76 ನೇ. ಗಣರಾಜ್ಯೋತ್ಸವದ – ಅದ್ದೂರಿಯಿಂದ ಆಚರಣೆ.
ಕಲಕೇರಿ ಜ.26

KBLPS. HK ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕಲಕೇರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಇವರಿಂದ ಈ ಕಾರ್ಯಕ್ರಮ ನೆರವೇರಿತು.ಗ್ರಾಮ ಪಂಚಾಯಿತಿಯ ಸದಸ್ಯರಾದ ದೇವೇಂದ್ರ ಬಡಿಗೇರ್. ಮಾಜಿ ತಾಲೂಕ ಪಂಚಾಯತಿಯ ಸದಸ್ಯರಾದ ಲಕ್ಕಪ್ಪ.ಬಡಿಗೇರ್ ಇವರು ಈ ಸಂದರ್ಭದಲ್ಲಿ ಡಾ, ಬಾಬಾ ಸಾಹೇಬ್ರ ಬಗ್ಗೆ ಬಾಳ ಚೆನ್ನಾಗಿ ಮಕ್ಕಳಿಗೆ ತಿಳುವಳಿಕೆ ಹೇಳಿದರು ಇಲ್ಲಿ ಯಾವ ಜಾತಿ ಇಲ್ಲ ಎಲ್ಲಾ ಧರ್ಮ ಒಂದೇ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ತಿಳಿಸಿದರು. ಅಶೋಕ್ ಭೋವಿ. ಪರಶುರಾಮ್ ವಡ್ಡರ್. ಇರಗಂಟಿ ಬಡಿಗೇರ್. ರಮೇಶ್ ಮಾಪುಗಾರ್. ಅಪ್ಪು ವಡ್ಡರ್.ಈ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು. ಶಾಲೆಯ ಮುದ್ದು ಮಕ್ಕಳಿಂದ ಅನೇಕ ಕಾರ್ಯಕ್ರಮಗಳು ಜರುಗಿತು. ಈ ಶಾಲೆಯ ಮುಖ್ಯ ಗುರುಗಳು ಮತ್ತು ಶಿಕ್ಷಕರು ಗುರು ಮಾತೆ ಮತ್ತು ಅನೇಕ ಊರಿನ ಗಣ್ಯ ವ್ಯಕ್ತಿಗಳು ಸೇರಿ 76 ನೇ. ಗಣ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಣೆ ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