ಆನಂದ, ಜ್ಯೋತಿರವರು ಸಹ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ ಈಗಿನ ಅಧ್ಯಕ್ಷರಾದ ಶೋಭಾ ರವರು ಇದ್ದ ಕಡೆ ಗಮನ ಕೊಡುವರು ಕಾದು ನೋಡಬೇಕಾಗಿದೆ. ಇವರುಗಳ ಹಗ್ಗ ಜಗ್ಗಾಟದಿಂದ ಶಾಲೆಯ ಕಟ್ಟಡ ದುರಸ್ತಿ ಕಂಡಿಲ್ಲ ಈ ನಡುವೆ ಶಾಲೆಯ ಮುಂಬಾಗದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು ಸುಮಾರು 25 ಮಕ್ಕಳು ಅಂಗನವಾಡಿಯಲ್ಲಿ ಇರುತ್ತಾರೆ.
ಮಕ್ಕಳ ದೈಹಿಕ ಚಟುವಟಿಕೆಗೆ ಆಟದ ಮೈದಾನ ಇರುವುದಿಲ್ಲ.ಒಂದು ವೇಳೆ ಮಕ್ಕಳು ದುರಸ್ತಿ ಕಾಣದ ಶಾಲಾ ಆವರಣದಲ್ಲಿ ಆಟವಾಡಲು ಹೋದರೆ ಯಾವುದೇ ಸಂದರ್ಭದಲ್ಲಿ ಆದರೂ ಕಟ್ಟಡ, ಮೇಲ್ಚಾವಣಿ ಕುಸಿದು ಬಿದ್ದು,ಮಕ್ಕಳ ಜೀವ ಹಾನಿಯಾಗುವ ಸಾಧ್ಯತೆ ಇದೆ ಹಾಗೂ ಪಾಲುಬಿದ್ದ ಶಾಲೆಯಲ್ಲಿ ಹಾವು,ಚೇಳು,ಹುಳ ಉಪಟಳಗಳು ಇದ್ದು ಅವುಗಳಿಂದಲೂ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಇದೆ.
ರಾತ್ರಿ ಸಮಯದಲ್ಲಿ ಈ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.ಎಂದು ಗ್ರಾಮಸ್ಥರಾದ ಸಮಾಜ ಸೇವಕರು,ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಸಂಚಾಲಕರಾದ ವಿಜಯ್ ಕುಮಾರ್, ಡಿಶ್ ಏಳುಮಲೈ, ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್, ಮುಂತಾದವರು ಪತ್ರಿಕೆಯ ಮೂಲಕ ಸಂಬಂಧಪಟ್ಟ ಇಲಾಖೆಯವರಲ್ಲಿ ಕೋರಿದ್ದಾರೆ.
ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವ ಜಿಎಚ್ ಶ್ರೀನಿವಾಸ್ ರವರು ಇತ್ತ ಕಡೆ ಗಮನಹರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ತಕ್ಕ ನಿರ್ದೇಶನ ನೀಡುವ ಮೂಲಕ, ಸದರಿ ಕಟ್ಟಡವನ್ನು ನೆಲಸಮಗೊಳಿಸಿ ಗ್ರಾಮದ ಸಾರ್ವಜನಿಕರ ಉಪಯೋಗಕ್ಕೆ ಅಥವಾ ಸಮುದಾಯ ಭವನ ನಿರ್ಮಾಣಕ್ಕೆ ಉಪಯೋಗಿಸಲು ಗ್ರಾಮಸ್ಥರ ಒತ್ತಾಯವಾಗಿದೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