ಮೊಳಕಾಲ್ಮೂರು ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ ಶಾಸಕರು ನಿನ್ನೆ ತಮ್ಮ ಹುಟ್ಟು ಹಬ್ಬವನ್ನು ರಾಂಪುರದಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡರು.
ಮೊಳಕಾಲ್ಮೂರು ಜುಲೈ.4

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರು ನಿನ್ನೆ ರಾಂಪುರ ಗ್ರಾಮದ ಎಲ್ಲಮ್ಮನ ಎಸ್ಟೇಟ್ ನಲ್ಲಿ ದಂಡೋಪ ದಂಡದಿಂದ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾರ್ವಜನಿಕರು ಎನ್. ವೈ. ಜಿ ಫ್ಯಾಮಿಲಿ ಕುಟುಂಬದವರು ಮತ್ತೆ ಬೇರೆ ಬೇರೆ ಜಿಲ್ಲೆಗಳಿಂದ ಚಿತ್ರದುರ್ಗ ಜಿಲ್ಲೆ ಬಳ್ಳಾರಿ ವಿಜಯನಗರ ಜಿಲ್ಲೆಯಿಂದ ಕೂಡ್ಲಿಗಿ ಮೊಳಕಾಲ್ಮುರು ಸುತ್ತಮುತ್ತಲಿನ ಗ್ರಾಮದ ನಾಗರಿಕರು ಬಂದಿದ್ದರು ಮತ್ತು ಅಧಿಕಾರಿಗಳು ನಿನ್ನೆ ಎನ್. ವೈ. ಗೋಪಾಲಕೃಷ್ಣ ಶಾಸಕರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಶಾಲು ಮತ್ತು ಕೇಕ್ ಕತ್ತರಿಸುವುದರ ಮೂಲಕ ಮತ್ತು ಫಲ ತಾಂಬೂಲ ವಿಶ್ ಮಾಡಿ ಅಲ್ಲಿ ಬಂದಿರ್ತಕ್ಕಂತ ಎಲ್ಲಾ ನಾಗರಿಕರು ಸಾರ್ವಜನಿಕರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಧಿಕಾರಿಗಳು ಸಂತೃಪ್ತಿಯಾಗಿ ವಿಧ ವಿಧವಾದ ಊಟ ಮಾಡಿದರು ಮತ್ತು ಎಲ್ಲಮ್ಮ ತಾಯಿ ತಂದೆ ಎಲ್ಲಪ್ಪ ಎಸ್ಟೇಟ್ ಮನೆ ಮುಂದೆ ಎನ್ ವೈ ಜಿ ಮತ್ತು ಎನ್ವೈಎಚ್ ಮತ್ತು ಎನ್ ವೈ ಪೆನ್ನೊಬ್ಳಿ ಸ್ವಾಮಿ ಇವರ ಫ್ಯಾಮಿಲಿಯೊಂದಿಗೆ ಎಲ್ಲಾ ಸಾರ್ವಜನಿಕರ ಜೊತೆಗೆ ಎನ್.ವೈ.ಗೋಪಾಲಕೃಷ್ಣ ಶಾಸಕರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು ಈ ಸಂದರ್ಭದಲ್ಲಿ ನಿವೃತ್ತಿ ಹೈಕೋರ್ಟ್ ನ್ಯಾಯಾಧೀಶರಾದ ಎನ್. ವೈ. ಹನುಮಂತಪ್ಪ ಇವರು ಹಿರಿಯ ಮಗ ಮತ್ತು ಎರಡನೇ ಮಗ ಎನ್ ವೈ ಪೆನ್ನು ಹೋಬಳಿ ಸ್ವಾಮಿ ಮೂರನೇ ಮಗನಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಇವರಿಬ್ಬರ ಅಣ್ಣಂದಿರಿಗೆ ಗೌರವದಿಂದ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದ ಎನ್ ವೈ ಗೋಪಾಲಕೃಷ್ಣ ಶಾಸಕರು ಬಾಳ ಸಂತೋಷದಿಂದ ಜೊತೆಯಲ್ಲಿ ಕೂತು ಊಟ ಮಾಡಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು