ಪ್ರಮುಖ ಅಗ್ನಿಶಾಮಕ ಹುದ್ದೆಗೆ ಪದೋನ್ನತಿ
ಕೊಟ್ಟೂರು ಜೂನ್.30

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರಿನಲ್ಲಿ ದಿನಾಂಕ 30 ಜೂನ್ 2024ರ ಭಾನುವಾರ ಅಗ್ನಿಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎಂ ಮಂಜುನಾಥ್ ಸ್ವಾಮಿ ಅಗ್ನಿಶಾಮಕ ಹುದ್ದೆಯಿಂದ ಪ್ರಮುಖ ಅಗ್ನಿಶಾಮಕ ಹುದ್ದೆಗೆ ಪದೋನ್ನತಿಯನ್ನು ಪಡೆದು ಕೊಂಡು ಕೂಡ್ಲಿಗಿ ಅಗ್ನಿಶಾಮಕ ಠಾಣೆಗೆ ವರ್ಗಾವಣೆ ಗೊಂಡಿರುತ್ತಾರೆ.

ಹಾಗೂ ಪಿ ಮಂಜುನಾಥ್ ನಾಯಕ್ ರವರು ಅಗ್ನಿಶಾಮಕ ಹುದ್ದೆಯಿಂದ ಪ್ರಮುಖ ಅಗ್ನಿಶಾಮಕ ಹುದ್ದೆಗೆ ಕೊಟ್ಟೂರಿನಲ್ಲಿ ಪದೋನ್ನತಿ ಹೊಂದಿರುತ್ತಾರೆ.ಈ ಸಂದರ್ಭದಲ್ಲಿ ಠಾಣಾಧಿಕಾರಿ ಡಿಕೆ ಬಸವರಾಜ್ ಸಹಾಯಕ ಠಾಣಾಧಿಕಾರಿ ಜೆ ಲಕ್ಷ್ಮಿಕಾಂತ್ ಶಾಸ್ತ್ರಿ ಕೂಡ್ಲಿಗಿ ಠಾಣಾಧಿಕಾರಿ ಕೆ ಶರಣಬಸವರೆಡ್ಡಿ ಹಾಗೂ ಕೊಟ್ಟೂರಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.