ಗುರುವಿರಲು ಜ್ಞಾನಕ್ಕೆ ಕೊರತೆ ಇಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಗುರುವಿನ ಸ್ಥಾನ ಅಪಾರವಾದದ್ದು.
ಗುರುವನ್ನು ಪೂಜಿಸುತ ಮುನ್ನಡೆಯು ನೀನೆಂದು ಮರೆಯದೆಲೆ ಯಾವುದನು ನಮಿಸುತಲಿಯೆ ಸರಿಯಾದ ದಾರಿಯನು ತೋರುವರು ಜ್ಞಾನದಲಿ ನೆರಳದುವೆ ಆಗುವರು ಲಕ್ಷ್ಮಿ ದೇವಿ ಈ ಮೇಲಿನ ಮುಕ್ತ ಕದಂತೆ ಗುರುವೂ ದೇವರಿಗೆ ಸಮಾನ ಅವರ ಮಾರ್ಗದರ್ಶನದಂತೆ ಮುನ್ನಡೆಯಬೇಕು. ಮರೆಯದೆಲೆ ಯಾವುದನ್ನು ನಮಿಸುತಲಿ ನಡೆಯಬೇಕು.ಸರಿಯಾದ ದಾರಿಯನು ತೋರುವರು ಅವರೇ. ನೆರಳಂತೆ ಕಾಯುತ್ತಿರುತ್ತಾರೆ ಆದ್ದರಿಂದ ಅವರಿಗೆ ನಮಸ್ಕರಿಸಿದ ಮುಂದೆ ನಡೆಯಬೇಕು. ಶಿಕ್ಷಕರೆಂದರೆ ಗುರುವೆಂದರೆ ಬಹಳಷ್ಟು ವಿಶೇಷವಾದ ಸ್ಥಾನವನ್ನು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೀಡಿದ್ದಾರೆ. ಅವರಿಗಿರುವ ಗೌರವ ಯಾರಿಗೂ ನೀಡಲಾಗದು. ಅಂತಹ ಗುರುಪೂರ್ಣಿಮೆಯ ದಿನದಂದು ಗುರುವನ್ನು ಹೊಂದಿಸುವುದು. ಗುರುಗಳಿಗೆ ನೀಡುವಂತಹ ಗೌರವ. ಮರೆಯಲಾಗದು.ಗುರುಶಿಷ್ಯ ಬಾಂಧವ್ಯ ಶಿಕ್ಷಣ ಕಾರ್ಯದಲ್ಲಿ ನೇರವಾಗಿ ಪಾತ್ರವಹಿಸುವ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ. ಯಾವ ಶಿಕ್ಷಣ ವ್ಯವಸ್ಥೆಯಲ್ಲೇ ಆಗಲಿ ಅಧ್ಯಾಪಕರು ತಮ್ಮ ಶಿಷ್ಯವೃಂದದೊಡನೆ ಹೊಂದಿರುವ ವಿಹಿತ ರೀತಿಯ ಸಂಬಂಧ ಅದರ ಯಶಸ್ಸಿಗೆ ಪ್ರಧಾನ ಕಾರಣವಾಗಬಲ್ಲುದು. ಹಿಂದಿನಿಂದಲೂ ಶಿಕ್ಷಣವೇತ್ತರು ಒತ್ತಿಹೇಳುತ್ತ ಬಂದಿರುವ ಈ ಅಂಶವನ್ನು ಈಚಿನ ಸಂಶೋಧನೆಗಳು ದೃಢಪಡಿಸಿವೆ.