ಗೃಹಲಕ್ಷ್ಮಿ.
![](https://i0.wp.com/sknewskannada.in/wp-content/uploads/2023/06/IMG-20230628-WA0004.jpg?resize=474%2C320&ssl=1)
ತವರಿಗೆ ಹೋದರ ತಿಂಗಳ ಇರತಾಳ
ಎನಗ ತಂಗಳ ರೊಟ್ಟಿ ಮಾಡೀಡತಾಳ
ಸರದಿ ಸಂಚಾರ ಮಾಡತಾಳ ನನ್ನಬಾಳೆ
ನನ್ನ ಹೆಂಡ್ತಿ ಅದಾಳ ಕೇಳ್ರಿ ಬಾಳಬೇರಿಕಿ
ಏನಾರಂದ್ರ ನಾನೊಬ್ಬ ಉದ್ರಿಯ ಗಿರಾಕಿ
ಅಕ್ಕನ ಮಗಳ ಸೊಕ್ಕಿನ ಬಾಯಿಬಡಕಿ
ಬೆಳಗೆದ್ದು ಹೋರಟಾಳ ಬ್ಯೂಟಿ ಪಾರ್ಲರ್
ಗುರುತ ಹಿಡಿಲಿಲ್ಲಂತೆ ಅವಳ ಮೊಬೈಲ್
ಸಂಜೆಯ ಹೊತ್ನಾಗ ಸರದಿಯ ಸೀರಿಯಲ್
ಊಟಕ್ಕ ನಮಗೆ ಹೊಟ್ಟೆಗೆ ತಣ್ಣೀರ ಬಟ್ಟೆ
ಅಡುಗೆನೆ ಬರುದಿಲ್ಲೆಂದಾಳ ರಿ ನನ್ನ ಚಿಟ್ಟೆ
ಕೇಳಿದ್ರ ಅವರಪ್ಪ, ಕೊಟ್ಟ ಪಾರ್ಸಲ್ ರೊಟ್ಟಿ
ತವರೂರ ತೇರೈತೆ ನನಗಿಲ್ಲಾವ ಬೀಲ್ಲ್
ಗೃಹಲಕ್ಷ್ಮಿ ಗುಲಾಬಿ ನೋಟೈತಿ ನನ್ನಲ್ಲಿ
ತವರಿಗೆ ಹೊಂಟ್ರ ಹಾಕಿದಳಿಂಗ ಈ ಕೀಲ
ಮುದ್ದಾಗಿ ತಿದ್ದಿದರ, ತಂದೆನ್ರಿ ನಾ ಚೀಲ
ಅಂತೇಳೆ ರೈಸ್, ನೈಸ್ ಮಾಡ್ಕೋಟ್ಟಾಳ
ಸಿಟ್ಟಾಗಿ ನನ್ನೆಂಡ್ತಿ ತವರಿಗೆ ಹೊಂಟಾಳ
ರಚನೆ: ಎನ್.ಎಸ್. ಹಾಲವಾರ(ಸರೂರ)