ಗುಡೇಕೋಟೆ ಸೊಳ್ಳೆಗಳ ಕಾಟಕ್ಕೆ ಬೇಸತ್ತ ಜನತೆ ಶೀಘ್ರದಲ್ಲೇ ಸ್ವಚ್ಛತೆ ಕಾಣುವಂತೆ ಸ್ಥಳೀಯ ಮುಖಂಡರ ಆಕ್ರೋಶ.
ಗುಡೇಕೋಟೆ ಜೂನ್.26





ಗ್ರಾಪಂ 4 ವಾರ್ಡುಗಳಲ್ಲಿ ಬಹುತೇಕ ಚರಂಡಿಗಳು ಸಂಪೂರ್ಣವಾಗಿ ತುಂಬಿದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನ ಬೇಸತ್ತಿದ್ದಾರೆ. ಸಾಯಂಕಾಲ ಆದರೆ ಸಾಕು ಮನೆಗಳ ಹತ್ತಿರ ಸೊಳ್ಳೆಗಳ ಹಿಂಡು ಹಿಂಡುಗಳ ಸೊಳ್ಳೆ ಕಾಣಿಸಿಕೊಳ್ಳುತ್ತಿದ್ದು, ದಿನನಿತ್ಯ ಜಾಗರಣೆ ಮಾಡುವಂತಾಗಿದೆ ಎನ್ನುತ್ತಾರೆ ಸ್ಥಳೀಯರು,ಅಸ್ವಚ್ಫತೆ:- ಗ್ರಾಮಗಳ ಮತ್ತು ಬಹುತೇಕ ವಾರ್ಡಗಳ ಒಳ ಓಣಿ ರಸ್ತೆಗಳ ಮೇಲೆ ಚರಂಡಿ ನೀರು ಹರಿಯುತ್ತಿವೆ. ಮತ್ತು ಅಲ್ಲಿ ನೀರು ನಿಂತುಕೊಂಡಿದ್ದು ಸೊಳ್ಳೆಗಳ ಉತ್ಪತಿ ಜಾಸ್ತಿ ಆಗುತ್ತಿದೆ. ಚಳಿ ಸಮಯದಲ್ಲೇ ಸೊಳ್ಳೆಗಳ ಸಂತತಿ ಹೆಚ್ಚು ಮಾಡಿಕೊಳ್ಳುತ್ತವೆ. ಹೀಗಾಗಿ ಭಯಂಕರ ದೊಡ್ಡ ದೊಡ್ಡ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಹಗಲೊತ್ತಿನ ಸಮಯದಲ್ಲಿಯೂ ಕಚ್ಚುತ್ತಿವೆ. ಹೀಗಾಗಿ ನಾನಾ ರೋಗ ರುಜಿನಿಗಳು ಹರಡುವ ಭೀತಿ ಜನರಲ್ಲಿ ಆತಂಕ ಮೂಡಿಸಿದೆ.ಜಾನುವಾರುಗಳ ಮೂಕ ವೇದನೆ:- ಮನುಷ್ಯ ಏನನ್ನಾದರೂ ಮಾಡಿ ಸೊಳ್ಳೆಗಳಿಂದ ರಕ್ಷಣೆ ಮಾಡಿಕೊಳ್ಳುತ್ತಾನೆ,ಆದರೆ ಜಾನುವಾರುಗಳು ಸೊಳ್ಳೆ ಕಾಟದಿಂದ ರಕ್ತ ಹೀರುತ್ತಿರುವ ಸೊಳ್ಳೆಗಳು ಕಚ್ಚಿದ ಜಾಗದಲ್ಲಿ ರಕ್ತ ಸುರಿಸುತ್ತಿವೆ.ಗ್ರಾಪಂ ನಿರ್ಲಕ್ಷ್ಯ:-ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಪ್ರಭಾರಿ ವಹಿಸಿಕೊಂಡಿದ್ದು, ಪಂಚಾಯಿತಿಗೆ ಯಾವಾಗ ಬಂದು ಹೋಗುತ್ತಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಇದ್ದರೂ ಸಾರ್ವಜನಿಕರಿಗೆ ಇಲ್ಲದಂತಾಗಿದೆ.ಗ್ರಾಮದ ಬಹುತೇಕ ವಾರ್ಡಿನಲ್ಲಿ ಚರಂಡಿಗಳು ಹಾದು ಹೋಗಿದ್ದು, ನೀರು ನಿಂತಲ್ಲೇ ನಿಂತಿದೆ, ಹೀಗಾಗಿ ಸೊಳ್ಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ನರಕಯಾತನೇ ಅನುಭವಿಸುತ್ತಿದ್ದಾರೆ. ಕೂಡಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಇತ್ತ ಗಮನಹರಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಪಾಗಿಂಗ್ ಮಾಡಿಸಬೇಕು, ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಓಣಿಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ ನೀರು ನಿಲ್ಲದಂತೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಗ್ರಾಮ ಪಂಚಾಯತಿಯಲ್ಲಿ ಸೊಳ್ಳೆ ನಿಯಂತ್ರಣ ಮಾಡುವ ಫಾಗಿಂಗ್ ಯಂತ್ರ ಇದೆ.