ಶರಣರ ನಡೆ ನುಡಿ ಮುದ ನಿದುವಂತವು.

ವಿಜಯಪುರ ಜೂನ್.29

ಶರಣರ ನಡೆ-ನುಡಿಗಳು ಎಂದೆಂದಿಗೂ ಮಲಿನವಾಗದವುಗಳು’. ಅವು ಯಾವಾಗಲೂ ಮುದ ನೀಡುವಂತವುಗಳು. ಅವುಗಳ ಸಾರವನ್ನು ಅರ್ಥೈಸಿಕೊಂಡಾಗ ಬದುಕಿನಲ್ಲಿ ಆತ್ಮ ಸಾಕ್ಷಾತ್ಕಾರ ಪಡೆಯಲು ಸಾಧ್ಯವಾಗುತ್ತದೆ. ಅಲ್ಲಮಪ್ರಭು, ಬಸವಣ್ಣ, ಸಿದ್ಧರಾಮ, ಮುಕ್ತಾಯಕ್ಕ, ಮಹಾದೇವಿಯಕ್ಕ ಇವರ ಸಂಕ್ಷಿಪ್ತ ಚರಿತ್ರೆಯೊಂದಿಗೆ ಒಬ್ಬೊಬ್ಬರದೇ ಆದ 25 ಶರಣರ ಒಂದೊಂದು ಪ್ರಾತಿನಿಧಿಕ ವಚನವನ್ನು ಆಯ್ಕೆಮಾಡಿಕೊಂಡು ಸಾಮಾನ್ಯನಿಗೂ ತಿಳಿಯುವ ರೀತಿಯಲ್ಲಿ ಡಾ. ವಿ.ಡಿ.ಐಹೊಳ್ಳಿಯವರು ರಚಿಸಿದ್ದಾರೆ. ಅವರ ‘ವಚನ ನಿರೂಪಣ’ ಕೃತಿ ಬಿಡುಗಡೆ ಮಾಡಿದೆ. ಹಿರಿಯ ಪ್ರಾಧ್ಯಾಪಕರಾದ ಪ್ರೊ. ಸಿ.ಆರ್.ಯರವಿನತೇಲಿಮಠ, ಕ.ವಿ.ವಿ.ಧಾರವಾಡ ಅವರು ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಆಯೋಜಿಸಿದ ‘ಚಿಂತನ ಸಾಂಸ್ಕøತಿಕ ಬಳಗದ’ ವತಿಯಿಂದ ಅನುಭಾವದ ನೆಲೆಯಲ್ಲಿ ಹೃದಯಸ್ಪರ್ಶಿಯಾಗಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ವಿಜಯಪುರದೊಂದಿಗೆ ಇರುವ ಒಡನಾಟವನ್ನು ಹಂಚಿಕೊಂಡರು.ಶರಣರು ತೋರಿದ ದಾರಿಯಲ್ಲಿ ನಡೆದವರು, ಬಹುಭಾಷಾ ಪಂಡಿತರು, ಕನ್ನಡದಿಂದ-ಇಂಗ್ಲಿಷ, ಇಂಗ್ಲೀಷದಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ಯರವಿತೇಲಿಮಠರವರ ಸಾಧನೆ ಅಪ್ರತಿಮ, ಇಂತಹ ಇಳಿ ವಯಸ್ಸಿನಲ್ಲಿಯೂ ಕೂಡಾ ನಮ್ಮೊಂದಿಗೆ ಬಂದು ಡಾ. ಐಹೊಳ್ಳಿಯವರ ಗ್ರಂಥ ಬಿಡುಗಡೆ ಮಾಡಿದ್ದು ಒಂದು ಯೋಗಾಯೋಗವೆಂದು ಅತಿಥಿ ಸ್ಥಾನದಿಂದ ಪ್ರೊ ಎನ್.ಜಿ.ಕರೂರ ಅವರು ಮಾತನಾಡಿದರು.ಪ್ರೊ. ಯರವಿನತೇಲಿಮಠ ನನ್ನ ವಿದ್ಯಾಗುರುಗಳು. ನನ್ನ ಪಿಎಚ್.ಡಿ.