ಪಲ್ಸ್ ಬೈಕ್ ನಲ್ಲಿ ಬಂದ ನಾಲ್ಕು ಜನ ಖದೀಮರು — 5 ಲಕ್ಷ ಬ್ಯಾಗ್ ಕಿತ್ತುಕೊಂಡು ಪರಾರಿ.
ಹುನಗುಂದ ಆಗಷ್ಟ.8

ತಾಲೂಕಿನ ಧನ್ನೂರ ಗ್ರಾಮದಿಂದ ವಿಜಯಪುರಕ್ಕೆ ಕ್ಯಾಂಟರ್ ಗಾಡಿ ಮೂಲಕ ಕಿರಾಣಿ ಸಂತೆ ತರಲು ಹೋಗುತ್ತಿದ್ದ ವೇಳೆಯಲ್ಲಿ ಎರಡು ಪಲ್ಸರ್ ಬೈಕ್‌ನಲ್ಲಿ ನಾಲ್ಕು ಜನ ಖದೀಮರು ಏಕಾಏಕಿಯಾಗಿ ಗಾಡಿ ನಿಲ್ಲಿಸಿ ಕಿರಾಣಿ ಅಂಗಡಿ ಮಾಲಿಕ ಹತ್ತಿರವಿದ್ದ ೫.೫೩ ಲಕ್ಷದ ಬ್ಯಾಗ್ ಕಿತ್ತಕೊಂಡು ಪರಾರಿಯಾದ ಘಟನೆ ಮಂಗಳವಾರ ಕೂಡಲ ಸಂಗಮದ ಕಾರ್ಸ್ ಮಾರ್ಗ ರಸ್ತೆಯಲ್ಲಿ ನಡೆದಿದೆ.ಘಟನೆಯ ವಿವರ: ಧನ್ನೂರ ಗ್ರಾಮದ ಕಿರಾಣಿ ಮಾಲೀಕ ಬಸವರಾಜ ಹುದ್ದಾರ ಕಿರಾಣಿ ಸಂತೆಗಾಗಿ ಪ್ರತಿ ಬಾರಿ ಮರೋಳ ಗ್ರಾಮದ ಕ್ಯಾಂಟರ್ ಗಾಡಿಯನ್ನು ತಗೆದುಕೊಂಡು ವಿಜಯಪುರದಿಂದ ಕಿರಾಣಿ ಸಂತೆಯನ್ನು ತರುತ್ತಿದ್ದರು.ಮಂಗಳವಾರ ಬೆಳಗ್ಗೆ ೯.೩೦ ಗಂಟೆಯ ಸರಿಸುಮಾರಿಗೆ ಕೂಡಲ ಸಂಗಮದ ಕಾರ್ಸ್ ಮಾರ್ಗದ ಮೂಲಕ ವಿಜಯಪುರಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ಮಾರ್ಗ ಮಧ್ಯೆದಲ್ಲಿ ಎರಡು ಪಲ್ಸರ್ ಬೈಕ್‌ನಲ್ಲಿ ನಾಲ್ವರು ಕಳ್ಳರು ಕ್ಯಾಂಟರ್ ಗಾಡಿಯನ್ನು ಹಿಂಬಾಲಿಸುತ್ತಾ ಬಂದು ಕ್ಯಾಂಟರ್ ಗಾಡಿಯ ಚಾಲಕನಿಗೆ ನಮ್ಮ ಬೈಕ್‌ಗೆ ಟಚ್ ಮಾಡಿ ಅಂತಾ ಧಮ್ಮಕಿ ಹಾಕಿ ಏಕಾಏಕಿ ಗಾಡಿಯನ್ನು ನಿಲ್ಲಿಸಿ ಡ್ರೆವರ್ ಕೆಳಗೆ ಇಳಿಯುತ್ತಿದ್ದಂತೆ ನಾಲ್ವರ ಖದೀಮರಲ್ಲಿ ಒಬ್ಬನು ಕ್ಯಾಂಟರ್ ಗಾಡಿ ಡ್ರೆವರ್‌ನ್ನು ಹಿಡಿದೆಳೆದು ಗಾಡಿಯ ಹಿಂದೆ ಕರದ್ಯೋದರು ಇನ್ನುಳಿದ ಮೂವರು ಖದೀಮರು ಗಾಡಿಯಲ್ಲಿ ಕುಳಿತಿದ್ದ ಕಿರಾಣಿ ಅಂಗಡಿಯ ಮಾಲೀಕ ಬಸವರಾಜ ಹುದ್ದಾರ ಇವರಿಗೆ ಮಾರಕಾಸ್ತ್ರವನ್ನು ತೋರಿಸಿ ಕೆಳಗೆ ಇಳಿಸಿ ಕಣ್ಣಿಗೆ ಖಾರದ ಪುಡಿಯನ್ನು ಎರಚಿ ಎಳೆದಾಡಿ ಅವರ ಕೈಯಲ್ಲಿದ್ದ ಸಂತೆಗಾಗಿ ತಂದಿದ್ದ ೫.೫೩ ಲಕ್ಷ ರೂ ಬ್ಯಾಗ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದು.ಇದು ದೊಡ್ಡ ಮಟ್ಟದ ರೋಡ್ ರಾಬರಿಯಾಗಿದೆ.ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ,ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ,ಸಿಪಿಐ ಸುರೇಶ ಬೆಂಡೆಗುಂಬಳ,ಪಿಎಸ್‌ಪಿ ಚನ್ನಯ್ಯ ದೇವೂರ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣವನ್ನು ದಾಖಲು ಮಾಡಿಕೊಳ್ಳುವ ಮೂಲಕ ತನಿಖೆಯನ್ನು ಮುಂದೆವರೆಸಿದ್ದು ಖದ್ದ ಖದೀಮರ ಪತ್ತೆಗೆ ಪೊಲೀಸ್‌ರು ಬಲೆ ಬೀಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಮ್. ಬಂಡರಗಲ್ಲ