ಕೊಟ್ಟೂರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ.
ಕೊಟ್ಟೂರು ಜೂನ್.30





ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈದ್ ಉಲ್ ಅದಾ ಬಕ್ರೀದ್ ಹಬ್ಬವನ್ನು ತಾಲೂಕಿನ ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಗುರುವಾರ ದಂದು ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಸಂಭ್ರಮದಿಂದ ಆಚರಿಸಿದರು.ಮುಂಜಾನೆ ಪಟ್ಟಣದ ಜಾಮಿಯಾ ಮಸೀದಿಯಿಂದ ಎಲ್ಲಾ ಮುಸ್ಲಿಂ ಬಾಂಧವರು ಜೊತೆಗೂಡಿ ಹ್ಯಾಳ್ಯ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ, ವಿವಿಧ ಮಸೀದಿಗಳ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಸಾಮೂಹಿಕ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಪರಸ್ಪರ ಶುಭಕೋರುವುದರ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.ಪಟ್ಟಣ ಈ ಬಾರಿ ಪುಟಾಣಿಗಳು, ಮಕ್ಕಳು, ಹಿರಿಯರು ವೃದ್ಧರು ಸೇರಿ ಪ್ರತಿಯೊಬ್ಬರು ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೋಲೀಸ್ ಇಲಾಖೆ ವತಿಯಿಂದ ಕೊಟ್ಟೂರು ಠಾಣೆಯ ಪಿಎಸ್ಐ ವಿಜಯ್ ಕೃಷ್ಣ ರವರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು.ಪವಿತ್ರ ಹಜ್ ಯಾತ್ರೆಯು ಇಸ್ಲಾಮಿನ ವಿಶ್ವಭ್ರಾತೃತ್ವದ ಸಂಕೇತವಾಗಿ ಹಾಗೂ ಬಲಿದಾನದ ನೆನಪಿಗಾಗಿ ಬಕ್ರೀದ್ ಆಚರಿಸಲಾಗುತ್ತದೆ .ಮಸೀದಿ ಮೌಲಾನಾ ಅವರು ತಮ್ಮ ಸಂದೇಶದಲ್ಲಿ ಬಡವರಿಗೆ ಸಂಕಷ್ಠದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಜೀವನದಲ್ಲಿ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು, ಎಲ್ಲರೂ ಪ್ರೀತಿ ಒಗ್ಗಟ್ಟಿನಿಂದ ಸೌಹಾರ್ದತೆಯಿಂದ ಸಮಾಜದಲ್ಲಿ ಶಾಂತಿಯುತವಾಗಿ ಬದುಕಬೇಕು ಎಂದು ಸಲಹೆ ನೀಡಿದರು.
.ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ ಕೊಟ್ಟೂರು