ಬೆನ್ನುಹುರಿ.ಸೊಂಟ ನೋವಿಗೆ ಪರಿಹಾರ ಇದೆ — ಡಾll ಟಿ.ಎಂ.ದೇವರಾಜ್
ತರೀಕೆರೆ ಜೂನ್.29
ಗುಣಮುಖವಾಗುವುದಿಲ್ಲ ಎಂದು ಹಾಸಿಗೆ ಹಿಡಿದಿರುವ ರೋಗಿಗಳಿಗೆ ಚಿಕಿತ್ಸೆ ಇದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ಟಿ ಎಂ ದೇವರಾಜ್ ಹೇಳಿದರು.
ಸೇವಾ ಭಾರತಿ, ಸೇವಾಧಾಮ ಚಿಕ್ಕಮಂಗಳೂರು ಜಿಲ್ಲೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ತರೀಕೆರೆ, ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಬೆನ್ನು ಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿದು ಪಾನ ಭತ್ತ ರಾಗಿ ವಾಹನ ಓಡಿಸುವುದರಿಂದ ಮತ್ತು ಅತಿ ವೇಗದಿಂದ ಅಪಘಾತವಾಗುತ್ತದೆ.
ಪ್ರಜ್ಞ ಹೀನ ಸ್ಥಿತಿಯಲ್ಲಿ ಬಿದ್ದಿರುವ ವ್ಯಕ್ತಿಯನ್ನು ಅತಿ ಜಾಗರೂಕತೆಯಿಂದ ಹಲಗೆ ಮತ್ತು ಅಥವಾ ರಗ್ಗಿನ ಮೇಲೆ ಮಲಗಿಸಿ ಸ್ಟ್ರಕ್ಚರ್ ಮೂಲಕ ಆಸ್ಪತ್ರೆಗೆ ಸಾಗಿಸಬೇಕು. ಬೆನ್ನು ಮೂಳೆ ಅಥವಾ ಸೊಂಟದ ಮೂಳೆಗಳು, ನರಗಳಿಗೆ,ಪೆಟ್ಟಾಗಿ ಇದು ವಾಸಿಯಾಗುವುದಿಲ್ಲವೆಂದು ಮನೆಯಲ್ಲಿ ಹಾಸಿಗೆ ಹಿಡಿದು ಮಲಗಿರುವವರಿಗೆ ಸೇವಾ ಭಾರತಿ ಸಂಸ್ಥೆ ಬೆಳ್ತಂಗಡಿ ರವರು ಉಚಿತ ಆರೋಗ್ಯ ತಪಾಸಣೆ ಮತ್ತು ರೋಗಿಗಳಿಗೆ ಆಗಿರುವ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಿ ವ್ಯಾಯಾಮ ಮಾಡಿಸಿ ಅವರು ಸಹ ಎಲ್ಲರಂತೆ ವೀಲ್ ಚೇರ್ ನಲ್ಲಿ ಕುಳಿತು ಓಡಾಡುವಂತೆ ಮಾಡುತ್ತಾರೆ ಈ ರೀತಿಯ ಚಿಕಿತ್ಸೆ ಮಾಡುವುದು ತುಂಬಾ ಕಷ್ಟವಾಗಿರುತ್ತದೆ,ತಾಳ್ಮೆಯು ತುಂಬಾ ಮುಖ್ಯವಾಗಿದ್ದು ಇದರ ಉಪಯೋಗವನ್ನು ತರೀಕೆರೆ ತಾಲೂಕು ಸುತ್ತ ಮುತ್ತಲ ಬೇರೆ ಬೇರೆ ಜಿಲ್ಲೆಯವರು ಸಹ ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು.
