ಕೂಡ್ಲಿಗಿ ಬಕ್ರೀದ್ ಹಬ್ಬ:ಸಕಲ ಜೀವರಾಶಿಗಳಿಗೆ ಲೇಸನ್ನು ಕರುಣಿಸುವಂತೆ ಸಾಮೂಹಿಕ ಪ್ರಾರ್ಥನೆ.
ಕೂಡ್ಲಿಗಿ ಜೂನ್.29
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಹೊರವಲಯದಲ್ಲಿನ ಸಣ್ಣ ಹಾಗೂ ದೊಡ್ಡ ಮಸೀದಿಗಳಾದ, ಆಲೇ ಅದೀಸ್ ಜಮಾತ್ ಮತ್ತು ಸುನ್ನಿ ಜಮಾತ್ ಸಮೂಹದವರಿಂದ. ಜೂ29ರಂದು ಬೆಳಿಗ್ಗೆ 7:30ಕ್ಕೆ ಬಕ್ರೀದ್ ಹಬ್ಬದ ಪ್ರಯುಕ್ತ, ಸರ್ವರೂ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಅಖಿಲ್ ಮೌಲಾನಾರವರು ಮಾತನಾಡಿ, ಮಳೆ ಸಕಾಲಕ್ಕೆ ಬಂದಿರುವುದಿಲ್ಲ ಮಳೆ ಸಕಲ ಜೀವರಾಶಿಗಳಿಗೆ ಜೀವಜಲವಾಗಿದೆ. ಮನುಷ್ಯ ಎಷ್ಟೇ ಸಂಪಾದಿಸಿದ್ದರೂ ಕೂಡ ಹೊಟ್ಟೆಗೆ ಅನ್ನವನ್ನೇ ಸೇವಿಸೋದು, ರೈತರು ಅದನ್ನು ಬೆಳೆಯಲು ಸಕಾಲಕ್ಕೆ ಮಳೆ ಅಗತ್ಯವಿದೆ. ಸಕಾಲಕ್ಕೆ ಮಳೆ ಬೆಳೆಯಾದರೆ ಮಾತ್ರ ಜಗತ್ತು ಕ್ಷೇಮವಾಗಿರುಲು ಸಾಧ್ಯ, ಸರ್ವರೂ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಹಾಗೂ ಸದಾ ಅಲ್ಲಾಹರನ್ನು ನೆನಪಿಸಿಕೊಳ್ಳಬೇಕು ಎಂದರು. ಇಬಾದುಲ್ಲಾ ಮೌಲಾನಾ,ಮಕ್ಬುಲ್ ಮೌಲಾನಾ, ರಿಜ್ವಾನ್ ಮೌಲಾನಾ ಇದ್ದರು.
ದೊಡ್ಡ ಮಸೀದಿಯಲ್ಲಿ ಮೌಲಾನಾ ಅನ್ವರ್ ಸಾಹೇಬ್ ಮಾರ್ಗದರ್ಶನದಂತೆ, ಮಾಜಿ ಸಚಿವ ಎನ್.ಎಮ್.ನಬಿ ಸಾಹೇಬರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ಇದಕ್ಕೂ ಮುನ್ನ ಸರ್ವರೂ ತಮ್ಮ ಮನೆಗಳಲ್ಲಿ ಒತ್ತಾರೆ ಎದ್ದು ಮನೆ ಸದಸ್ಯರೆಲ್ಲ ಮಡಿ ಮುಡಿ ಹಾಗೂ ಹೊಸ ಉಡುಪುಗಳನ್ನು ಧರಿಸಿ, ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ತುಂಬಾ ಸಂಭ್ರಮದಿಂದ ಪ್ರಾರ್ಥನೆ ಸಲ್ಲಿಸಿದರು. ತದನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸರ್ವರೂ ಒಗ್ಗೂಡಿಕೊಂಡು, ಪ್ರಮುಖ ರಸ್ತೆಯ ಮೂಲಕ ಅಲ್ಲಾಹ ರನ್ನು ಜಪಿಸುತ್ತಾ ಪಟ್ಟಣದ ಹೊರವಲಯದ ಸಾಮೂಹಿಕ ಪ್ರಾರ್ಥನಾ ಮಂದಿರದೆಡೆಗೆ ನಡೆದು ಬಂದರು. ಮೌಲ್ವಿಗಳು ಮೊದಲುಗೊಂಡು ಮಹಿಳೆಯರು ಮಕ್ಕಳು ಯುವಕರು, ವೃದ್ಧರು ಸಾಮೂಹಿಕ ನಡಿಗೆಯ ಮೂಲಕ ಪ್ರಾರ್ಥನಾ ಮಂದಿರಕ್ಕೆ ದಾವಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ನಿರ್ಧೇಶನದಂತೆ, ಸಿಪಿಐ ವಸಂತ ಅಸೊದೆ ನೇತೃದಲ್ಲಿ ಪಿಎಸ್ಐ ಧನುಂಜಯ ಕುಮಾರವರು. ಗೃಹ ರಕ್ಷಕ ದಳದ ಸಹಕಾರದೊಂದಿಗೆ, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