ಆದರೆ ನಮಗೆ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ,ಇದು ನಮ್ಮ ಗಮನಕ್ಕೆ ಬಂದಿದ್ದಿಲ್ಲ ಈಗ ಗಮನಕ್ಕೆ ಬಂದಿದ್ದು, ಆರೋಗ್ಯ ಇಲಾಖೆಯವರು ಪತ್ರ ಕಳಿಸಿದರೆ ನಾಳೆ ಅಥವಾ ನಾಡಿದ್ದು ಫಾಗಿಂಗ್ ಮಾಡಿಸುತ್ತೇವೆ ಎನ್ನುತ್ತಾರೆ, ಸಿಬ್ಬಂದಿವರಾದ ಗೊಂಚಿಗಾರ್ ಪವಿಮಲ್ಲಿಕಾರ್ಜುನ,ಗ್ರಾಪಂ,ಡಾಟ ಎಂಟ್ರಿ ಆಪರೇಟರ್.ಈಗಾಗಲೇ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಸೊಳ್ಳೆ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದೇವೆ,ಎಲ್ಲಾ ಗ್ರಾಪಂ ಗಳಿಗೆ ಮುಂಜಾಗ್ರತಾ ಕ್ರಮವಾಗಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ವಹಿಸಲು ಪತ್ರ ಕಳಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸೈಯದ್ ವಹಾಬ್ ಹಿರಿಯ ಆರೋಗ್ಯ ನೀರಿಕ್ಷಕರು,ಪ್ರಾಥಮಿಕ ಆರೋಗ್ಯ ಕೇಂದ್ರ,ಗುಡೇಕೋಟೆ ತಿಳಿಸಿರುತ್ತಾರೆ. ಗುಡೇಕೋಟೆ ಭಾಗದ ಸಾರ್ವಜನಿಕರು ಸೊಳ್ಳೆಗಳ ನಾನಾ ರೀತಿಯ ಜ್ವರಗಳು ಮೈ ತಿಂಡಿ ಹೀಗೆ ಅನೇಕ ರೋಗರುಜನಗಳ ಖಾಯಿಲೆಗೆ ಜನರು ತುತ್ತಾಗುವ ಆತಂಕದಲ್ಲಿದ್ದಾರೆ, ಹಾಗೆ ಪ್ರತಿದಿನ ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದಾರೆ, ಈ ವಿಷಯವಾಗಿ ಪಂಚಾಯತಿ ಅಧಿಕಾರಿಗಳಿಗೆ ಗಮನಹರಿಸಿದರೆ ಅಧಿಕಾರಿಗಳ ನಿರ್ಲಕ್ಷದ ಮಾತುಗಳನ್ನಾಡುತ್ತಾ ಗ್ರಾಮ ಪಂಚಾಯತಿಯವರು ಗುಡೇಕೋಟಿಯ 4 ವಾರ್ಡ್ ಗಳಲ್ಲಿ ಚರಂಡಿಗಳು ಸಂಪೂರ್ಣವಾಗಿ ಕಸ ಕಡ್ಡಿ ಕೊಳಕು ಗಂಜಿನಿಂದ ಕೂಡಿದ್ದು ಸೊಳ್ಳೆಗಳ ಉತ್ಪತ್ತಿಗೆ ತಾಣವಾಗಿದೆ ಸ್ವಚ್ಛ ಮಾಡದೇ ಇರುವುದಕ್ಕೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಇಡೀ ಶಾಪ ಹಾಕುತ್ತಿದ್ದಾರೆ, ಗ್ರಾಪಂ ಯವರ ಸ್ವಚ್ಛತೆಯ ನಿರ್ಲಕ್ಷತನಕ್ಕೆ ಸ್ಥಳೀಯರ ಮುಖಂಡರಗಳಾದ ಸಿ. ಜಯರಾಮ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದು ಏನೇ ಇರಲಿ ಗುಡೇಕೋಟೆಯ ಜನತೆಯ ಆರೋಗ್ಯದ ಹಿತಾದೃಷ್ಟಿಯಿಂದ ಎರಡು ಇಲಾಖೆಯವರಿಗೆ ಕೇಳಿಕೊಳ್ಳುವುದಿಷ್ಟೆ, ಶೀಘ್ರದಲ್ಲೇ ಗುಡೇಕೋಟೆ ಗ್ರಾಮದ ಎಲ್ಲಾ ವಾರ್ಡುಗಳಲ್ಲಿ ಸ್ವಚ್ಛತೆ ಮಾಡುವುದರೊಂದಿಗೆ ಸೊಳ್ಳೆಗಳ ಕಡಿತದಿಂದ ಮುಕ್ತರಾಗಬೇಕು ಎಂದು ತಿಳಿಸಿರುತ್ತಾರೆ, ಸಂಬಂಧಿಸಿದ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಮಾಡುವುದು ಬಿಟ್ಟು, ಮೇಲೊಂದು ಮಾತು ಹೇಳದೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮಗಳಲ್ಲಿ ದುರಾವಸ್ಥೆ ಇರುವುದನ್ನು ಸ್ವಚ್ಫತೆ ಮಾಡಿಸಿ ಸೊಳ್ಳೆ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರವೇ ಗುಡೇಕೋಟೆ ಗ್ರಾಮ ಘಟಕದ ಅಧ್ಯಕ್ಷರಾದ ಜೆ ಶಿವಕುಮಾರ್ ಇವರು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು : ರಾಘವೇಂದ್ರ.ಸಾಲುಮನಿ.