ಕುಂಬಾರ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಆದ್ಯತೆ ಯಶವಂತರಾಯಗೌಡ.
ಇಂಡಿ ಜುಲೈ.2
ಕುಂಬಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಲು ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತುವೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು. ಪಟ್ಟಣದ ಬಸವರಾಜೇಂದ್ರ ದೇವಸ್ಥಾನದಲ್ಲಿ ಇಂಡಿ ತಾಲ್ಲೂಕು ಕುಂಬಾರ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ನಿಗಮಗಳು ದೇವರಾಜು ಅಭಿವೃದ್ಧಿ ನಿಗಮದ ಅಡಿ ಬರುತ್ತಿದ್ದವು. ಕುಂಬಾರ ಅಭಿವೃದ್ಧಿ ನಿಗಮ ಪ್ರತ್ಯೇಕ ಮಾಡಿರುವುದರಿಂದ ಅದಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದು.

ಕುಂಬಾರ ಸಮುದಾಯಕ್ಕೆ ಗುಡಿ ಕೈಗಾರಿಕೆಗಾಗಿ ಐದು ಎಕರೆ ಜಮೀನು ಮತ್ತು ಸಮುದಾಯ ಭವನಕ್ಕೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ಕುಂಬಾರ ಗುರುಪೀಠ ತೆಲಸಂಗದ ಬಸವ ಗುಂಡಯ್ಯ ಶ್ರೀಗಳು, ಕುಂಬಾರ ಯುವಸೇನೆಯ ರಾಜ್ಯ ಘಟಕದ ಅಧ್ಯಕ್ಷ ಶಂಕರ ಶೆಟ್ಟಿ ಕುಂಬಾರ, ಹೆಸ್ಕಾಂ ಶಾಖಾಧಿಕಾರಿ ಆರ್.ವಿ.ಕುಂಬಾರ, ಶಿವಶರಣ ಕುಂಬಾರ, ಇಂಡಿ ಕುಂಬಾರ ಸಮುದಾಯದ ಅಧ್ಯಕ್ಷ ಸತೀಶ ಕುಂಬಾರ, ಉಪಾಧ್ಯಕ್ಷ ಜಗದೀಶ ಕುಂಬಾರ ಸೇರಿದಂತೆ ಅನೇಕರು ಮಾತನಾಡಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶಿವಾನಂದ ಅಶೋಕ ಕುಂಬಾರ ಸಂಗೋಗಿ, ಗಂಗಾಧರ ಕುಂಬಾರ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಭೀಮಾಶಂಕರ ಕುಂಬಾರ, ಚನ್ನಪ್ಪ ಕುಂಬಾರ, ಕುಸ್ತಿ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಾಣಿ ಕುಂಬಾರ, 100 ಮೀ ಓಟದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿಶ್ವನಾಥ ಕುಂಬಾರ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಭಾಗ್ಯಶ್ರೀ ಕುಂಬಾರ, ಪುರಸಭೆಗೆ ಸತತ ಮೂರು ಬಾರಿ ಆಯ್ಕೆಯಾದ ದೇವೆಂದ್ರ ಕುಂಬಾರ, ಹೆಸ್ಕಾಂ ಶಾಖಾಧಿಕಾರಿ ಆರ್.ವಿ.ಕುಂಬಾರ, ಅಬಕಾರಿ ಇಲಾಖೆಯ ಮಾದವಿ ಕುಂಬಾರ, ಮಾಜಿ ಕೃಷ್ಣಾ ಕಾಡಾ ಅಧ್ಯಕ್ಷ ಬಸವರಾಜ ಕುಂಬಾರ, ನಿವೃತ್ತ ಡಿಎಸ್ಪಿ ಸೋಮನಿಂಗ ಕುಂಬಾರ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯ ಮೇಲೆ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ದೇವೆಂದ್ರ ಕುಂಬಾರ, ಭೀಮನಗೌಡ ಪಾಟೀಲ, ಶಾಂತುಗೌಡ ಬಿರಾದಾರ, ನಿವೃತ್ತ ಡಿವೈಎಸ್ಪಿ ಶಿವಲಿಂಗ ಕುಂಬಾರ ಇದ್ದರು.
ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ.ಶಿರಗೂರ