ಅಧ್ಯಾಪಕವೃತ್ತಿ ಮಿಕ್ಕೆಲ್ಲ ದೇಶಗಳಿಗಿಂತ ಭಾರತದಲ್ಲಿ ಹೆಚ್ಚಿನ ಆದರ್ಶ ನೀತಿನಿಯಮಗಳನ್ನು ಪಾಲಿಸುತ್ತ ಬಂದಿರುವ ಅಂಶ ಸ್ಪಷ್ಟವಾಗಿದೆ. ಪ್ರಾಚೀನ ಕಾಲದಿಂದಲೂ ವಿದ್ಯಾವಂತರು ಬೋಧಿಸುವುದು ತಮ್ಮ ಭಾಗಕ್ಕೆ ಬಂದ ಕರ್ತವ್ಯವೆಂಬ ಅಂಶವನ್ನು ಅರಿತಿದ್ದರು. ಯಾವ ಆದಾಯ ಬರುವಂತಿಲ್ಲದಿದ್ದರೂ ಗುರುವಾದವ ತನ್ನ ಬಳಿಗೆ ಬಂದು ಶಿಕ್ಷಣ ಪಡೆಯಲಾಶಿಸುವ ಯಾವ ವಿದ್ಯಾರ್ಥಿಯನ್ನೂ ಸಾಮಾನ್ಯವಾಗಿ ನಿರಾಕರಿಸುವಂತಿರಲಿಲ್ಲ. ಹಾಗೂ ಬಡವಿದ್ಯಾರ್ಥಿಗಳಾದರೆ ಅವರ ಅನ್ನವಸತಿಗಳಿಗೂ ಇತರ ಅವಶ್ಯಕ ಸೌಲಭ್ಯಗಳಿಗೂ ಅವರೇ ವ್ಯವಸ್ಥೆ ಮಾಡಬೇಕಾಗಿತ್ತು. ಈ ಸಂಪ್ರದಾಯ ಮಧ್ಯಯುಗಗಳಲ್ಲೂ ಅನಂತರದ ದಿನಗಳಲ್ಲೂ ನಡೆದುಕೊಂಡು ಬಂತು. ಇಂದಿಗೂ ಬಂಗಾಳ, ಬಿಹಾರ ಮುಂತಾದೆಡೆಗಳಲ್ಲಿ ಇರತಕ್ಕ ಸಂಸ್ಕøತ ಮಹಾಪಾಠಶಾಲೆಗಳಲ್ಲಿ (ಟೋಲ್) ಇದನ್ನು ಕಾಣಬಹುದು. ವಿದ್ಯಾರ್ಥಿಗೆ ಇಂಥ ಸೌಕರ್ಯವನ್ನು ಏರ್ಪಡಿಸಿಕೊಟ್ಟಮೇಲೆ ಅಧ್ಯಾಪಕರು ತಡಮಾಡದೆ ಅವರ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು.

ಹಾಗೆ ಮಾಡಿದ್ದ ಪಕ್ಷದಲ್ಲಿ ಶಿಷ್ಯನ ಪಾಪವೆಲ್ಲ ಗುರುಗಳಿಗೆ ವರ್ಗವಾಗುವುದೆಂದು ಕೂರ್ಮಪುರಾಣ ಸೂಚಿಸುತ್ತದೆ. ಯೋಗ್ಯರೆನಿಸಿದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ದಾನಮಾಡದೆ ಇರತಕ್ಕ ಅಧ್ಯಾಪಕರ ಬಗ್ಗೆ ದೇವತೆಗಳು ಆಗ್ರಹಗೊಳ್ಳುವರೆಂದು ಛಾಂದೋಗ್ಯ ಉಪನಿಷತ್ತು ಎಚ್ಚರಿಸುತ್ತದೆ. ಕೆಲವು ವಿಶಿಷ್ಟ ತಂತ್ರಗಳನ್ನು ಮಾತ್ರ ವಿದ್ಯಾರ್ಥಿಯ ಯೋಗ್ಯತೆಯನ್ನು ಐದು ವರ್ಷಕಾಲ ಚೆನ್ನಾಗಿ ಪರೀಕ್ಷಿಸಿಯೇ ಬೋಧಿಸಬೇಕೆಂಬ ನಿಯಮವೇನೋ ಇತ್ತು. ವೈದ್ಯ ಶಿಕ್ಷಣಕ್ಕೆ ಆರು ತಿಂಗಳ ಕಾಲ ಪರೀಕ್ಷೆ ಮಾಡಿನೋಡಬೇಕಾಗಿತ್ತು. ಅಧ್ಯಾಪಕರೊಬ್ಬರು ವಿದ್ಯಾರ್ಥಿಗೆ ವೇದಶಿಕ್ಷಣವನ್ನು ನಿರಾಕರಿಸಿದ್ದಕ್ಕಾಗಿ ಮುಂದಿನ ಜನ್ಮದಲ್ಲಿ ವೃಕ್ಷವಾಗಿ ಜನಿಸಬೇಕಾಗಿ ಬಂದ ಕಥೆಯನ್ನು ಸ್ಮøತಿಕೌಸ್ತುಭ ಉಲ್ಲೇಖಿಸಿದೆ. ಬೃಹಸ್ಪತಿಯ ದೃಷ್ಟಿಯಲ್ಲಿ ಜ್ಞಾನದಾನ ಅತ್ಯಂತ ಹೆಚ್ಚಿನದೆನಿಸಿತ್ತು. ಕೆಲವು ಶೈಕ್ಷಣಿಕ ಕಾರಣಗಳಿಂದಾಗಿ ಕೆಲವರಿಗೆ ಬೋಧಿಸದಿರಬಹುದೆಂಬ ಅಂಶವೂ ಅಂದು ಪ್ರಚಾರದಲ್ಲಿತ್ತು. ನಿರುಕ್ತಿಯಲ್ಲಿ ತಿಳಿಸುವಂತೆ ನೈತಿಕ ಮತ್ತು ಬೌದ್ಧಿಕ ಶಕ್ತಿ ಇಲ್ಲದವರಿಗೆ, ಅದರಲ್ಲೂ ಪವಿತ್ರ ಸಾಹಿತ್ಯವೆನಿಸಿದ ವೇದಾಧ್ಯಯನಕ್ಕೆ ಅವಕಾಶ ಕೊಡಬಾರದೆಂಬ ಸಂಪ್ರದಾಯವಿತ್ತು. ಆದರೆ ಬೌದ್ಧಶಿಕ್ಷಣಪದ್ಧತಿಯಲ್ಲಿ ಮಂದಬುದ್ಧಿಯವರಿಗೂ ಶಿಕ್ಷಣವೀಯಬೇಕೆಂಬ ಸಂಪ್ರದಾಯವಿತ್ತು. ತಕ್ಷಶಿಲೆಯಲ್ಲಿ ಅಂಥ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಆದರೆ ಶಿಕ್ಷಣದಿಂದ ಹೆಚ್ಚಿನ ಪ್ರಯೋಜನ ಪಡೆಯಲಾರರೆಂಬ ಅರಿವಾದಾಗ ಅಂಥವರಿಗೆ ಶಿಕ್ಷಣವನ್ನು ಮುಗಿಸುವಂತೆ ಬುದ್ಧಿ ಹೇಳುತ್ತಿದ್ದರು. ಯಾರೇ ಎಷ್ಟೇ ಪ್ರಬುದ್ಧರಾದರೂ ಕಲಿಕೆ ಎಂಬುದು ಗುರುವಿನಿಂದಲೇ ಆಗಬೇಕು. ಆ ಗುರುವಿಗೆ ಎಂದಿಗೂ ನಮಸ್ಕರಿಸಿಯ ನಡೆಯಬೇಕು.ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ಇಷ್ಟೇ ಬೋಧನೆಯ ಶುಲ್ಕ ಕೊಡಬೇಕೆಂಬ ಯಾವ ನಿಯಮವೂ ಇರಲಿಲ್ಲ. ಅಧ್ಯಾಪಕರ ಕರ್ತವ್ಯವೇ ಬೋಧಿಸುವ ಕಾರ್ಯವಾಗಿತ್ತು. ಬಡವನೆಂಬ ಕಾರಣದಿಂದ ಯಾರಿಗೂ ಜ್ಞಾನ ಬೋಧನೆಯನ್ನು ನಿರಾಕರಿಸುವಂತಿರಲಿಲ್ಲ. ಹಾಗೂ, ತಾನು ಕಲಿತ ಜ್ಞಾನ ಜೀವನೋಪಾಯಕ್ಕೆ ಮಾತ್ರವೆಂದು ಪರಿಗಣಿಸುವವರನ್ನು ಕಾಳಿದಾಸನಂಥ ಸಾಹಿತಿಗಳೂ ಟೀಕಿಸುವವರು (ಮಾಳವಿಕಾಗ್ನಿ ಮಿತ್ರ). ಶುಲ್ಕವನ್ನು ಅಪೇಕ್ಷಿಸಿ, ನಿಗದಿಯಾದ ಹಣಕ್ಕೆ ಬೋಧಿಸುವ ಅಧ್ಯಾಪಕ ಶ್ರಾದ್ಧವೇ ಮುಂತಾದ ಕರ್ಮಗಳಿಗೆ ಆಹ್ವಾನ ಯೋಗ್ಯನಲ್ಲವೆಂದು ಸ್ಮøತಿಗಳು