ಏಷ್ಯಾದಲ್ಲಿಯೇ ಪ್ರಥಮವಾದ ಸಂಸ್ಥೆ ಮ್ಯಾಮ್ ಕೊಸ್ — ಆರ್ ದೇವಾನಂದ
ತರೀಕೆರೆ ಜುಲೈ.1
ದುಡ್ಡಿನ ಪ್ರಲೋಭನೆಗೆ ಒಳಗಾಗುತ್ತಿದ್ದಾರೆ ಅಡಿಕೆ ಬೆಳೆಗಾರರು ಅದರಿಂದ ಹೊರಬಂದು ಸಂಸ್ಥೆಯೊಂದಿಗೆ ವ್ಯವಹರಿಸಿ ಎಂದು ಮ್ಯಾಮ್ ಕೋಸ್ ನಿರ್ದೇಶಕರಾದ ಆರ್ ದೇವಾನಂದ್ ರವರು ಶುಕ್ರವಾರ ಸಂಜೆ ಪಟ್ಟಣದ ಮ್ಯಾಮ್ ಕೋಸ್ ಗೋದಮಿನಲ್ಲಿ ಏರ್ಪಡಿಸಿದ್ದ ವ್ಯವಸ್ಥಾಪಕ ಡಾ. ರಮೇಶ್ ರವರ ಬಿಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
80 ವರ್ಷದಿಂದ ಸಂಸ್ಥೆ ರೈತರ ಸೇವೆ ಮಾಡುತ್ತಿದೆ ಏಷ್ಯಾದಲ್ಲಿಯೇ ಪ್ರಥಮವಾದ ಸಂಸ್ಥೆ ಎಂದರೆ ಮ್ಯಾಮ್ ಕೋಸ್ ಸಂಸ್ಥೆ. ನೌಕರರ ಕ್ರಿಯಾಶೀಲತೆ ಸಂಸ್ಥೆಯ ಅಭಿವೃದ್ಧಿಗೆ ಕಾರಣ, ಷೇರುದಾರರು ಸಂಸ್ಥೆಗೆ ಸ್ಪಂದಿಸಬೇಕು, ಅಡಿಕೆಗೆ ಸಮಸ್ಯೆ ಬಂದರೆ ಮ್ಯಾಮ್ ಕೋಸ್ ಸಂಸ್ಥೆ ನೇತೃತ್ವ ವಹಿಸಿ ಮಾರುಕಟ್ಟೆಯನ್ನು ಒದಗಿಸಿ ಕೊಟ್ಟಿದೆ. ಮಹಿಳಾ ಸಬಲೀಕರಣ ಮ್ಯಾಮ್ ಕೋಸ್ ನಲ್ಲಿದೆ. ಅಡಿಕೆಗೆ ಭವಿಷ್ಯ ಕಡಿಮೆ ಇದೆ ಎಂದು ಹೇಳಿದರು. ಸಂಸ್ಥೆಯ ಇನ್ನೋರ್ವ ನಿರ್ದೇಶಕರಾದ ಭದ್ರಾವತಿಯ ಭೀಮರಾವ್ ಮಾತನಾಡಿ ಒಬ್ಬ ಮನುಷ್ಯ ಎತ್ತರಕ್ಕೆ ಬೆಳೆಯಲು ಕ್ರಿಯಾಶೀಲತೆ ಇರಬೇಕು, ಮ್ಯಾಮ್ ಕೋಸ್ ಸಮಾಜದಲ್ಲಿ ಒಳ್ಳೆಯ ರೀತಿ ಬೆಳೆಯುತ್ತಿದೆ.ರೈತರಿಗೆ ಸಹಕಾರಿಯಾಗಿದೆ,ರೈತರನ್ನು ಗೌರವವಾಗಿ ಕಾಣಬೇಕು. ಡಾ. ರಮೇಶ್ ರವರು ರೈತರನ್ನು ಪ್ರೀತಿ ವಿಶ್ವಾಸದಿಂದ ಕಂಡು ವ್ಯವಹರಿಸಿ ಸಂಸ್ಥೆಯನ್ನು ಲಾಭದಾಯಕವಾಗಿ ಬೆಳೆಸಿದ್ದಾರೆ. ನೌಕರರು ಶ್ರದ್ಧೆ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಡಾ. ರಮೇಶ್ ಮಾತನಾಡಿ ರೈತರು ಅಡಿಕೆ ಬೆಳೆಗಾರರೇ ನಮ್ಮ ಅನ್ನದಾತರು ಸಾವಯವ ಕೃಷಿ ಕರ್ನಾಟಕದಲ್ಲಿ ಏಕೆ ಮಾಡಬಾರದು ಎಂಬ ಆಲೋಚನೆ ನನ್ನದು ಅದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಸಂಸ್ಥೆಯಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದೇನೆ, ತಮಿಳುನಾಡಿನ ವಿಶ್ವವಿದ್ಯಾನಿಲಯ ನನ್ನ ಸೇವೆಯನ್ನು ಗುರುತಿಸಿ ಗೌರವಯುತ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ರೈತರು ವರ್ತಕರು ಸಂಸ್ಥೆಯೊಂದಿಗೆ ವ್ಯವಹಾರ ಮಾಡಿ ಸಂಸ್ಥೆಯನ್ನು ಬೆಳೆಸಿದ್ದಾರೆ. ಪ್ರತಿಯೊಬ್ಬರೂ ಸಂಸ್ಥೆಯ ಬಗ್ಗೆ ಕಾಳಜಿ ವಹಿಸಿ ಉಳಿಸಿ ಬೆಳೆಸಿರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀಮತಿ ಲಲಿತಾ ರಮೇಶ್ ಡಾ. ರಮೇಶ ರವರನ್ನು ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗದವರು ರೈತರು, ವರ್ತಕರು, ಅಭಿನಂದಿಸಿದರು. ಪ್ರಭಾರಿ ವ್ಯವಸ್ಥಾಪಕರಾದ ಜಯಂತಿ ರವರು ಮಾತನಾಡಿ ನಿವೃತ್ತಿ ಹೊಂದಿದ ಡಾ. ರಮೇಶ್ ರವರು ಕ್ರಿಯಾಶೀಲತೆಯಿಂದ ಕೆಲಸ ಮಾಡಿ ರೈತರ, ವರ್ತಕರ,ಸಿಬ್ಬಂದಿ ವರ್ಗದವರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದು ಹೇಳಿದರು. ಶಿವಮೊಗ್ಗದ ಬ್ರಾಂಚ್ ಮೆನೇಜರ್ ಅರವಿಂದ ರವರು ಮತ್ತು ಹೊಸದುರ್ಗ ಬ್ರಾಂಚ್ ಮೆನೇಜರ್ ಮುರುಗೇಶ್ ರವರು ಮಾತನಾಡಿದರು. ಪುಷ್ಪ ಪ್ರಾರ್ಥಿಸಿ ಸ್ವಾಗತಿಸಿದರು, ಹಿಂದೂ ಕುಮಾರಿ ನಿರೂಪಿಸಿ ವಂದಿಸಿದರು .
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