ವಿಠಲ ರುಕ್ಮಾಯಿ ಪಾದ ಮುಟ್ಟಿ ಪಾವನರಾದರು ಭಕ್ತಾದಿಗಳು — ಸುರೇಶ್ ಮಾಳತ್ಕರ್
ತರೀಕೆರೆ ಜೂನ್.29
ಆಷಾಢ ಏಕಾದಶಿ ಪ್ರಯುಕ್ತ ಪಟ್ಟಣದ ಎಂ ಜಿ ರಸ್ತೆಯಲ್ಲಿರುವ ಪಾಂಡುರಂಗ ವಿಠಲ ರುಕ್ಮಾಯಿ ದೇವಸ್ಥಾನದಲ್ಲಿ ದೇವರ ಪಾದ ಮುಟ್ಟಿ ನಮಸ್ಕರಿಸುವ ಕಾರ್ಯಕ್ರಮ ದಲ್ಲಿ ಪಾವನರಾದರು ಭಕ್ತಾದಿಗಳು ಎಂದು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಕೆ ಸುರೇಶ್ ಮಾಲತ್ಕರ್ ( ಸುನಿಲ್ ) ರವರು ಭಾವಸಾರ ಕ್ಷತ್ರಿಯ ದೈವ ಮಂಡಳಿ ಮತ್ತು ಭಾವಸಾರ ಕ್ಷತ್ರಿಯ ಯುವಕ ಸಂಘ, ಭಾವಸಾರ ಕ್ಷತ್ರಿಯ ಮಹಿಳಾ ಸಂಘದ ವತಿಯಿಂದ ಏರ್ಪಡಿಸಿದ್ದ, ವಿಠಲ ರುಕ್ಮಾಯಿ ದೇವರ ಪಾದ ಮುಟ್ಟಿ ನಮಸ್ಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಸ್ವಾಮಿಯ ದರ್ಶನ ಮತ್ತು ಪಾದ ಮುಟ್ಟುವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು. ತರೀಕೆರೆಯ ಸಮಸ್ತ ನಾಗರಿಕರು ಯಾವುದೇ ಜಾತಿ ಭೇದ ಇಲ್ಲದೆ ಎಲ್ಲಾ ಸಮಾಜ ಮತ್ತು ಸಮುದಾಯದ ಭಕ್ತರು ಹಾಗೂ ಸರ್ವ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಎಲ್ಲಾ ಭಕ್ತಾದಿಗಳಿಗೂ ಸಹ ಪ್ರಸಾದ ವಿನಿಯೋಗ ಮಾಡಲಾಯಿತು.
ತರೀಕೆರೆಯ ಹೆಸರಾಂತ ಭಜನಾ ಮಂಡಳಿಗಳಾದ ಭಾವಸಾರ ಕ್ಷತ್ರಿಯ ಮಹಿಳಾ ಸಂಘ, ದುರ್ಗಾಂಬ ಮಹಿಳಾ ಸಂಘ, ಶ್ರೀವಾರಿ ಭಜನಾ ಮಂಡಳಿ, ಶ್ರೀ ಕೃಷ್ಣ ಶ್ರೀ ಪತಿ ಭಜನಾ ಮಂಡಳಿ, ಯವರಿಂದ ಬೆಳಗ್ಗೆಯಿಂದ ರಾತ್ರಿಯವರೆಗೂ ಪಾಂಡುರಂಗ ವಿಠಲನ ಕೀರ್ತನೆಗಳನ್ನು ಹಾಡುವ, ಭಕ್ತಿಗೀತೆಗಳನ್ನು ಹಾಡುವ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು ಯಶಸ್ವಿಯಾಗಲು ಭಾವಸಾರ ಕ್ಷತ್ರಿಯ ದೈವ ಮಂಡಳಿ ಮತ್ತು ಭಾವಸಾರ ಕ್ಷತ್ರಿಯ ಯುವಕ ಸಂಘ, ಎಲ್ಲರ ಸಹಕಾರದಿಂದ ಯಶಸ್ವಿಗೊಳಿಸಲಾಗಿದೆ ಎಲ್ಲರಿಗೂ ಸಹ ನನ್ನ ಅಭಿನಂದನೆಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಛಾಯಾಪತಿ ಅಂಬೋರೇ,ಚಂದ್ರು ಚಿಂಬಾಳ್ಕರ್, ಮುರಳೀಧರ ಬಾಂಗ್ರೆ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