ಎಸ್.ಸಿ – ಎಸ್.ಟಿ ಓಬಿಸಿ ಬಡ ಕುಟುಂಬಗಳಿಗೆ ಮನೆ ನಿವೇಶನ ಹಾಗೂ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ.

ಹೊಸಪೇಟೆ ಜುಲೈ.2

ದಿನಾಂಕ:01/07/23 ರಂದು ದಲಿತ ಹಕ್ಕುಗಳ ಸಮಿತಿ (DHS)- ಕರ್ನಾಟಕ, ವಿಜಯನಗರ ಜಿಲ್ಲಾ ಸಮಿತಿ, ಹೊಸಪೇಟೆ ವತಿಯಿಂದ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ನೀಡಲಾಯಿತು.ವಿಜಯನಗರ ಜಿಲ್ಲೆಯ ಭವಿಷಯದ ಅಭಿವೃದ್ಧಿ ದೃಷ್ಠಿಯಿಂದ ಹೊಸಪೇಟೆ ನಗರದ ಸುತ್ತಮುತ್ತಲಿನ ಸರ್ಕಾರಿ ಭೂಮಿಗಳನ್ನು ಅಕ್ರಮ ಗಣಿಗಾರಿಕೆ ನಡೆಸಿದ ರಾಜಕಾರಣಿಗಳಿಂದ ಕಪ್ಪು ಹಣ ದಲ್ಲಾಳಿಕೋರದಿಂದ ಬ್ರಷ್ಟ ಹಾಗೂ ಭೂಗಳ್ಳ ಜನಪ್ರತಿನಿಧಿಗಳಿಂದ ರಕ್ಷಿಸಿ, ಮನೆ-ನಿವೇಶನ ಇಲ್ಲದ ಎಸ್.ಸಿ-ಎಸ್.ಟಿ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಬಡವರಿಗಾಗಿ ಹಾಗೂ ಸರ್ಕಾರಿ ಶಾಲಾ, ಕಾಲೇಜು, ಆಸ್ಪತ್ರೆ ಮುಂತಾದ ಇಲಾಖೆಗಳ ಸ್ಥಾಪನೆಗಾಗಿ 113ರಲ್ಲಿರುವ 84.86 ಎಕರೆ ಮತ್ತು ಸಂಕ್ಲಾಪುರ ಗ್ರಾಮ ಸರಕಾರಿ ಸ.ನಂ: 185/2 ಪೈಕಿ, 281.11 ಎಕರೆ ಒಟ್ಟು 365.97 ಎಕರೆ ಜಮೀನನ್ನು ಮೀಸಲಿಡಲು ಒತ್ತಾಯಿಸಿದರು.

ವಿಜಯನಗರ ಜಿಲ್ಲೆಯನ್ನೊಳಗೊಂಡ ಬಳ್ಳಾರಿ ಜಿಲ್ಲೆಯು ದೇಶದ ಮತ್ತು ಜಾಗತಿಕ ಗಮನವನ್ನು ಸೆಳೆದ ಜಿಲ್ಲೆಯಾಗಿದೆ. ಇಲ್ಲಿನ ಐತಿಹಾಸಿಕ ವಿಜಯನಗರ ಸಂಸ್ಥಾನದ ಹಂಪಿಯ ಜೊತೆಯಲ್ಲೇ ಈ ಜಿಲ್ಲೆಯಲ್ಲಿನ ಕಬ್ಬಿಣದ ಮ್ಯಾಂಗನೀಸ್ ಗಣಿಯು ಅತ್ಯಂತ ಉತ್ತಮ ಗುಣಮಟ್ಟದ ಅದಿರು ಎಂಬುದನ್ನು ಜಗತ್ತಿನ ಅನೇಕ ರಾಷ್ಟ್ರಗಳು ಗುರ್ತಿಸಿದ್ದವು. ಲಕ್ಷಾಂತರ ಕೋಟಿ ರೂಪಾಯಿಗಳ ಈ ಸಂಪತ್ತು ದೇಶದ ಮತ್ತು ರಾಜ್ಯದ ರಾಜಕೀಯ ಬದಲಾವಣೆ ಮತ್ತು ಅಕ್ರಮ ಗಣಿಗಾರಿಕೆಯ ಕಾರಣದಿಂದ ವರ್ಷಾನುಗಟ್ಟಲೆ ಜೈಲು ಪಾಲಾದ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳ ಇತಿಹಾಸವೇ ನಮ್ಮ ಮುಂದೆ ಇದೆ. ಇದೇ ಅಕ್ರಮ ಗಣಿಗಾರಿಕೆಯ ಹಣ ಈಗಲೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಹೊಸ ಬಿಕಟ್ಟುಗಳನ್ನು ಸೃಷ್ಟಿಸುತ್ತಿದೆ.ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಮೊದಲು ಮತ್ತು ನಂತರ ಅಕ್ರಮ ಗಣಿಗಾರಿಕೆಯಿಂದ ಜೈಲುವಾಸ ಅನುಭವಿಸಿ ಹೊರಬಂದಿದ್ದರೂ ಸಹ, ಇನ್ನೂ ನ್ಯಾಯಾಲಯಗಳಲ್ಲಿ ವಿವಿಧ ಹಂತಗಳಲ್ಲಿ ವಿಚಾರಣೆ ನಡೆಯುತ್ತಿದ್ದರೂ ಸಹ ಇದೇ ವ್ಯಕ್ತಿಗಳು ರಾಜಕೀಯ ಉನ್ನತ ಸ್ಥಾನಗಳಲ್ಲಿ ಮೆರೆಯುತ್ತಿದ್ದಾರೆ. ಹಣಕೊಟ್ಟು ದಾನ ಧರ್ಮಗಳನ್ನು ಮಾಡಿ, ಸಾಮಾಜಿಕ ಸ್ಥಾನ ಮಾನ, ಗೌರವಗಳನ್ನು ಪಡೆಯುತ್ತಿರುವ ಕಾರಣದಿಂದಾಗಿ ಇತ್ತೀಚೆಗೆ ಸ್ಥಳೀಯ ಕೆಲವು ಜನ ಪ್ರತಿನಿಧಿಗಳ ಮೇಲೆ ಪ್ರಭಾವ ಬೀರಿದ ಕಾರಣದಿಂದಾಗಿ ಹೊಸಪೇಟೆಯ ಕೆಲವು ನಗರಸಭಾ ಸದಸ್ಯರು ಇಂತಹದೇ ಅಕ್ರಮ ಭೂಗಳ್ಳರಾಗಿ ಪರಿವರ್ತನೆ ಹೊಂದಿದ್ದಾರೆ. ನಗರಸಭೆ ಮತ್ತು ಸರ್ಕಾರಿ ಜಾಗಗಳನ್ನು ಒಳಗೊಳಗೆ ಮಾರಾಟ ಮಾಡಿದ ಘಟನೆಗಳು ನಡೆದಿವೆ. ಕೆಲವರು ಜೈಲಿಗೆ ಸಹ ಹೋಗಿ ಬಂದಿದ್ದಾರೆ.ಅಕ್ರಮ ಭೂಗಳ್ಳರಿಂದ, ಸರಕಾರಿ ಭೂಮಿಯನ್ನು ರಕ್ಷಿಸಿ, ಬಡವರ ಮನೆ-ನಿವೇಶನಕ್ಕಾಗಿ ಮೀಸಲಿಡಲು ಪ್ರಯತ್ನಸಿದ ಅನೇಕ ಪ್ರಾಮಾಣಿಕ ಅಧಿಕಾರಿಗಳನ್ನು ರಾಜಕೀಯ ಒತ್ತಡದ ಮೂಲಕ ವರ್ಗಾವಣೆ ಮಾಡಿಸುತ್ತಿದ್ದಾರೆ. ಆದ್ದರಿಂದ ತಾವುಗಳು ವಿಜಯನಗರ ಜಿಲ್ಲೆಯ ಮತ್ತು ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ.ಹೊಸಪೇಟೆನಗರ ಜನ ವಸತಿ ಪ್ರದೇಶವನ್ನು ಹೊಂದಿಕೊಂಡಿರುವ ಶೈಕ್ಷಣಿಕ ವಲಯ ಹಾಗೂ ಆರೋಗ್ಯ ಇಲಾಖೆಯ ಆಸ್ಪತ್ರೆ ಇನ್ನಿತರ ಸರಕಾರಿ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ಹೊಂದಿಕೊಂಡಿರುವ ಜಂಭುನಾಥನಹಳ್ಳಿ ಸರ್ವೆ ನಂ: 114, 11/1, 1/3 ಮತ್ತು 113 ರಲ್ಲಿರುವ 84.86 ಎಕರೆ ಸಕಾರಿ ಜಮೀನನ್ನು ಮೆ| ‘ಹಂಪಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಎಥನಾಲ್ ಕಾರ್ಖಾನೆ ಸ್ಥಾಪಿಸಲು ಮಂಜೂರು ಮಾಡಿರುವ ಆ ದಿನಾಂಕ : 14.03.2023ರ ಉಲ್ಲೇಖಿತ 4ರ ಆದೇಶವನ್ನು ರಾಜ್ಯ ಸರ್ಕಾರ ರದ್ದು ಪಡಿಸಬೇಕು ಮತ್ತು ಈ ಜಮೀನನ್ನು ಬಡವರ ಮನೆ ನಿವೇಶನಕ್ಕಾಗಿ ಹಾಗೂ ಸರಕಾರಿ ಇಲಾಖೆಗಳ ಸ್ಥಾಪನೆಗಾಗಿ ಮೀಸಲಿಡಬೇಕು.ಹೊಸಪೇಟೆ ನಗರದ 35 ವಾರ್ಡ್‌ಗಳಲ್ಲಿ, ವಾರ್ಡ್ ಸಭೆಗಳನ್ನು ನಡೆಸಿ ಸ್ವಂತ ಮನೆ- ನಿವೇಶನ ಇಲ್ಲದ ಬಡವರನ್ನು ಗುರುತಿಸಲು ಸರ್ವೆ ನಡೆಸಬೇಕು ಮತ್ತು ಅರ್ಹರ ಪಟ್ಟಿಯನ್ನು ನಗರ ಸಭೆಯಲ್ಲಿ ಪ್ರಕಟಿಸಲು ಸೂಕ್ತ ಆದೇಶ ನೀಡಬೇಕು.ಸರಕಾರದ ಸೂಕ್ತ ಆದೇಶಗಳಿಲ್ಲದ, ನೋಟಿಫಿಕೇಷನ್ ಇಲ್ಲದ ಪ್ರದೇಶಗಳಲ್ಲಿ ಹಕ್ಕು ಪತ್ರ ನೀಡಿ ಚುನಾವಣ ಅಕ್ರಮಗಳನ್ನು ನಡೆಸಿದ ಮತ್ತು ಇದಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು.

