ತರೀಕೆರೆಯಲ್ಲಿ ಅದ್ದೂರಿಯಾಗಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ

[6/27, 21:36] Maruti Hosamani Sk News Kannada: ತರೀಕೆರೆ ಜೂನ್.27

ಇಂದು ತರೀಕೆರೆ ಪಟ್ಟಣವೆಲ್ಲವೂ ತಳಿರು ತೋರಣಗಳಿಂದ ಸಿಂಗಾರಗೊಂಡು ಹಬ್ಬದ ವಾತಾವರಣ ನಿರ್ಮಾಣವಾಗಿರುವುದಕ್ಕೆ ತಾಲೂಕು ಒಕ್ಕಲಿಗರ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಒಕ್ಕಲಿಗ ಮುಖಂಡರೆಲ್ಲರ ಒಮ್ಮತದ ಸಹಕಾರವೇ ಮುಖ್ಯ ಕಾರಣ ಎಂದು ಶಾಸಕ ಜಿ. ಎಚ್. ಶ್ರೀನಿವಾಸ್ ಹೇಳಿದರು . ತಾಲೂಕು ಆಡಳಿತ, ಕನ್ನಡ ಸಂಸ್ಕೃತಿ ಇಲಾಖೆ,ಹಾಗೂ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಮಂಗಳವಾರ ನಡೆದ ನಾಡಪ್ರಭು ಕೆಂಪೇಗೌಡರ 514ನೇ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ಕೆಂಪೇಗೌಡರು ಕೇವಲ ಒಕ್ಕಲಿಗ ಸಮಾಜಕ್ಕೆ ಸೀಮಿತವಾದ ವರಾಗದೆ ಎಲ್ಲಾ ಸಮಾಜದವರ ಅಭಿವೃದ್ಧಿಗೂ ಕಾರಣವೆನ್ನುವುದಕ್ಕೆ ಬೆಂಗಳೂರಿನಲ್ಲಿ ಎಲ್ಲಾ ಸಮುದಾಯದವರಿಗು ಕಲ್ಪಿಸಿರುವ ಮೂಲಭೂತ ಸೌಲಭ್ಯಗಳೆ ಉದಾಹರಣೆಯಾಗಿದ್ದು, ಪ್ರಪಂಚವೇ ಬೆಂಗಳೂರಿನತ್ತ ತಿರುಗಿ ನೋಡುವಂತೆ ಮಾಡಿದ ಮಹನೀಯರಾಗಿದ್ದು ಸರ್ಕಾರ ದೇವನಹಳ್ಳಿಯಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಿ ಗೌರವಿಸಿರುವುದು ಸೂಕ್ತವಾದದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಕಾಂಗ್ರೆಸ್ ಮುಖಂಡ ಬೀರೂರು ಎನ್ ದೇವರಾಜ್ ಮಾತನಾಡಿ ಪ್ರಪಂಚದಲ್ಲಿ ಸರಿ ಸುಮಾರು 252 ದೇಶಗಳಿದ್ದು ಅವುಗಳಲ್ಲಿ ಭಾರತದ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಕೆಂಪೇಗೌಡರ ದೂರ ದೃಷ್ಟಿ ಮತ್ತು ಮಾರ್ಗದರ್ಶನವೇ ಮುಖ್ಯ ಕಾರಣವಾಗಿದೆ. ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡ ಅಗತ್ಯ ಕಾರ್ಯಕ್ರಮಗಳೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದ್ದು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿಯವಲ್ಲಿ ಒಕ್ಕಲಿಗ ಮುಖಂಡರ ಪರಿಶ್ರಮ ಅಪಾರವಾಗಿದ್ದು ಇತರೆಲ್ಲ ಸಮಾಜದ ಮುಖಂಡರಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ತರೀಕೆರೆ ತಾಲೂಕಿನಾದ್ಯಂತ ಕೆಂಪೇಗೌಡ ಜಯಂತಿ, ಕನಕ ಜಯಂತಿ,ಬಸವ ಜಯಂತಿ, ಮುಂತಾದ ಜಯಂತಿಗಳನ್ನು ಒಟ್ಟಾಗಿ ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು. ಬೆಂಗಳೂರಿನಲ್ಲಿ 1537ನೇ ಸಾಲಿನಲ್ಲಿ ದಿಂಡಿ ದೇವರೆಂಬ ಕಾರ್ಯಕ್ರಮ ನಡೆಸುತ್ತಾ ಮದುವೆಯ ವಯಸ್ಸನ್ನು ಮೀರಿದ ಯುತಿಯರಿಗೆ ದೇವರ ಹೆಸರಿನಲ್ಲಿ ಎಡಗೈನ ಎರಡು ಬೆರಳುಗಳನ್ನು ಕತ್ತರಿಸುವ ಮೂಡನಂಬಿಕೆ, ಗೊಡ್ಡು ಸಂಪ್ರದಾಯವನ್ನು ತಡೆಯುವ ಮೂಲಕ ನಾಡಪ್ರಭು ಕೆಂಪೇಗೌಡರು ಮೌಡ್ಯದ ವಿರುದ್ಧವಾದ ನಿಲುವನ್ನು ಅಂದೆ ಹೊಂದಿದ್ದರು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯದ ಗೀತಾ ಶಂಕರ್ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡ ಹಬ್ಬಗಳ ಸಮಿತಿ ಅಧ್ಯಕ್ಷರಾದ ಸಿಎಸ್ ಪೂರ್ಣಿಮಾ ಅವರು ವಹಿಸಿದ್ದರು, ಸಿಡಿಪಿಓ ಜ್ಯೋತಿ ಲಕ್ಷ್ಮಿ, ಪುರಸಭಾ ಅಧ್ಯಕ್ಷರಾದ ಕಮಲ ರಾಜೇಂದ್ರ, ಪುರಸಭಾ ಮುಖ್ಯ ಅಧಿಕಾರಿ ಮಹಾಂತೇಶ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಪೂರ್ಣೇಶ್, ತಾಲೂಕು ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಕೆ ಸಿ ನಿಂಗೇಗೌಡ, ತಾಲೂಕು ಅಧ್ಯಕ್ಷರಾದ ಟಿ ಎಂ ಉಮಾಶಂಕರ್, ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷ ರಾಜೇಶ್ವರಿ ನಂದಕುಮಾರ್, ತಾಲೂಕಿನ ಒಕ್ಕಲಿಗ ಸಮುದಾಯದ ಮುಖಂಡರು ಮುಂತಾದವರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಹೊರವಲಯದಲ್ಲಿರುವ ಲಕ್ಕವಳ್ಳಿ ಕ್ರಾಸಿನಲ್ಲಿರುವ ಕೆಂಪೇಗೌಡ ವೃತದಿಂದ ಗ್ರಾಮ ದೇವತೆ ಬನಶಂಕರಿ ದೇವಾಲಯದವರೆಗೆ ನೂರಾರು ಬೈಕುಗಳ ರ್‍ಯಾಲಿ ನಡೆಸಿ ನಂತರ ಎಪಿಎಂಸಿ ಮಾರುಕಟ್ಟೆ ಯಿಂದ ಗಾಂಧಿ ವೃತ್ತದ ವರೆಗೆ ಕೆಂಪೇಗೌಡ ಮೂರ್ತಿ ಮೆರವಣಿಗೆ ನಡೆಸಿ ಅಂಬೇಡ್ಕರ್ ಭವಧದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button