ಸೂಚಿಸುತ್ತವೆ. ಹಾಗೆ, ಗೊತ್ತುಮಾಡಿದ ಹಣಕ್ಕೆ ವಿದ್ಯೆ ಹೇಳಿದರೆ ಅಧ್ಯಾಪಕ ಮತ್ತು ಶಿಷ್ಯರು ಇಬ್ಬರೂ ನರಕಕ್ಕೆ ಹೋಗುವರೆಂದು ಸೌರಪುರಾಣ ಸೂಚಿಸುತ್ತದೆ. ಆದರೆ ವಿದ್ಯಾರ್ಥಿಗಳಿಂದ ಯಾವ ಪ್ರತಿಫಲವನ್ನೂ ಪಡೆಯಕೂಡದೆಂಬ ನಿಷೇಧವೇನು ಇರಲಿಲ್ಲ. ಕೇವಲ ಮುಂಚೆಯೇ ಗೊತ್ತುಮಾಡಿಕೊಂಡ ನಿಷ್ಕರ್ಷಿತ ಹಣದಾಸೆಗೆ ಪಾಠ ಹೇಳುವುದನ್ನು ಮಾತ್ರ ನಿಷೇಧಿಸಿತ್ತು. ಇಂಥ ಸಂಪ್ರದಾಯ ಪೆರಿಕ್ಲೀಸ್ ಪೂರ್ವದ ಗ್ರೀಸಿನಲ್ಲೂ ಇತ್ತು. ಗುರುಶಿಷ್ಯರ ಅನ್ಯೋನ್ಯ ಬಾಂಧವ್ಯ ಪರಸ್ಪರ ಅಭಿಮಾನ ಗೌರವಗಳ ಮೇಲೆ ರೂಪುಗೊಂಡಿರಬೇಕೇ ಹೊರತು ಆರ್ಥಿಕ ಅವಲಂಬನೆಯ ಮೇಲಲ್ಲ ಎಂಬ ಭಾವನೆ ಅಲ್ಲಿ ಪ್ರಚಾರದಲ್ಲಿತ್ತು. ಅನಂತರ ಬಂದ ಸೋಫಿಸ್ಟರು ಮಾತ್ರ ಹಣಪಡೆದು, ವಿದ್ಯಾರ್ಥಿ ಕೇಳಿದ ವಿದ್ಯೆಕಲಿಸುವ ಸಂಪ್ರದಾಯವನ್ನು ಆಚರಣೆಗೆ ತಂದರು. ಮೊದಮೊದಲು ಈ ಪರಿವರ್ತನೆಯನ್ನು ಶಿಕ್ಷಣವೇತ್ತರು ಅಲ್ಲಗಳೆದರೂ ಕ್ರಿ.ಪೂ. ಮೂರನೆಯ ಶತಮಾನದ ವೇಳೆಗೆ ಅದು ಅಲ್ಲಿ ಸಾಮಾನ್ಯ ಸಂಪ್ರದಾಯವಾಗಿ ಹೋಯಿತು. ಭಾರತದಲ್ಲಿ ಮಾತ್ರ ಸಹಸ್ರಾರು ವರ್ಷಗಳ ಹಿಂದೆ ಆರಂಭವಾದ ಈ ಸಂಪ್ರದಾಯ ಇಂದಿಗೂ ಕೆಲವು ಪಾಠಶಾಲೆಗಳಲ್ಲಿ ಉಳಿದುಕೊಂಡೇ ಬಂದಿದೆ. ಒಟ್ಟಾರೆ ಗುರುವಿನ ಸ್ಥಾನವನ್ನು ಯಾರಿಗೂ ನೀಡಲು ಸಾಧ್ಯವಿಲ್ಲ. ಕಲಿತವರು ಮರೆಯದಂತೆ ಅವರನ್ನು ಗೌರವಸಿ ನಡೆದರೆ ಯಶಸ್ಸು ಅವರಿಗೆ ಕಟ್ಟಿಟ್ಟ ಬುತ್ತಿ. ಎಂದು ಹೇಳುತ್ತಾ ಗುರು ಪೂರ್ಣಿಮಾ ದಿನ ಶುಭಾಶಯಗಳು. ಎಂದು ಹೇಳುತ್ತಾ ನನ್ನ ಲೇಖನಕ್ಕೆ ವಿರಾಮವನ್ನು ಹಾಕುತ್ತಿದ್ದೇನೆ. ಜೈ ಹಿಂದ್ ಜೈ ಕರ್ನಾಟಕ ಮಾತೆ.
ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್. ಸಾಮಾಜಿಕ ಚಿಂತಕಿ, ಶಿಕ್ಷಕಿ. ಹಾಸನ