ಗೆ ಮಾರ್ಗದರ್ಶಕರಾಗಿ ಉತ್ತಮ ಕಾರ್ಯನಿರ್ವಹಿಸಲು ತಿಳಿಸಿದ್ದರಲ್ಲದೆ ಸಂದರ್ಭಕ್ಕೆ ತಕ್ಕಂತೆ ಸಹಾಯ-ಸಹಕಾರ ನೀಡಿ ಗೌರವಿಸಿದವರು. ಅವರ ಉಪಕಾರ ಚಿರಸ್ಮರಣೀಯ. ಡಾ. ಐಹೊಳ್ಳಿಯವರ ‘ವಚನ ನಿರೂಪಣ’ ಕೃತಿಯಲ್ಲಿ 25 ಜನ ವಚನಕಾರರ ಪರಿಚಯ ಮತ್ತು ಒಂದೊಂದು ವಚನದಲ್ಲಿ ಭಾಷೆಯ ಸೊಗಡು, ಅವುಗಳ ಅರ್ಥ ಮತ್ತು ಅನುಭಾವಗಳನ್ನು ಹಿಡಿದಿಟ್ಟಿರುತ್ತಾರೆ. ಅವರ ಕೃತಿ ಓದಲು ತುಂಬಾ ಮೆಚ್ಚುಗೆ ಪಡೆಯುವಂತಹದೆಂದು ಅಧ್ಯಕ್ಷಸ್ಥಾನ ವಹಿಸಿ ಡಾ. ಆರ್.ಕೆ.ಕುಲಕರ್ಣಿಯವರು ಮಾತನಾಡಿದರು.ಪ್ರಾರಂಭದಲ್ಲಿ ಶ್ರೀ ಬಿ.ಎಂ.ಪಾಟೀಲ ವಚನಗಾಯನ ಮಾಡಿದರು. ಡಾ. ಎಂ.ಎಸ್.ಮದಭಾವಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಡಾ. ಕೃಷ್ಣ ಕೊಲ್ಹಾರಕುಲಕರ್ಣಿಯವರು, ಪ್ರೊ. ಸಿ.ಆರ್.ಯರವಿನತೇಲಿಮಠರವರನ್ನು ಡಾ. ಫ.ಗು.ಹಳಕಟ್ಟಿ ಕೇಂದ್ರದಿಂದ ಸನ್ಮಾನಿಸಿದರು. ಕೊನೆಗೆ ಡಾ. ವಿ.ಡಿ.ಐಹೊಳ್ಳಿ ವಂದಿಸಿದರು. ಪ್ರೊ. ಎ.ಬಿ.ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಆಯ್.ಎಸ್.ಕಾಳಪ್ಪನವರ, ವಿ.ಸಿ.ನಾಗಠಾಣ, ಎಂ.ಜಿ.ಯಾದವಾಡ, ಜಂಬುನಾಥ ಕಂಚ್ಯಾಣಿ, ಡಾ. ವಿ.ವಿ.ಮಳಗಿ, ಜಿ.ಬಿ.ಸಾಲಕ್ಕಿ, ಪ್ರೊ. ಬಿ.ಎಸ್.ದೊಡಮನಿ ದಂಪತಿಗಳು, ಚಂದ್ರಶೇಖರ ಸಿಂಧೂರ, ಸಿದ್ಧಲಿಂಗಪ್ಪ ವಡವಡಗಿ, ಎಸ್.ಎಂ.ಹದಿಮೂರ, ಸಂಗಮೇಶ ಬದಾಮಿ, ಚೈತನಾ ಸಂಕೊಂಡ, ನಿರ್ಮಲಾ ಸುಂಠಾಣ, ಲಕ್ಷ್ಮೀ ಮೊರೆ, ಶಾರದಾ ಐಹೊಳ್ಳಿ, ಡಾ. ಆನಂದ ಸುಂಠಾಣ, ಡಾ. ಸನ್ಮಿತ್ರ ಐಹೊಳ್ಳಿ, ಪ್ರೊ. ತೇಲಿ, ಎ.ಜಿ.ಅಳ್ಳಗಿ, ಸಂಗಪ್ಪ ಶಿವಣಗಿ, ದೊಡ್ಡಣ್ಣ ಬಜಂತ್ರಿ, ಬಿ.ಕೆ.ಗೋಟ್ಯಾಳ, ಶರಣಗೌಡ ಪಾಟೀಲ, ಡಾ. ಎಂ.ಎಸ್.ಚಾಂದಕವಟೆ, ವ್ಹಿ.ಎಸ್.ಪಾಟೀಲ, ಸುಭಾಸ ಕನ್ನೂರ, ಬಿ.ಎಚ್.ಬಾದರಬಂಡಿ, ಅಮರ ಖೇಡ, ಎಸ್.ಎಚ್.ಕಸಬೇಗೌಡ, ಅಮರೇಶ ಸಾಲಕ್ಕಿ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ. ಶಿರಗೂರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button