ಸರ್ಕಾರದ ಸೌಲಭ್ಯದೊಂದಿಗೆ ಈ ಕಾರ್ಯಕ್ರಮ ಮಾಡೋಣ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ತಾಲೂಕು ವೈದ್ಯಾಧಿಕಾರಿಯಾದ ಡಾ. ಚಂದ್ರಶೇಖರ್ ರವರು ಮಾತನಾಡಿ ಕಾರ್ಮಿಕರು ಕೆಲಸ ಮಾಡುವಾಗ ಮರದಿಂದ ಬಿದ್ದು ಬೆನ್ನು ಹುರಿಯಿಂದ ನರಳುತ್ತಿರುವವರಿಗೆ ಈ ಶಿಬಿರ ಅತ್ಯವಶ್ಯಕ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾ ಭಾರತಿ ಸಂಸ್ಥೆಯ ಅಧ್ಯಕ್ಷರಾದ ಸ್ವರ್ಣ ಗೌರಿ ರವರು ಮಾತನಾಡಿ 19 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಇಂದು ತರೀಕೆರೆಯಲ್ಲಿ ಏರ್ಪಡಿಸಿರುವುದು 20ನೇ ಶಿಬಿರವಾಗಿದೆ.
ಈ ಸಂಸ್ಥೆಯ ಮೂಲ ಸಂಸ್ಥಾಪಕರಾದ ವಿನಾಯಕ ರಾವ್ ಇವರು ಸಹ ಬೆನ್ನು ಹುರಿ ಕಾಯಿಲೆಗೆ ತುತ್ತಾಗಿ ಸ್ವತಃ ನೋವು ಅನುಭವಿಸಿ ಚೇತರಿಸಿಕೊಂಡು ಈಗಲೂ ಸಹ ಅವರು ವೀಲ್ ಚೇರಿನಲ್ಲಿಯೇ ಓಡಾಡುತ್ತಾರೆ. ಬೆನ್ನುಹುರಿ ಸೊಂಟ ನೋವು, ಬೆನ್ನು ನೋವಿನಿಂದ ತೊಂದರೆಗೆ ಒಳಗಾದವರಿಗೆ ಈ ಶಿಬಿರ ಅವಶ್ಯಕತೆ ಆದರೆ ಶೇಕಡ 50ರಷ್ಟು ಜನ ಮರ, ಕಂಬ, ಹತ್ತಿ ಬೀಳುವವರು ಹೆಚ್ಚು ಹಾಸನ ಜಿಲ್ಲೆ ಕೊಡುಗು ಜಿಲ್ಲೆ, ಮಂಗಳೂರು ಜಿಲ್ಲೆ ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಜನರೇ ಈ ಕಾಯಿಲೆಗೆ ಹೆಚ್ಚಾಗಿ ತುತ್ತಾಗುತ್ತಾರೆ ಆದ್ದರಿಂದ ಅಂತವರಿಗಾಗಿ ಕಳೆದ ಐದು ವರ್ಷದಿಂದ ಸೇವಾದಾಮ ಪ್ರಾರಂಭಿಸಿ ಪುನಶ್ಚೇತನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಮಹಮ್ಮದ್ ಸಾಧಿಕ್, ಡಾ. ಚನ್ನಬಸಪ್ಪ, ಡಾಕ್ಟರ್ ಮೋಹನ್, ಡಾ. ಶ್ರೀನಿವಾಸ್, ಡಾ., ಭಾಗ್ಯಲಕ್ಷ್ಮಿ, ರೋಟರಿ ಕ್ಲಬ್ ಅಧ್ಯಕ್ಷರಾದ ದಯಾನಂದ, ಕಾರ್ಯದರ್ಶಿ ಶಶಿಕುಮಾರ್, ಫಲಾನುಭವಿ ಅಕ್ರಮ್ ಪಾಷಾ ಉಪಸ್ಥಿತರಿದ್ದು, ಫಾರ್ಮಸಿಸ್ಟ್ ಸುಮಾ ಪ್ರಾರ್ಥಿಸಿ, ಸೇವಾ ಭಾರತಿ ಸಂಸ್ಥೆಯ ಅಪೂರ್ವ ನಿರೂಪಿಸಿ, ಓಂಕಾರ ಮೂರ್ತಿ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