ವಿಜಯನಗರ ಜಿಲ್ಲಾ ಪರಿಶಿಷ್ಟ ವರ್ಗದ (ಎಸ್.ಟಿ) ಜಿಲ್ಲಾ ಕಛೇರಿ ಮತ್ತು ಜಿಲ್ಲಾಧಿಕಾರಿಯನ್ನು ತಕ್ಷಣವೇ ನೇಮಿಸಬೇಕು.ತಾಲೂಕು ಮಟ್ಟದ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆ (ಎಸ್‌.ಟಿ) ಹೊಸಪೇಟೆ ಮತ್ತು ಕೂಡ್ಲಿಗಿ ತಾಲೂಕುಗಳಲ್ಲಿ ಮಾತ್ರ ಇದ್ದು, ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಇರುವುದಿಲ್ಲ. ತಕ್ಷಣ ಈ ಮೂರು ತಾಲೂಕುಗಳಲ್ಲಿ ಅಧಿಕಾರಿಗಳನ್ನು ಮತ್ತು ಕಚೇಋಇಯನ್ನು ಪ್ರಾರಂಭಿಸಿ, ಪರಿಶಿಷ್ಟ ವರ್ಗದ ಸಮುದಾಯದ ಹಿತ ಕಾಪಾಡಬೇಕು.ಹೊಸಪೇಟೆ ನಗರ ಸಭೆಯ ವತಿಯಿಂದ ಕೊಡುವ ಫಾರಂ-3 ವಿಳಂಬವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದಕಾರಣ ಫಾರಂ-3 ಆದಷ್ಟು ಶೀಘ್ರವೇ ದೊರಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕುಹೊಸಪೇಟೆ ನಗರ ಸಭೆಯ ವತಿಯಿಂದ ಕೊಡುವ ಫಾರಂ-3 ವಿಳಂಬವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದಕಾರಣ ಫಾರಂ-3 ಆದಷ್ಟು ಶೀಘ್ರವೇ ದೊರಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕುಕರ್ನಾಟಕ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಹಾಗೂ ಮುರಾರ್ಜಿ ವಸತಿ ಶಾಲಾ ಹಾಸ್ಟೆಲ್‌ನಲ್ಲಿ ಕಳೆದ 15 ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಇವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ.ತಮ್ಮ ನೂತನ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ರಾಜ್ಯದ ಮಹಿಳೆಯರ ಬದುಕಿನಲ್ಲಿ ಒಂದು ಹೊಸ ಆಶಾಭಾವನೆಯ ಭರವಸೆಯನ್ನು ಉಂಟು ಮಾಡಿದೆ. ಈ ಎಲ್ಲಾ ಗ್ಯಾರಂಟಿಗಳು ಮಹಿಳೆಯರನ್ನು ಕೇಂದ್ರವಾಗಿ ಇಟ್ಟುಕೊಂಡು ಜಾರಿ ಮಾಡುತ್ತಿರುವ ಉತ್ತಮ ಕಾರ್ಯಕ್ರಮಗಳೆಂದು ತಮ್ಮ ಸರ್ಕಾರವನ್ನು ಕೊಂಡಾಡುತ್ತಿರುವ ಈ ಸಂದರ್ಭದಲ್ಲಿ ಹಿಂದಿನ ಸರ್ಕಾರದ ಅವಧಿಯ ಸುತ್ತೋಲೆಗಳನ್ನು ಉಪಯೋಗಿಸಿಕೊಂಡು ಸಾವಿರಾರು ಮಹಿಳಾ ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ಹೊರಗೆ ಹಾಕುತ್ತಿರುವ ಸಮಾಜಕಲ್ಯಾಣ ಇಲಾಖೆಯ ಆದೇಶವು ತಮ್ಮಸರಕಾರಕ್ಕೆ ಕೆಟ್ಟ ಹೆಸರು ತರುವಂತಹ ಕಾರ್ಯವಾಗಿದೆ. ಆದ್ದರಿಂದ ತಕ್ಷಣ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕಾಗಿ ಮನವಿ ಸಲ್ಲಿಸಿದ ಈ ಸಂದರ್ಭದಲ್ಲಿ ಮುಖಂಡರು ಕಾರ್ಯದರ್ಶಿಗಳು ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ. ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button